ಅ.29ರಂದು ಕುಕ್ಕಾಜೆಯಲ್ಲಿ ಕಬಡ್ಡಿ ಪಂದ್ಯಾಟ
ವಿಟ್ಲ, ಅ.22: ಕುಕ್ಕಾಜೆ-ಮಂಚಿಯ ಸೌಹಾರ್ದ ಫ್ರೆಂಡ್ಸ್ ಆಶ್ರಯದಲ್ಲಿ ಸೌಹಾರ್ದ ಟ್ರೋಫಿ-2016 60 ಕೆ.ಜಿ. ವಿಭಾಗದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟವು ಅ.29ರಂದು ಕುಕ್ಕಾಜೆ ಶಾಲಾ ಮೈದಾನದಲ್ಲಿ ನಡೆಯಲಿದೆ. ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್, ಲಯನ್ಸ್ ಕ್ಲಬ್ ಕೊಳ್ನಾಡು-ಸಾಲೆತ್ತೂರು ಇವುಗಳ ಸಹಯೋಗದೊಂದಿಗೆ ನಡೆಯುವ ಈ ಪಂದ್ಯಾಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಡಿಸಿಸಿ ಪ್ರ.ಕಾರ್ಯದರ್ಶಿ ಪಿಯೂಸ್ ಎಲ್. ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮಾನಂದ ನೂಜಿಪ್ಪಾಡಿ ಅವರನ್ನು ಸನ್ಮಾನಿಸಲಾಗುವುದು. ವಿಜೇತ ತಂಡಗಳಿಗೆ ಪ್ರಥಮ 10,000 ರೂ., ದ್ವಿತೀಯ 7,007 ರೂ., ತೃತೀಯ ಹಾಗೂ ಚತುರ್ಥ 3,000 ರೂ. ಹಾಗೂ ಸೌಹಾರ್ದ ಟ್ರೋಫಿ, ಅಲ್ಲದೆ ವೈಯುಕ್ತಿಕ ಟ್ರೋಫಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8105886368, 9632323373ರನ್ನು ಸಂಪರ್ಕಿಲು ಪ್ರಕಟನೆ ತಿಳಿಸಿದೆ.





