19 ದೇಶಗಳ ಜಿಡಿಪಿ ಮುಖೇಶ್ ಅಂಬಾನಿಯ ಸಂಪತ್ತಿಗಿಂತ ಕಡಿಮೆ

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವೇ ಆಗಿದ್ದರೂ, ಅದರ ಐದು ಬಿಲಿಯನೇರ್‌ಗಳ ಸಂಪತ್ತು ವಿಶ್ವದ ಹಲವು ದೇಶಗಳ ಜಿಡಿಪಿಯನ್ನು ಮೀರಿಸಿದೆ. ಉದಾಹರಣೆಗೆ ಭಾರತದ ಅತೀ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯನ್ನೇ ನೋಡಿ. ಅವರ 23.1 ಬಿಲಿಯನ್ ಡಾಲರ್‌ಗಳ ಆಸ್ತಿಯು 19 ದೇಶಗಳ ಜಿಡಿಪಿಗಿಂತ ಅಧಿಕ. ಈ ದೇಶಗಳಲ್ಲಿ ಭಾರತದ ನೆರೆಯ ನೇಪಾಳ ಮತ್ತು ಅಫ್ಘಾನಿಸ್ತಾನಗಳೂ ಸೇರಿವೆ. ಅಂಬಾನಿಯನ್ನು ಮೀರಿಸಲು ವಿಫಲವಾಗಿರುವ ಇತರ ದೇಶಗಳೆಂದರೆ ಕಾಂಬೋಡಿಯ, ಐಸ್‌ಲ್ಯಾಂಡ್ ಮತ್ತು ಸೈಪ್ರಸ್. ಅಲ್ಲದೆ ಭಾರತದ ಎರಡನೇ ಮತ್ತು ಮೂರನೇ ಅತೀ ಶ್ರೀಮಂತರಾಗಿರುವ ಫಾರ್ಮಾ ಟೈಕೂನ್ ದಿಲೀಪ್ ಸಾಂಘವಿ ಮತ್ತು ವಿಪ್ರೋದ ಅಜೀಜ್ ಪ್ರೇಮ್‌ಜಿ ಅವರ ಆಸ್ತಿಯೂ ಜಿಂಬಾಬ್ವೆಯ ಜಿಡಿಪಿಗಿಂತ ಅಧಿಕವಿದೆ. ಇವರಿಬ್ಬರೂ ಒಂಭತ್ತು ದೇಶಗಳ ಜಿಡಿಪಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಸ್ಟೀಲ್ ದೈತ್ಯ ಲಕ್ಷ್ಮೀ ಮಿತ್ತಲ್ 13.3 ಬಿಲಿಯನ್ ಡಾಲರ್ ಆಸ್ತಿಯು ಅಲ್ಬಾನಿಯದ 12.1 ಬಿಲಿಯ ಜಿಡಿಪಿಯನ್ನು ಮೀರಿಸಿದೆ.
ಭಾರತದ ಐವರು ಶ್ರೀಮಂತರು ವರ್ಸಸ್ ಆಯ್ದ ದೇಶಗಳ ವಾರ್ಷಿಕ ಜಿಡಿಪಿ (ಬಿಲಿಯನ್ ಡಾಲರ್‌ಗಳಲ್ಲಿ) ಮುಖೇಶ್ ಅಂಬಾನಿ (23.1)
ಟ್ರಿನಿಡಾಡ್ ಆಂಡ್ ಟೊಬಾಗೊ (22.8)
ನೇಪಾಳ(21.2)
ಹೊಂಡರಸ್(20.9)
ಜಾಂಬಿಯ (20.6)
ಸೈಪ್ರಸ್(19.9)
ಪಪುವಾ ನ್ಯೂ ಗಿನಿಯಾ(19.9)
ಐಸ್‌ಲ್ಯಾಂಡ್(19.9)
ಕಾಂಬೋಡಿಯ(19.4)
ಅಫ್ಘಾನಿಸ್ತಾನ(18.4)
ಬೋಸ್ನಿಯ ಮತ್ತು ಹರ್ಜೆಗೊವಿಯ(16.5)
ದಿಲೀಪ್ ಸಾಂಘವಿ(15.8)
ಅಜೀಜ್ ಪ್ರೇಮ್‌ಜಿ (15.4)
ಸೆನೆಗಲ್ (14.9)
ಗಾಬಾನ್ (14.6)
ಜಾರ್ಜಿಯ (14.5)
ಜಿಂಬಾಬ್ವೆ (14.2)
ಮಾಲಿ (14.1)
ಜಮೈಕ (13.8)
ಲಾವೋಸ್ (13.8)
ನಿಕಾರಗುವ (13.4)
ಲಕ್ಷ್ಮೀ ಮಿತ್ತಲ್ (13.3)
ಅಲ್ಬಾನಿಯ (12.1)
ಶಿವ ನಾಡರ್ (12.1)
ಮಾಹಿತಿ ಮೂಲ: ಫೋರ್ಬ್ಸ್, ಅಂತರರಾಷ್ಟ್ರೀಯ ಹಣಕಾಸು ನಿಧಿ
ಅಲ್ಲದೆ, ರಿಲೇಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಭಾರತದ 14 ರಾಜ್ಯಗಳಿಗಿಂತ ಶ್ರೀಮಂತ ಎನ್ನುವುದು ನಿಮಗೆ ಗೊತ್ತೆ?
ಕೃಪೆ: http://www.hindustantimes.com/







