ಅ.25ರಂದು ವಿದ್ಯುತ್ ನಿಲುಗಡೆ
ಉಡುಪಿ, ಅ.22: ಹಿರಿಯಡ್ಕದಿಂದ ಹೆಬ್ರಿಗೆ ಹೊರಡುವ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಹಾಗೂ ಹೆಬ್ರಿ ಉಪವಿದ್ಯುತ್ ಕೇಂದ್ರದಲ್ಲಿ ಹೆಚ್ಚುವರಿ ಪರಿವರ್ತಕವನ್ನು ಅಳವಡಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅ.25ರಂದು ಬೆಳಗ್ಗೆ 9:30ರಿಂದ ಸಂಜೆ 5ರವರೆಗೆ ಹೆಬ್ರಿ, ಶಿವಪುರ, ಖಜಾನೆ, ಮುದ್ರಾಡಿ, ವರಂಗ, ಮುನಿಯಾಲು, ಬಚ್ಚಪ್ಪು, ಕಬ್ಬಿನಾಲೆ, ಸೀತಾನದಿ, ಸೋಮೇಶ್ವರ, ನಾಡ್ಪಾಲು, ಬೆಳಂಜೆ, ಮಡಾಮಕ್ಕಿ, ಕಾಸನಮಕ್ಕಿ, ಕಳ್ತೂರು, ಸಂತೆಕಟ್ಟೆ, ಕರ್ಜೆ, ಮುಂಡಾಡಿಜೆಡ್ಡು, ಕುರ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಂಬಂಧಪಟ್ಟ ಗ್ರಾಹಕರು ಗಮನಿಸಿ ಮೆಸ್ಕಾಂನೊಂದಿಗೆ ಸಹಕರಿಸುವಂತೆ ಇಲಾಖೆ ಕೋರಿದೆ.
Next Story





