ಅಕಾರಕ್ಕಾಗಿ ಅರ್ಜಿ ಹಾಕುವುದಿಲ್ಲ: ಡಿಕೆಶಿ

ಬೆಂಗಳೂರು, ಅ.22: ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹೈಕಮಾಂಡ್ ನೀಡುವ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಲು ತಯಾರಾಗಿದ್ದೇನೆ. ಆದರೆ, ಸ್ಥಾನಕ್ಕಾಗಿ ಅರ್ಜಿ ಹಿಡಿದುಕೊಂಡು ಯಾರ ಹತ್ತಿರನೂ ಹೋಗುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ವರದಿಗಾರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ನೇತೃತ್ವವನ್ನು ಮುಂದಕ್ಕೆ ಯಾರಿಗೆ ನೀಡುತ್ತಾರೆ ಎಂದು ಎಲ್ಲರ ಹೆಸರನ್ನು ನೀವೇ ಬರೆಯುತ್ತೀರಾ ಎಂದ ಅವರು, ಸ್ಥಾನಮಾನ ನೀಡುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಆದರೆ, ನಾನೊಬ್ಬ ಕಾರ್ಯಕರ್ತನಾಗಿ ಪಕ್ಷ ಕೈಗೊಳ್ಳುವ ತೀರ್ಮಾನವನ್ನು ಗೌರವಿಸುತ್ತೇನೆ ಹಾಗೂ ಅದಕ್ಕೆ ಬದ್ಧವಾಗಿರುತ್ತೇನೆ ಎಂದರು. ಮಾಜಿ ಸಚಿವ ಶ್ರೀನಿವಾಸಪ್ರಸಾದ್, ನಾನು ಪಕ್ಷ ತೊರೆಯಲು ಡಿ.ಕೆ.ಶಿವಕುಮಾರ್ ಕಾರಣ ಹಾಗೂ ಅವರಿಂದಲೇ ಪಕ್ಷ ಹಾಳಾಗುತ್ತಿರುವುದು ಎಂದು ಆರೋಪಿಸಿದ್ದಾರೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀನಿವಾಸ ಪ್ರಸಾದ್ ಪಕ್ಷದಲ್ಲಿ ಹಿರಿಯವರಾಗಿದ್ದು, ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೂ, ಅವರು ಪಕ್ಷ ತೊರೆದಿದ್ದಾರೆ. ನನ್ನನ್ನು ಮತ್ತೊಮ್ಮೆ ನೆನಸಿಕೊಂಡಿದ್ದಕ್ಕೆ ಧನ್ಯವಾದಗಳು ಎಂದರು. ದೇ ವೇಳೆಯಲ್ಲಿ ಮುಂದಿನ ನಂಜನಗೂಡಿನಲ್ಲಿ ನಡೆಯಲಿರುವ ಉಪ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು ಶ್ರೀನಿವಾಸಪ್ರಸಾದ್‌ಅವರ ರಾಜೀನಾಮೆ ಅಂಗೀಕಾರವಾಗಿದೆ ಎಂಬುದೆ ನನಗೆ ಗೊತ್ತಿಲ್ಲ ಎಂದು ನುಡಿದರು. ಇದೀಗ ವಿರೋಧ ವ್ಯಕ್ತವಾಗುತ್ತಿರುವ ಉಕ್ಕಿನ ಸೇತುವೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಯೋಜನೆಯು ಬಿಜೆಪಿ ಅಕಾರ ಅವಯಲ್ಲಿ ಜಾರಿಯಾಗಿದ್ದು, ಇದೀಗ ನಮ್ಮ ಸರಕಾರ ಅಭಿವೃದ್ಧಿಪಡಿಸುತ್ತಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು, ವಿಧಾನ ಸೌಧ ಕಟ್ಟಬೇಕಾದರೂ ಕೆಂಗಲ್ ಹನುಮಂತಯ್ಯ ಅವರ ಮೇಲೆ ಚಪ್ಪಲಿಯನ್ನು ಎಸೆದಿದ್ದರು. ಆದರೂ, ಅವರು ಅದನ್ನು ಪೂರ್ತಿ ಮಾಡಿಸಿದರು ಎಂದು ನೆನೆಸಿಕೊಂಡರು.





