Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಔಷಧೀಯ ಗುಣವುಳ್ಳ ಸಂಬಾರ ಪದಾರ್ಥ ಏಲಕ್ಕಿ

ಔಷಧೀಯ ಗುಣವುಳ್ಳ ಸಂಬಾರ ಪದಾರ್ಥ ಏಲಕ್ಕಿ

ಅಬೂಬಕರ್ ಕಾರ್ಕಳಅಬೂಬಕರ್ ಕಾರ್ಕಳ22 Oct 2016 11:49 PM IST
share
ಔಷಧೀಯ ಗುಣವುಳ್ಳ ಸಂಬಾರ ಪದಾರ್ಥ ಏಲಕ್ಕಿ

ಹಬ್ಬಗಳು, ಮದುವೆ ಸಮಾರಂಭಗಳು ಬಂದೊಡನೆ ಭೋಜನ ತಯಾರಿಸುವಾಗ ಏಲಕ್ಕಿಯದ್ದೇ ಗಮ ಗಮ ಪರಿಮಳ ಮೂಗಿಗೆ ಬಡಿಯುತ್ತಿರುತ್ತದೆ ಪಾಯಸ, ಬಿರ್ಯಾನಿ, ತುಪ್ಪದನ್ನ ಮುಂತಾದ ಸ್ವಾದಿಷ್ಟ ಭರಿತವಾದ ಆಹಾರಗಳಲ್ಲೂ ಸಿಹಿ ತಿಂಡಿಗಳಲ್ಲೂ ಪಾನೀಯಗಳಲ್ಲಿ ಈ ಪರಿಮಳಯುಕ್ತವಾದ ಏಲಕ್ಕಿಯ ಪಾತ್ರ ಬಹು ದೊಡ್ದದು. ಏಲಕ್ಕಿಯ ಬೀಜಗಳು ಆಹ್ಲಾದಕರ ಪರಿಮಳ ಮತ್ತು ಸುವಾಸನೆಯನ್ನು ನೀಡುತ್ತದೆ ಆದುದರಿಂದ ಭಾರತೀಯ ಪಾಕ ಪದ್ಧತಿಗಳಲ್ಲಿ ಸುವಾಸನೆ ಕಾರಕ ವಸ್ತುವಾಗಿ ಏಲಕ್ಕಿಯನ್ನು ಮಸಾಲಾ ಭರಿತ ಆಹಾರಗಳು ಸಿಹಿತಿಂಡಿಗಳಲ್ಲೂ ಸೇರಿಸಲಾಗುತ್ತದೆ ಶುಂಠಿ ಮಿಶ್ರಿತ ಏಲಕ್ಕಿ ಚಹಾ ಅತ್ಯಂತ ಪ್ರಸಿದ್ಧ ಪಾನೀಯವಾಗಿದೆ. ಏಲಕ್ಕಿಯನ್ನು ಮಸಾಲಾ ಪದಾರ್ಥವಾಗಿ ಬಳಸುವುದನ್ನು ಬಿಟ್ಟು ಆರೋಗ್ಯದ ದೃಷ್ಟಿಯಲ್ಲಿ ಇವುಗಳ ಮಹತ್ವದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಏಲಕ್ಕಿ (cardamom)

