Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ 9 ಮದುವೆಗಳ ಬಗ್ಗೆ ಕೇಳಿದರೆ ನಿಮಗೆ...

ಈ 9 ಮದುವೆಗಳ ಬಗ್ಗೆ ಕೇಳಿದರೆ ನಿಮಗೆ ಆಘಾತ ಆದೀತು

ರೆಡ್ಡಿ ಮಗಳ ಮದುವೆ ಆಮಂತ್ರಣ ನೋಡಿ ಅಚ್ಚರಿಯೆ?

ವಾರ್ತಾಭಾರತಿವಾರ್ತಾಭಾರತಿ22 Oct 2016 4:05 PM IST
share
ಈ 9 ಮದುವೆಗಳ ಬಗ್ಗೆ ಕೇಳಿದರೆ ನಿಮಗೆ ಆಘಾತ ಆದೀತು

ಭಾರತದಲ್ಲಿ ದುಬಾರಿ ಮದುವೆಗಳು ಅತೀ ಅವಾಸ್ತವಿಕ ಕಾಲ್ಪನಿಕ ರೀತಿಯಲ್ಲಿ ನಡೆಯುವುದು ಸಾಮಾನ್ಯವೇ ಆಗಿದೆ. ಇಂತಹ ಕೆಲವು ಮದುವೆಗಳ ವಿವರಗಳು ಇಲ್ಲಿವೆ.

ಗೌರವ್ ಅಸೌಮಲ್ (ಮ್ಯಾರಿಗೋಲ್ಡ್ ಸಮೂಹದ ಸಿಇಒ) ಮತ್ತು ಕಾಜಲ್ ಫ್ಯಾಬಿಯಾನಿ

ಅಂದಾಜು ವೆಚ್ಚ: ರೂ. 45 ಕೋಟಿ

ಸ್ಥಳ: ಮೊನಾಕೊ

ಮ್ಯಾರಿಗೋಲ್ಡ್ ಸಮೂಹದ ಸಿಇಒ ಗೌರವ್ ಅಸೌಮಲ್ ಮತ್ತು ಕಾಜಲ್ ಫ್ಯಾಬಿಯಾನಿಮದುವೆ ಸಮಾರಂಭದಲ್ಲಿ ಅಕಾನ್ ಮತ್ತು ಸುಖಬೀರ್ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.

ಸೀಮಂತೋ ರಾಯ್ ಮತ್ತು ಚಂದನ ತೂರ್/ ಸುಶಾಂತೊ ರಾಯ್ ಮತ್ತು ರಿಚಾ ರಾಯ್

ಅಂದಾಜು ವೆಚ್ಚ: ರು. 552 ಕೋಟಿ

ಸ್ಥಳ: ಲಖನೌ

ಅಮಿತಾಭ್ ಬಚ್ಚನ್, ಅಮರ್ ಸಿಂಗ್, ದಿಯಾ ಮಿರ್ಜಾ ಮೊದಲಾದ ವಿಐಪಿಗಳು ಹಾಜರಿರುವ ಜೊತೆಗೆ ಸುಬ್ರತೋ ರಾಯ್ ಮಕ್ಕಳಾದ ಸೀಮಂತೋ ಮತ್ತು ಸುಸಾಂತೋರ ಈ ಡಬಲ್ ಮದುವೆ ಒಂದು ಮಹತ್ತರ ಬೆಳವಣಿಗೆಯಾಗಿತ್ತು. ಮದುವೆ ಉಡುಪುಗಳನ್ನು ಸಬ್ಯಸಾಚಿ ಮುಖರ್ಜೀ ಮತ್ತು ರೋಹಿತ್ ಬಾಲ್ ಮೊದಲಾದ ದೊಡ್ಡ ವಿನ್ಯಾಸಕಾರರು ಸಿದ್ಧಪಡಿಸಿದ್ದರು. ಈ ಮದುವೆಯಲ್ಲಿ 110 ವಿಭಿನ್ನ ರೀತಿಯ ತಿನಿಸುಗಳಿದ್ದವು ಎನ್ನಲಾಗಿದೆ.

