ಗಿಳಿಯಾರು: ಮಹಿಳೆಯ ಸರ ಅಪಹರಣ
ಕೋಟ, ಅ.22: ಗಿಳಿಯಾರು ಗ್ರಾಮದ ಪ್ರಭಾತ್ ವುಡ್ ಇಂಡಸ್ಟ್ರೀಯ ಸಮೀಪ ಅ.21ರಂದು ಸಂಜೆ 6:45ರ ಸುಮಾರಿಗೆ ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಅಪರಿಚಿತ ನೊಬ್ಬ ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಗಿಳಿಯಾರು ಹರ್ತಟ್ಟು ನಿವಾಸಿ ವಾಸುದೇವ ಮಯ್ಯ ಎಂಬವರ ಪತ್ನಿ ಮಾನಸ ಮಯ್ಯ(56) ಎಂಬವರು ಕೋಟ ಮೂರ್‌ಕೈಯಲ್ಲಿರುವ ಹಂದೆ ದೇವಸ್ಥಾನದಲ್ಲಿನ ಭಜನಾ ಕಾರ್ಯಕ್ರಮಕ್ಕೆ ಹೋಗಿ ಬಸ್ಸಿನಲ್ಲಿ ವಾಪಸ್ಸು ಬಂದು ಕೋಟ ಜಂಕ್ಷನ್‌ನಲ್ಲಿ ಇಳಿದು ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದರು. ಆಗ ಹಿಂಬದಿಯಿಂದ ಓಡಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬ ಮಾನಸ ಅವರ ಕುತ್ತಿಗೆಯಲ್ಲಿದ್ದ ಒಂದು ಲಕ್ಷ ರೂ. ವೌಲ್ಯದ 48ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಮುಂದೆ ಗುಲಾಬಿ ಬಣ್ಣದ ಶರ್ಟ್ ಹಾಗೂ ಹೆಲ್ಮೇಟ್ ಧರಿಸಿ ಚಾಲನಾ ಸ್ಥಿತಿಯಲ್ಲಿ ನಿಂತಿದ್ದ ಬೈಕ್ ಸವಾರನ ಜೊತೆಯಲ್ಲಿ ಹಿಂಬದಿ ಕುಳಿತುಕೊಂಡು ಕುಂದಾಪುರ ಕಡೆಗೆ ಪರಾರಿಯಾದ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