  ಇದರ ವೈಜ್ಞಾನಿಕ ಹೆಸರು ಎಲತೇರಿಯ ಕಾರ್ಡಮೋಮ್ ಇಂಗ್ಲಿಷ್‌ನಲ್ಲಿ ಕಾರ್ಡಮೋಮ್, ಹಿಂದಿಯಲ್ಲಿ ಇಲಾಚಿ, ಮಲಯಾಳಂನಲ್ಲಿ ಏಲಂ, ತಮಿಳಿನಲ್ಲಿ ಎಲಕ್ಕಾಯಿ, ಮುಂತಾದ ಹೆಸರಿನಿಂದ ಕರೆಯಲ್ಪಡುತ್ತದೆ. ಏಲಕ್ಕಿಯನ್ನು ‘ಸಂಬಾರ ಪದಾರ್ಥಗಳ ರಾಣಿ’ (queen of spices)ಎಂದೇ ಕರೆಯಲಾಗುತ್ತದೆ. ಇವುಗಳ ಗಿಡವು ಶುಂಠಿ ಜಾತಿಗೆ ಸೇರಿದ್ದು ಸಾಮಾನ್ಯವಾಗಿ ಇವುಗಳ ಎತ್ತರ 7ರಿಂದ 12 ಅಡಿವರೆಗೆ ಬೆಳೆಯುತ್ತದೆ. ಇವುಗಳ ಎಲೆಯು 1ರಿಂದ 2 ಅಡಿ ಉದ್ದವಿರುತ್ತದೆ. ಇವುಗಳ ಹೂವು ಕೂಡ ನೋಡಲು ಕೆಂಪು ಹಾಗೂ ಬಿಳಿ ಬಣ್ಣದಿಂದ ಕೂಡಿದ್ದು ನೋಡಲು ಅಂದವಾಗಿರುತ್ತದೆ ಏಲಕ್ಕಿ ಕೃಷಿಯು ಸ್ವಲ್ಪಕ್ಲಿಷ್ಟಕರವಾಗಿದ್ದು ಇವುಗಳ ಬೆಳೆಗೆ ಯೋಗ್ಯವಾದ ತಂಪು ಹವಾಮಾನ ಬೇಕಾಗಿದ್ದು ತೇವಯುಕ್ತವಾದ ಹಾಗೂ ಆಮ್ಲೀಯ ಗುಣದ ಮಣ್ಣಿನ ಅಗತ್ಯವಿದೆ. ರೋಗಗಳು ಬಾರದ ಹಾಗೆ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಏಲಕ್ಕಿಯಲ್ಲಿ ಮೂರು ವಿಧಗಳಿದ್ದು ಹಸಿರು ಬಣ್ಣ ಕಪ್ಪುಹಾಗೂ ಬಿಳಿ ಮಾರುಕಟ್ಟೆಯಲ್ಲಿ ಹಸಿರು ಹಾಗೂ ಬಿಳಿ ಬಣ್ಣದ ಏಲಕ್ಕಿ ಮಸಾಲೆ ಪದಾರ್ಥಗಳಿಗೆ ಪ್ರಾಮುಖ್ಯ ಪಡೆದಿದೆ.

ಏಲಕ್ಕಿ ಬೆಳೆಯ ಉತ್ಪಾದನೆಯಲ್ಲಿ ಭಾರತ ಮುಂದಿದ್ದು ಮಲೇಷಿಯಾ, ಜಪಾನ್, ವಿಯೆಟ್ನಾಮ್, ಕೊರಿಯಾ, ನೇಪಾಳದಲ್ಲಿ ಕೂಡ ಇದನ್ನು ಬೆಳೆಸಲಾಗುತ್ತಿದೆ. ವಿಶ್ವದ ಬೆಲೆಬಾಳುವ ಮಸಾಲೆಗಳ ಸ್ಥಾನಗಳಲ್ಲಿ ಕೇಸರಿಯ (ಸಫ್ರಾನ್) ನಂತರ ಏಲಕ್ಕಿ ಸೇರಿವೆ. ಪರಿಮಳಯುಕ್ತವಾದ ಏಲಕ್ಕಿಯು ಮನುಷ್ಯನ ಆರೋಗ್ಯದಲ್ಲೂ ಪರಿಣಾಮಕಾರಿಯಾಗಿ ಕಾರ್ಯವಹಿಸುತ್ತದೆ. ಇದರ ಬಗ್ಗೆ ಸ್ವಲ್ಪನೋಡೋಣ. ಅಮೆರಿಕದ ಕೃಷಿ ಇಲಾಖೆಯ ಮತ್ತು ಸ್ಟ್ಯಾಂಡರ್ಡ್ ರೆಫರೆನ್ಸ್ ರಾಷ್ಟ್ರೀಯ ಪೋಷಕ ಆಹಾರ ದತ್ತಾಂಶ ಮೂಲದ ಪ್ರಕಾರ ಏಲಕ್ಕಿಯಲ್ಲಿ ಯಥೇಚ್ಛವಾಗಿ ಪೋಷಕಾಂಶಗಳು ವಿಟಮಿನ್ ಜೀವಸತ್ವಗಳು, ಪ್ರೊಟೀನ್ ಅಡಕಗೊಂಡಿವೆ. 100 ಗ್ರಾಂ ಏಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ 67 ಗ್ರಾಂ, ಪ್ರೊಟೀನ್ 1 ಗ್ರಾಂ ಆಹಾರದ ಫೈಬರ್ 28 ಗ್ರಾಂ ಇವೆ. ಇದು ಕೊಲೆಸ್ಟ್ರಾಲ್ ರಹಿತವಾಗಿದ್ದು ವಿವಿಧ ತರದ ಜೀವಸತ್ವಗಳಾದ ಪಿರಿಡಾಕ್ಸಿನ್, ರೈಬೋಫ್ಲೇವಿನ್, ತಯಾಮಿನ್, ವಿಟಮಿನ್ ಎ, ವಿಟಾಮಿನ್ ಸಿ, ಸೋಡಿಯಂ, ಪೊಟ್ಯಾಸಿಯಂ ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಶಿಯಂ ಇದ್ದು ರಕ್ತದಲ್ಲಿ ಸಮಾನತೆಯನ್ನು ಕಾಪಾಡಿ ಹಲವು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆಯುರ್ವೇದ ಯುನಾನಿ ಚಿಕಿತ್ಸೆಗಳಲ್ಲಿ ಏಲಕ್ಕಿಯನ್ನು ಧಾರಾಳವಾಗಿ ಬಳಸುತ್ತಾರೆ ಅಸ್ತಮಾ ಗಂಟಲು ಊತ, ಕೆಮ್ಮಿಗೆ ಉತ್ತಮ ಔಷಧವಾಗಿದೆ. ದಿನಂಪ್ರತಿ ಎರಡು ಮೂರು ಏಲಕ್ಕಿಯನ್ನು ನೀರಲ್ಲಿ ಹಾಕಿ ಖಾಲಿ ಹೊಟ್ಟೆಗೆ ಸೇವಿಸಿದರೆ ಆಸ್ತಮಾ ದೂರವಾಗಬಹುದು.