ಎಲಿಜಬೆತ್ ಹರ್ಲೆ ಮತ್ತು ಅರುಣ್ ನಾಯರ್

ಅಂದಾಜು ವೆಚ್ಚ: 2.5 ದಶಲಕ್ಷ ಡಾಲರ್

ಸ್ಥಳ: ಜೋಧಪುರ್ ಮತ್ತು ಇಂಗ್ಲೆಂಡ್

ಸಿನೆಮಾ ತಾರೆ ಎಲಿಜಬೆತ್ ಹರ್ಲೆ ಮತ್ತು ಉದ್ಯಮಿ ಅರುಣ್ ನಾಯರ್ ಮದುವೆ ಎರಡು ಸಮಾರಂಭಗಳಾಗಿ ನಡೆದಿತ್ತು. ಒಂದು ಗ್ಲೌಸ್ಟರ್‌ಷೈರ್‌ನ ಸಂಡರ್ಲೇ ಕ್ಯಾಸಲ್ ಮತ್ತು ಇನ್ನೊಂದು ಜೋಧ್ ಪುರದ ಉಮೇದ್ ಭವನ್ ಅರಮನೆಯಲ್ಲಿ ನಡೆದಿದೆ. ಈ ಮದುವೆಗೆ ಖಾಸಗಿ ಜೆಟ್‌ಗಳು, ದುಬಾರಿ ಹೊಟೇಲ್‌ಗಳನ್ನು ಬುಕ್ ಮಾಡಲಾಗಿರುವ ಸುದ್ದಿಯೂ ಇದೆ.

ವನಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯ

ಅಂದಾಜು ವೆಚ್ಚ: ರೂ. 350 ಕೋಟಿ

ಸ್ಥಳ: ವರ್ಸೈಲ್ಸ್

ಕಾಲ್ಪನಿಕ ಕತೆಗಳು ನಿಜವಾಗುವುದು ಎಂದರೆ ವನಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯ ಮದುವೆಯೇ ಎನ್ನಬಹುದು. ಲಕ್ಷ್ಮೀ ಮಿತ್ತಲ್ ಮಗಳು ವನಿಶಾ ಮತ್ತು ಅಮಿತ್ ಮದುವೆಯನ್ನು ವರ್ಸೈಲ್ಸ್‌ನ ಅರಮನೆಯಲ್ಲಿ ನಡೆಸಲಾಗಿತ್ತು. ಶಾರುಖ್ ಖಾನ್, ಖೈಲಿ ಮಿನೋಗ್, ಐಶ್ವರ್ಯಾ ರೈ ಬಚ್ಚನ್, ಅಕ್ಷಯ್ ಕುಮಾರ್, ಜ್ಯೂಹಿ ಚಾವ್ಲಾ ಮತ್ತು ಸೈಫ್ ಅಲಿ ಖಾನ್ ಈ ಮದುವೆಯಲ್ಲಿ ಪ್ರದರ್ಶನ ನೀಡಿದ್ದರು.

ಸೃಷ್ಟಿ ಮಿತ್ತಲ್ ಮತ್ತು ಗುಲ್ರಾಜ್ ಬೇಹ್ಲ್

ಅಂದಾಜು ವೆಚ್ಚ: ರೂ 500 ಕೋಟಿ

ಸ್ಥಳ: ಬಾರ್ಸಿಲೋನ

ಈ ಮದುವೆಗೆ ಹಾಕಿದ ಹಣ ಆಘಾತಕಾರಿ. ಸೃಷ್ಟಿ ಮಿತ್ತಲ್ ಭಾರತೀಯ ಸ್ಟೀಲ್ ದೈತ್ಯ ಲಕ್ಷ್ಮೀ ಮಿತ್ತಲ್ ಸೋದರ ಮಗಳು. ಈಕೆ ಗುಲ್ರಾಜ್ ಬೇಹ್ಲ್‌ರನ್ನು ಬಾರ್ಸಿಲೋನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದುವೆಯಾದಾಗ 60 ಕೆಜಿ ಕೇಕ್ ತರಿಸಲಾಗಿತ್ತು. 200ಕ್ಕೂ ಅಧಿಕ ಅಡುಗೆಯವರು ತಿನಿಸುಗಳನ್ನು ತಯಾರಿಸಿದ್ದರು.

