ಕರಾಟೆ: ಕಲ್ಲಡ್ಕದ ಫಾದಿಲ್ ಹಾಗೂ ಫಾರಿಸ್‌ಗೆ ಪ್ರಶಸ್ತಿ

ವಿಟ್ಲ, ಅ.22: ರಾಜ್ಯಮಟ್ಟದ 2ನೆ ಕರಾಟೆ ಚಾಂಪಿಯನ್‌ಶಿಪ್ 2016ರಲ್ಲಿ 8 ವರ್ಷ ವಯೋಮಾನದ ಒಳಗಿನ ವಿಭಾಗದಲ್ಲಿ ಮುಹಮ್ಮದ್ ಫಾದಿಲ್ ಹಾಗೂ 14 ವರ್ಷದೊಳಗಿನ ವಿಭಾಗದಲ್ಲಿ ಸುಲೈಮಾನ್ ಫಾರಿಸ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ರಾಜ್ಯ ಕರಾಟೆ ಶಿಕ್ಷಕರ ಸಂಘ ಹಾಗೂ ಶೊರಿನ್-ರಿಯು ಕರಾಟೆ ಅಸೋಸಿಯೇಶನ್ ಮೂಡುಬಿದಿರೆ ಆಶ್ರಯದಲ್ಲಿ ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ, ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು, ಎಂ.ಕೆ. ಅನಂತರಾಜ್ ಶಾರೀರಿಕ ಶಿಕ್ಷಣ ಕಾಲೇಜು ಮೂಡುಬಿದಿರೆ ಇವುಗಳ ಸಹಕಾರದೊಂದಿಗೆ ಇಲ್ಲಿನ ಮಹಾವೀರ ಅಡಿಟೋರಿಯಂನಲ್ಲಿ ಇತ್ತೀಚೆಗೆ ನಡೆದ 2ನೆ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ 2016ರಲ್ಲಿ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ವಿಜೇತ ಮುಹಮ್ಮದ್ ಫಾದಿಲ್ ಹಾಗೂ ಸುಲೈಮಾನ್ ಫಾರಿಸ್ ಅವರು ಕಲ್ಲಡ್ಕದ ಬೀಡಿ ಉದ್ಯಮಿ ಕೆ.ಎಸ್.ಫಾರೂಕ್ ಮತ್ತು ಪೌಝಿಯಾ ದಂಪತಿಯ ಪುತ್ರ.
Next Story