ಕ್ಯಾನ್ಸರ್ ವಿರೋಧಿ ಕಾರಕ ಗುಣ

ಕ್ಯಾನ್ಸರ್ ರೋಗವು ವಿಶ್ವಾದಾದ್ಯಂತ ಸಾವಿನ ಕಾರಣಗಳಲ್ಲೊಂದಾ ಗಿದೆ. ಅದರಲ್ಲೂ ಕರುಳ ಸಂಬಂಧಿ ಕ್ಯಾನ್ಸರ್ (colorectal cancer) ಹೆಚ್ಚಾಗಿದ್ದು ಸಾಂಪ್ರದಾಯಿಕವಾಗಿ ಕ್ಯಾನ್ಸರ್ ಚಿಕಿತ್ಸೆಗೆ ತಗಲುವ ವೆಚ್ಚ ನಂತರದ ಅಡ್ಡಪರಿಣಾಮಗಳು ಇವುಗಳನ್ನೆಲ್ಲ ಸಂಶೋಧನೆ ನಡೆಸಿದ ಸೆನ್ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಅಧ್ಯಯನಗಳು ಏಲಕ್ಕಿಯಲ್ಲಿ ಆ್ಯಂಟಿಓಕ್ಸಿಡೆಂಟೀವ್ ಗುಣಗಳಿದ್ದು ಚರ್ಮದ ಕ್ಯಾನ್ಸರ್ ಕರುಳಿನ ಕ್ಯಾನ್ಸರ್‌ಗಳನ್ನು ಪ್ರತಿರೋಧಿಸುವ ಧನಾತ್ಮಕ ಗುಣಗಳಿವೆ ಎಂಬುದನ್ನು ಹಲವಾರು ಸಂಶೋಧನೆಗಳಿಂದ ಸಾಬೀತು ಪಡಿಸಿದ್ದಾರೆ. ಅದೇ ರೀತಿ ಏಲಕ್ಕಿಯಲ್ಲಿ ಆಂಟಿಓಕ್ಸಿಡಾಂಟ್ ಇರುವ ಕಾರಣ ಕೊಲೆಸ್ಟರಾಲ್ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಹೃದಯಾಘಾತ, ಪಕ್ಷವಾತಗಳನ್ನು ತಪ್ಪಿಸಬಹುದು. ದೇಹದ ಲಿಪಿಡ್ ಉಲ್ಬಣವನ್ನು ಪ್ರತಿರೋಧಿಸುವ ಕಾರ್ಯವನ್ನು ಮಾಡಬಹುದೆಂದು ಫಾರ್ಮಕೋಲಜಿ ಹಾಗೂ ಟಾಕ್ಸಿಕೊಲೊಜಿ ವಿಭಾಗ ನಡೆಸಿದ ಪ್ರಯೋಗಗಳಲ್ಲಿ ಸಾಬೀತಾಗಿದೆ.

