ಸಿಪಿಎಂ ನಾಯಕ ಪಿ.ಜಯರಾಜನ್‌ಗೆ ಮತ್ತೆ ಕೊಲೆ ಬೆದರಿಕೆ
.jpg)
ಕಣ್ಣೂರ್, ಅಕ್ಟೋಬರ್ 23: ಒಂದುತಿಂಗಳೊಳಗೆ ಸಿಪಿಎಂ ಕಣ್ಣೂರ್ ಜಿಲ್ಲೆಯ ಕಾರ್ಯದರ್ಶಿ ಪಿ.ಜಯರಾಜನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರ ಬಂದಿದೆ. ಕಣ್ಣೂರ್ ಟೌನ್ ಸರ್ಕಲ್‌ಇನ್ಸ್‌ಪೆಕ್ಟರ್ ವಿಳಾಸಕ್ಕೆ ದಿ ಕೀಪರ್ ಆಫ್ ದಿ ಆರ್ಡರ್ ಎಂಬ ಹೆಸರಿನಲ್ಲಿ ಪತ್ರವನ್ನು ರವಾನಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಎರಡನೆ ಬಾರಿಗೆ ಜಯರಾಜನ್ ಹತ್ಯೆಗೈಯ್ಯುವ ಬೆದರಿಕೆ ಪತ್ರ ಬಂದಿದೆ. ಪತ್ರ ಎಲ್ಲಿಂದ ಬಂದಿದೆ ಎಂದು ಕಂಡು ಹುಡುಕಲು ಸಾಧ್ಯವಾಗಿಲ್ಲವಾದರೂ ಕಣ್ಣೂರ್ ಟೌನ್ ಪೊಲೀಸರು ಕೇಸು ದಾಖಲಿಸಿದ್ದಾರೆ.
’ಒಂದು ತಿಂಗಳೊಳಗೆ ಅವರನ್ನು ಕೊಂದು ಹಾಕಲು ನಾವು ತೀರ್ಮಾನಿಸಿದ್ದೇವೆ. ಇವರ ಚಲನವಲನಗಳ ಮೇಲೆ ನಿಗಾವಿರಿಸಲು ಓರ್ವನನ್ನು ನೇಮಿಸಿದ್ದೇವೆ. ಸಮಯ ಮತ್ತು ಸ್ಥಳ ಸರಿಯಾಗಿ ಸಿಕ್ಕಿದರೆ ಒಂದು ತಿಂಗಳೊಳಗೆ ಕೃತ್ಯವೆಸಗಲಿದ್ದೇವೆ. ಹಾಗಿದ್ದರೆ ಮಾತ್ರವೇ ಕಣ್ಣೂರಿನಲ್ಲಿ ಶಾಂತಿ ನೆಲಸಲು ಸಾಧ್ಯ. ಇವರು ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿಮ್ಮ ಜನರಿಗೆ ಕಂಗಾಲಾಗದಿರಲಿಕ್ಕಾಗಿ ಸ್ವಲ್ಪದೂರ ಇರಲು ನೋಡಿರಿ" ಹೀಗೆ ಬೆದರಿಕೆ ಪತ್ರದ ಧಾಟಿಯಿದೆ. ಕಳೆದ ಆಗಸ್ಟ್‌ನಲ್ಲಿ ಐಸಿಸ್ ಚಟುವಟಿಕೆಗಳನ್ನು ಟೀಕಿಸಿದಕ್ಕಾಗಿ ಜಯರಾಜನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರ ಬಂದಿತ್ತು. ಅದನ್ನುಅವರು ಪೊಲೀಸರಿಗೆ ಹಸ್ತಾಂತರಿಸಿದ್ದರು. ಪತ್ರ ಬಂದಿರುವ ಹಿನ್ನೆಲೆಯಲ್ಲಿ ಪಿ.ಜಯರಾಜನ್‌ರ ಮನೆ ಮತ್ತು ಪರಿಸರದಲ್ಲಿ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಬಿಗಿಗೊಳಿಸಲು ಜಿಲ್ಲಾಪೊಲೀಸ್ ವರಿಷ್ಠರು ಆದೇಶಿಸಿದ್ದಾರೆ ಎಂದು ವರದಿ ತಿಳಿಸಿದೆ.





