ವೇಶ್ಯಾವಾಟಿಕೆ: ನಟಿ ಸಹಿತ ಐವರ ಬಂಧನ
.jpg)
ಮೂವಾಟ್ಟುಪುಝ, ಅಕ್ಟೋಬರ್ 23: ವಾಝಕ್ಕುಳಂ, ದಳಿಕ್ಕಾಡ್ ಪ್ರದೇಶಗಳಲ್ಲಿಬಾಡಿಗೆ ಮನೆಗಳನ್ನು ಕೇಂದ್ರವಾಗಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಳೆಯಾಳಂ ಚಲನಚಿತ್ರ ನಟಿ ಸಹಿತ ಐವರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ನಟಿಯಲ್ಲದೆ ಇಬ್ಬರು ಏಜೆಂಟ್‌ಗಳು ಮತ್ತು ಇಬ್ಬರು ನಿರ್ವಾಹಕರನ್ನು ಕದಳಿಕ್ಕಾಡ್ ತೆಕ್ಕುಂಮಲ ಕವಲ ಸಮೀಪದ ಮನೆಯಿಂದ ಶನಿವಾರ ಮಧ್ಯಾಹ್ನ ಮೂವಾಟ್ಟುಪುಝ ಸರ್ಕಲ್ ಇನ್ಸ್‌ಪೆಕ್ಟರ್ ಜಯಕುಮಾರ್ ನೇತೃತ್ವದ ಪೊಲೀಸರ ತಂಡಬಂಧಿಸಿದೆ.
ವೀರಪುತ್ರನ್, ಹಾಪ್ಪಿಜರ್ನಿಂಗ್ ಮುಂತಾದ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ಪಾಲಕ್ಕಾಡ್ ಕೆ,ಎಸ್.ಆರ್.ಟಿಸಿ. ಬಸ್ ಸ್ಟಾಂಡ್ ಸಮೀಪದ ವಾಸವಿದ್ದ ಮತ್ತು ಮಲಪ್ಪುರಂ ಕಾಳಿಕ್ಕಾವ್ ಎಂಬಲ್ಲಿನ ಅಮಲ(34), ವೇಶ್ಯಾವಾಟಿಕೆ ನಿರ್ವಾಹಕರಾದ ತೊಡಪುಝ ತೆಕ್ಕುಂಭಾಗಂನ ಮೋಹನನ್(53) ಸಹಾಯಕ ಪಾರಪ್ಪುಝದ ಬಾಬು(34), ಏಜೆಂಟ್ ಕರಿಮಣ್ಣೂರು ಮೂಳಪ್ಪುರಂನ ಅಜೀಸ್(29) ಮತ್ತು ಮೂಳಪ್ಪುರಂ ಈಂದುಂಗಲ್ ಜಿತ್ತು ಜೋಯಿ(33) ಬಂಧಿಸಲಾದ ವೇಶ್ಯವಾಟಿಕಾ ಜಾಲದ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರಕೈಯಿಂದ 8000ರೂಪಾಯಿ ನಗದು, ವೇಶ್ಯಾವಾಟಿಕೆಗೆ ಸಂಬಂಧಿಸಿದ ರಿಜಿಸ್ಟರ್, ಬ್ಯಾಂಕ್ ಠೇವಣಿ ಮಾಹಿತಿ ಮುಂತಾದುವು ವಶವಾಗಿದೆ. ಮಧ್ಯವರ್ತಿಗಳ ಬೈಕ್ ,ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಉತ್ತರಭಾರತದ ಯುವತಿಯರನ್ನು ವೇಶ್ಯವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದರು ಎಂದು ವರದಿ ತಿಳಿಸಿದೆ.