ಏಲಕ್ಕಿಯಲ್ಲಿ  ಖಿನ್ನತೆಯ ಗುಣಲಕ್ಷಣಗಳನ್ನು ನೀಗಿಸುವಂತಹ ಸಾಮರ್ಥ್ಯವಿದೆ ಹಾಗೂ ಮೂತ್ರ ಸಂಬಂಧಿ ಕಾಯಿಲೆಗಳಾದ ಮೂತ್ರದ ಸೋಂಕು, ಮೂತ್ರಪಿಂಡದ ಉರಿಯೂತಗಳಿಗೆ ಪರಿಹಾರವಾಗಿದೆ. ಜೀರ್ಣ ಸಂಬಂಧಿ ಹೊಟ್ಟೆಯ ಕಾಯಿಲೆಗಳಾದ ಆ್ಯಸಿಡಿಟಿ, ಹೊಟ್ಟೆ ಉಬ್ಬರ ವಾಕರಿಕೆ ವಾಂತಿಯನ್ನು ನಿಯಂತ್ರಿಸುತ್ತದೆ. ಏಲಕ್ಕಿಯಲ್ಲಿ ಪ್ರತ್ಯೇಕವಾಗಿ ಸೂಕ್ಷ್ಮಜೀವಾಣುಗಳ ವಿರುದ್ಧ ಹೋರಾಡುವ ಗುಣ  ಇರುವ ಕಾರಣ ಸೋಂಕು ಬರದಹಾಗೆ ರೋಗಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಕಾಮೋತ್ತೇಜಕ aphrodiciac properties ಹಾಗೂ ಚರ್ಮಕ್ಕೆ ಕಾಂತಿಯನ್ನು ನೀಡುವ ಗುಣಗಳಿದ್ದು ಏಲಕ್ಕಿಯ ದಿನನಿತ್ಯದ ಸೇವನೆಯಿಂದ ಶರೀರದ ಮೇಲೆ ಉತ್ತಮ ಹಾಗೂ ಪರಿಣಾಮಕಾರಿಯಾಗಿ ಕಾರ್ಯವೆಸಗಬಹುದು ಹಾಗೂ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರವೆನ್ನುವುದರಲ್ಲಿ ಎರಡು ಮಾತಿಲ್ಲ.

ಏಲಕ್ಕಿ ಬೆಳೆಯ ಉತ್ಪಾದನೆಯಲ್ಲಿ ಭಾರತ ಮುಂದಿದ್ದು ಮಲೇಷಿಯಾ, ಜಪಾನ್, ವಿಯೆಟ್ನಾಮ್, ಕೊರಿಯಾ, ನೇಪಾಳದಲ್ಲಿ ಕೂಡ ಇದನ್ನು ಬೆಳೆಸಲಾಗುತ್ತಿದೆ. ವಿಶ್ವದ ಬೆಲೆಬಾಳುವ ಮಸಾಲೆಗಳ ಸ್ಥಾನಗಳಲ್ಲಿ ಕೇಸರಿಯ (ಸಫ್ರಾನ್) ನಂತರ ಏಲಕ್ಕಿ ಸೇರಿವೆ. ಪರಿಮಳಯುಕ್ತವಾದ ಏಲಕ್ಕಿಯು ಮನುಷ್ಯನ ಆರೋಗ್ಯದಲ್ಲೂ ರಿಣಾಮಕಾರಿಯಾಗಿ ಕಾರ್ಯವಹಿಸುತ್ತದೆ.

share
ಅಬೂಬಕರ್ ಕಾರ್ಕಳ
ಅಬೂಬಕರ್ ಕಾರ್ಕಳ
Next Story
X