ಸಂಪುಟ ಸಭೆಗಳಲ್ಲಿ ಮೊಬೈಲ್ ನಿಷೇಧ
ಹೊಸದಿಲ್ಲಿ, ಅ.22: ಸಂಪರ್ಕ ಸಾಧನಗಳ ಹ್ಯಾಕಿಂಗ್ ಮೂಲಕ ಮಾಹಿತಿ ಸೋರಿಕೆಯ ಯಾವುದೇ ಸಂಭಾವ್ಯವನ್ನು ತಡೆಯುವ ದೃಷ್ಟಿಯಿಂದ, ಸಂಪುಟ ಸಭೆಗಳಿಗೆ ಮೊಬೈಲ್ ಫೋನ್‌ಗಳನ್ನು ತರದಂತೆ ಕೇಂದ್ರ ಸಚಿವರಿಗೆ ಸೂಚನೆ ನೀಡಲಾಗಿದೆ.
ಸಂಪುಟ ಕಾರ್ಯಾಲಯವು ಇತ್ತೀಚೆಗೆ ಸಂಬಂಧಿತ ಸಚಿವರ ಖಾಸಗಿ ಕಾರ್ಯದರ್ಶಿಗಳಿಗೆ ಈ ಸಂಬಂಧ ನಿರ್ದೇಶನವೊಂದನ್ನು ಜಾರಿ ಮಾಡಿದೆ.
ಕ್ಯಾಬಿನೆಟ್ ಹಾಗೂ ಕ್ಯಾಬಿನೆಟ್ ಸಮಿತಿಗಳ ಸಭಾಗೃಹದೊಳಗೆ ಇನ್ನು ಮುಂದೆ ಸ್ಮಾರ್ಟ್‌ಫೋನ್ ಹಾಗೂ ಮೊಬೈಲ್ ಫೋನ್‌ಗಳನ್ನು ಒಯ್ಯಲು ಅನುಮತಿ ಇರುವುದಿಲ್ಲವೆಂದು ಅದು ತಿಳಿಸಿದೆ.
ಹ್ಯಾಕಿಂಗ್‌ನ ಸಂಭವನೀಯತೆಯಿರುವ ಮೊಬೈಲ್ ಫೋನ್‌ಗಳ ಭದ್ರತೆಯ ಬಗ್ಗೆ ಭದ್ರತಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಮಹತ್ವ ಪಡೆದಿದೆ.
Next Story





