ಸಚಿವಾಲಯದ ಅಕಾರಿಗಳಿಗೆ ಭಡ್ತಿ
ಬೆಂಗಳೂರು, ಅ.22: ರಾಜ್ಯ ಸರಕಾರವು ಸಚಿವಾಲಯದ ಅೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿಗಳನ್ನಾಗಿ ಭಡ್ತಿ ನೀಡಿ ಆದೇಶ ಹೊರಡಿಸಿದೆ.
ಭಡ್ತಿ: ಲಲಿತಾ ಹಂದಿಗೋಳ-ಮೂಲಸೌಲಭ್ಯ ಅಭಿವೃದ್ಧಿ, ಜಿ.ಆರ್.ಅನ್ನಪೂರ್ಣ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸುಬ್ರಹ್ಮಣ್ಯ-ಕಂದಾಯ ಇಲಾಖೆ, ಜಿ.ಬಿ.ಹೇಮಣ್ಣ-ಆರ್ಥಿಕ ಇಲಾಖೆ, ಮರಿಯಪ್ಪ-ಹಿಂದುಳಿದ ವರ್ಗಗಳ ಕಲ್ಯಾಣ, ಸಿ.ಎಚ್.ಶಿವಕುಮಾರ್-ಆರ್ಥಿಕ ಇಲಾಖೆ, ಕೆ.ಬೀರೇಶ್-ಸಾರಿಗೆ ಇಲಾಖೆ, ಎಲ್.ಎಸ್.ಶ್ರೀಕಂಠಬಾಬು- ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ, ಜಿವನೋಪಾಯ ಇಲಾಖೆ.
ವರ್ಗಾವಣೆ: ಉಪಕಾರ್ಯದರ್ಶಿಗಳಾದ ಬಿ.ಎನ್.ಶ್ರೀನಿವಾಸ್-ಐಟಿ, ಬಿಟಿ, ಎಸ್.ತಿಪ್ಪೇಸ್ವಾಮಿ-ಲೋಕೋಪಯೋಗಿ, ಬಂದರು, ಒಳನಾಡು ಮತ್ತು ಜಲಸಾರಿಗೆ, ಬಿ.ನಾಗಭೂಷಣ್-ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಎಂ.ಕೆ. ಭರ್ಮರಾಜಪ್ಪ-ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಎನ್.ಆರ್.ಪ್ರಭು-ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ವರ್ಗಾವಣೆಗೊಳಿಸಲಾಗಿದೆ.
ಸ್ಥಳ ನಿಯುಕ್ತಿ: ಉಪ ಕಾರ್ಯದರ್ಶಿಗಳಾದ ಸ್ವರ್ಣಲತಾ ಎಂ.ಭಂಡಾರೆ ಅವರನ್ನು ಕಾನೂನು ಇಲಾಖೆಗೆ ಹಾಗೂ ಆರ್.ಕಲ್ಪನಾರನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.





