ಬಾರಾಮುಲ್ಲಾದಲ್ಲಿ ಇಬ್ಬರು ಸ್ಥಳೀಯ ಜೈಷ್ ಉಗ್ರರ ಸೆರೆ
ಜಮ್ಮು,ಅ.22: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ಬೃಹತ್ ಕಾರ್ಯಾಚರಣೆಯಲ್ಲಿ ಬಾರಾಮುಲ್ಲಾ ಜಿಲ್ಲೆಯ ಕಾನಿಸ್ಪೋರಾ ಪ್ರದೇಶದಿಂದ ಇಬ್ಬರು ಜೈಷ್-ಎ-ಮೊಹಮ್ಮದ್ ಉಗ್ರರನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಂದು ಎಕೆ 47,ಒಂದು ಪಿಸ್ತೂಲು,ಗ್ರೆನೇಡ್ಗಳು ಮತ್ತು ಜೈಷ್ ಹಾಗೂ ಹಿಝ್ಬುಲ್ ಮುಜಾಹಿದೀನ್ ಸ್ಟಾಂಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story