ಬ್ರಾಹ್ಮನಿ ಮತ್ತು ರಾಜೀವ್ ರೆಡ್ಡಿ

ಅಂದಾಜು ವೆಚ್ಚ: ಇನ್ನೂ ಮದುವೆ ಆಗದ ಕಾರಣ ವಿವರ ಲಭ್ಯವಿಲ್ಲ

ಸ್ಥಳ: ಹೈದರಾಬಾದ್

ಈ ಮದುವೆಯ ಆಹ್ವಾನ ಪತ್ರಿಕೆಯನ್ನು ಅತಿಥಿಗಳಿಗೆ ಎಲ್‌ಸಿಡಿ ಸ್ಕ್ರೀನ್‌ನಲ್ಲಿ ಕೊಡಲಾಗಿದೆ. ಹಾಗಿದ್ದರೆ ಸಮಾರಂಭದ ಖರ್ಚು ಊಹಿಸಿ. ಮಾಜಿ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ ತನ್ನ ಈ ಮಗಳ ಮದುವೆಯಿಂದಾಗಿಯೇ ಈಗ ಸುದ್ದಿಯಲ್ಲಿದ್ದಾರೆ. ಈ ಆಹ್ವಾನ ಪತ್ರಿಕೆಯಲ್ಲಿ ಒಣಹಣ್ಣುಗಳು, ಅರಿಶಿಣ ಕುಂಕುಮ ಮತ್ತು ರೇಷ್ಮೆ ಬಟ್ಟೆಯ ಜೊತೆಗೆ ಆಹ್ವಾನ ಪತ್ರಿಕೆಯಿದೆ. ಅಲ್ಲದೆ ಎಲ್‌ಸಿಡಿ ಸ್ಕ್ರೀನ್ ವೀಡಿಯೊದಲ್ಲಿ ಜನಾರ್ದನ ರೆಡ್ಡಿ ಮತ್ತು ಕುಟುಂಬ ಮದುವೆಗೆ ಆಹ್ವಾನಿಸುತ್ತಿದೆ. ಈ ಹಾಡಿನ ವೀಡಿಯೊವನ್ನು ಕುಟುಂಬಕ್ಕಾಗಿಯೇ ನಿರ್ದೇಶಿಸಲಾಗಿದೆ.

ವಿಕ್ರಮ್ ಚಾಟ್ವಾಲ್ ಮತ್ತು ಪ್ರಿಯಾ ಸಚ್‌ದೇವ್

ಅಂದಾಜು ವೆಚ್ಚ: ರೂ. 100 ಕೋಟಿ

ಸ್ಥಳ: ಉದಯಪುರ್, ಮುಂಬೈ, ದೆಹಲಿ

ಈ ದುಬಾರಿ ಮದುವೆ ದೊಡ್ಡ ಹೆಡ್‌ಲೈನ್ ಮಾಡಿತ್ತು. ಹೊಟೇಲ್ ಉದ್ಯಮಿ ವಿಕ್ರಮ್ ಚಾಟ್ವಾಲ್ ಮತ್ತು ಹೂಡಿಕೆ ಬ್ಯಾಂಕರ್ ಪ್ರಿಯಾ ಸಚ್‌ದೇವ್ ವಿಶಿಷ್ಟ ಕಾರಣಗಳಿಂದ ದೊಡ್ಡ ಸುದ್ದಿಯಾಗಿತ್ತು. ಶಾರುಖ್ ಖಾನ್, ಲಕ್ಷ್ಮೀ ಮಿತ್ತಲ್, ನವೋಮಿ ಕ್ಯಾಂಪ್ಬೆಲ್ ಅತಿಥಿಗಳ ಪಟ್ಟಿಯಲ್ಲಿದ್ದರು. ಇದಕ್ಕಿಂತ ಇನ್ನೇನು ಬೇಕು?

ಪಾಯಲ್ ಬನ್ಸಲ್ ಮತ್ತು ದೀಪಕ್ ಕಾನೋಡಿಯ

ಅಂದಾಜು ವೆಚ್ಚ: ರೂ. 100 ಕೋಟಿ

ಸ್ಥಳ: ಟರ್ಕಿ

ರಿಯಲ್ ಎಸ್ಟೇಟ್ ಅಭಿವೃದ್ಧಿ ಮಾಡುವ ಬಸಂತ್ ಬನ್ಸಲ್ ಮಗಳು ಪಾಯಲ್ ಬನ್ಸಲ್ ಅವರು ದೀಪಕ್ ಕಾನೋಡಿಯರನ್ನು ಮದುವೆಯಾದರು. 30 ಅಡುಗೆಯವರು ಭಾರತದ ಮೂಲೆ ಮೂಲೆಗಳಿಂದ ಟರ್ಕಿಗೆ ಹೋಗಿ ಅಡುಗೆ ಸಿದ್ಧ ಮಾಡಿದ್ದರು.

ಲಲಿತ ತನ್ವರ್ ಮತ್ತು ಯೋಗಿತಾ ಜಾನಪುರಿಯ

ಅಂದಾಜು ವೆಚ್ಚ: ರೂ. 250 ಕೋಟಿ

ಸ್ಥಳ: ನವದೆಹಲಿ

ಕಾಂಗ್ರೆಸ್ ಸಚಿವ ಕನ್ವರ್ ಸಿಂಗ್ ತನ್ವರ್ ಮಗ ಲಲಿತ್ ತನ್ವರ್ ಯೋಗಿತಾರನ್ನು 2011ರಲ್ಲಿ ಮದುವೆಯಾದರು. ದುಬಾರಿ ಮದುವೆಯಲ್ಲಿ 429 ಹೆಲಿಕಾಪ್ಟರ್‌ಗಳನ್ನು ಉಡುಗೊರೆಯಾಗಿ ಕೊಡಲಾಗಿತ್ತು. ಇದಕ್ಕಿಂತ ಹೆಚ್ಚಿನ ವಿವರ ಬೇಕೆ?

ಕೃಪೆ: http://indiatoday.intoday.in/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X