ಇಂದಿನ ಕಾರ್ಯಕ್ರಮ
ಗ್ರಾಮೀಣ ಕ್ರೀಡೋತ್ಸವ: ಭಾರತೀಯ ಕೆಥೊಲಿಕ್ ಯುವ ಸಂಚಾಲನ (ಐಸಿವೈಎಂ) ಬಜಗೋಳಿ ಕೇರಾ ಘಟಕದ ವತಿಯಿಂದ ಉಡುಪಿ ಧರ್ಮ ಪ್ರಾಂತದ ಐಸಿವೈಎಂನ ಸದಸ್ಯರಿಗಾಗಿ ‘ಏಕ್ ದೀಸ್ ಗಾದ್ಯಾಂತ್’(ಒಂದು ದಿನ ಗದ್ದೆಯಲ್ಲಿ) ಗ್ರಾಮೀಣ ಕ್ರೀಡೋತ್ಸವ. ಸಮಯ: ಬೆಳಗ್ಗೆ 8:30ರಿಂದ ಸಂಜೆ 5ರವರೆಗೆ ಸ್ಥಳ: ಕೇರಾ, ಕಾರ್ಕಳ. ಕಾರ್ಯಾಗಾರ: ನಿಟ್ಟೆಯ ಜಸ್ಟಿಸ್ ಕೆ.ಎಸ್.ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಉಡುಪಿಯ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಸಹಯೋಗದಲ್ಲಿ ಆಯೋಜಿಸಿರುವ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ನಿರ್ವಹಣೆ ಮತ್ತು ಅಭಿವೃದ್ಧಿ ಕುರಿತ ಕಾರ್ಯಾಗಾರ. ಸಮಯ: ಬೆಳಗ್ಗೆ 9:30ರಿಂದ. ಸ್ಥಳ:ಹೊಟೇಲ್ ಮಧುವನ ಸೆರಾಯ್, ಮಣಿಪಾಲ. ಚಿಟ್ಟಾಣಿ ಸಪ್ತಾಹ: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಶ್ರೀವೀರಾಂಜನೇಯ ಯಕ್ಷಮಿತ್ರ ಮಂಡಳಿ ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸಿರುವ 9ನೆ ವರ್ಷದ ಚಿಟ್ಟಾಣಿ ಯಕ್ಷಗಾನ ಸಪ್ತಾಹದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ. ಬಳಿಕ ಯಕ್ಷಗಾನ ‘ಭಸ್ಮಾಸುರ ಮೋಹಿನಿ’. ಸಮಯ: ಸಂಜೆ 6ರಿಂದ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.
ಪೇಜಾವರ ಶ್ರೀ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 8ಕ್ಕೆ ಲಕ್ಷ ತುಳಸಿ ಅರ್ಚನೆ, ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ಉಡುಪಿಯ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣದಲ್ಲಿ ಧಾರ್ಮಿಕ ಉಪನ್ಯಾಸ ವಿದ್ವಾನ್ ಗುರುರಾಜ ಆಚಾರ್ಯ ಗುಡಿ ಇವರಿಂದ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ಸಂಜೆ 6ರಿಂದ ರಾಜಾಂಗಣದಲ್ಲಿ ಚಿಟ್ಟಾಣಿ ಯಕ್ಷಗಾನ ಸಪ್ತಾಹ ಸಮಾರೋಪ, ಪ್ರಶಸ್ತಿ ಪ್ರದಾನ. ಯೂತ್ ಪ್ಲಸ್: ರೋಟರಿ ಉದ್ಯಾವರ ಮತ್ತು ರೋಟರಿ ಕಟಪಾಡಿ ಇವುಗಳ ಆಶ್ರಯದಲ್ಲಿ ಯೂತ್ ಪ್ಲಸ್ ಕಾರ್ಯಕ್ರಮ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ಶ್ರೀಶಂಭುಶೈಲೇಶ್ವರ ದೇವಸ್ಥಾನದ ಸಭಾಂಗಣ, ಮೇಲ್ಪೇಟೆ ಉದ್ಯಾವರ.





