ಕಣ್ಣೂರಿನಲ್ಲಿ ಸಿಪಿಎಂ ನಾಯಕನ ಮನೆಗೆ ಬಾಂಬೆಸೆತ

ಕಣ್ಣೂರ್, ಅಕ್ಟೋಬರ್ 22: ಚೆರುವಾಂಚೇರಿಯ ಸಿಪಿಎಂ ನಾಯಕರೊಬ್ಬರ ಮನೆಯ ಮೇಲೆ ಬಾಂಬೆಸೆದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕುನ್ನುತ್ತುಪರಂಬ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಅಶೋಕನ್‌ರ ಮನೆಗೆ ಬಾಂಬೆಸೆಯಲಾಗಿದ್ದು, ಅಶೋಕನ್‌ರ ಗನ್‌ಮ್ಯಾನ್ ರಂಜಿತ್ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ರಂಜಿತ್‌ರನ್ನು ತಶ್ಶೇರಿಯ ಸಹಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಾಂಬೆಸೆತದಿಂದ ಅಶೋಕನ್‌ರ ಮನೆಯ ಕಿಟಕಿ ಸರಳುಗಳು ಮುರಿದಿವೆ.
ನಿನ್ನೆ ರಾತ್ರಿ ಹನ್ನೊಂದು ಮೂವತ್ತರ ವೇಳೆಯಲ್ಲಿ ದಾಳಿ ನಡೆದಿದ್ದು ಬಿಜೆಪಿಯ ಶಕ್ತಿಕೇಂದ್ರವಾದ ಚೆರುವಾಂಚರಿಯಲ್ಲಿ ಇಂತಹ ದಾಳಿಗಳು ಈ ಹಿಂದೆಯೂ ನಡೆದಿವೆ ಎಂದು ವರದಿ ತಿಳಿಸಿದೆ.
Next Story





