ಎಟಿಎಂನಲ್ಲಿ ಖೋಟಾ ನೋಟು ಬಂದರೆ ಏನು ಮಾಡಬೇಕು?

ಕಾರ್ಪೋರೇಟ್ ಬ್ಯಾಂಕ್ ಉದ್ಯೋಗಿ 27 ನಕಲಿ ಬ್ಯಾಂಕ್ ನೋಟುಗಳನ್ನು ಚೆನ್ನೈ ಎಟಿಎಂನಿಂದ ಈ ತಿಂಗಳು ಹಿಂತೆಗೆದುಕೊಂಡಾಗ ಮತ್ತೆ ಎಟಿಎಂ ಭದ್ರತೆ ಮತ್ತು ಗ್ರಾಹಕ ರಕ್ಷಣೆಯ ವಿಷಯ ಬೆಳಕಿಗೆ ಬಂತು. ಎಟಿಎಂನಿಂದ ನಕಲಿ ನೋಟು ಸಿಗುವ ಗ್ರಾಹಕರಿಗೆ ಕಾನೂನು ಸಹಾಯವೂ ಸಿಗುವುದಿಲ್ಲ. ಏಕೆಂದರೆ ನಕಲಿ ನೋಟಿನ ಮೂಲ ಹುಡುಕುವುದು ಬಹಳ ಕಷ್ಟ. ಆದರೆ ತಮಿಳರಸನ್ ಬ್ಯಾಂಕ್ ಉದ್ಯೋಗಿಯಾಗಿದ್ದುದು ಅದೃಷ್ಟ. ತಕ್ಷಣವೇ ಅವರು ಅದನ್ನು ನಕಲಿ ನೋಟೆಂದು ಗುರುತಿಸಿ ಪೊಲೀಸರಿಗೆ ದೂರು ನೀಡಿದರು. ಬ್ಯಾಂಕ್ ಅವರಿಗೆ ಹಣ ವಾಪಾಸು ಕೊಡುವ ಭರವಸೆಯನ್ನೂ ನೀಡಿತು. ಆದರೆ ಬಹಳಷ್ಟು ಗ್ರಾಹಕರಿಗೆ ಇದು ಸಾಧ್ಯವಾಗದು.
"ಒಮ್ಮೆ ನಿಮ್ಮ ಕೈಗೆ ನಕಲಿ ನೋಟು ಎಟಿಎಂನಿಂದ ಬಂದರೆ ಆ ಮೂಲ ಹುಡುಕುವುದೇ ಕಷ್ಟ. ಏಕೆಂದರೆ, ಹಣ ಎಟಿಎಂನಿಂದ ಬಂದಿರುವ ಕಾರಣ ಬ್ಯಾಂಕಿನ ಜಾಲದಲ್ಲೇ ಸಮಸ್ಯೆಯಿದೆಯೇ ವಿನಾ ಗ್ರಾಹಕರಲ್ಲಲ್ಲ. ಗ್ರಾಹಕರ ಮಾತನ್ನೇ ನಂಬಿ ಬ್ಯಾಂಕ್‌ಗಳು ನಕಲಿ ನೋಟಿಗೆ ನಿಜವಾದ ನೋಟನ್ನು ಕೊಡುವುದಿಲ್ಲ. ವಾಸ್ತವದಲ್ಲಿ ಇದೇ ವಾರದಲ್ಲಿ ಎಟಿಎಂನಲ್ಲಿ ನಕಲಿ ನೋಟು ಬರುವ ಎರಡನೇ ಪ್ರಕರಣ ಇದಾಗಿದೆ" ಎನ್ನುತ್ತಾರೆ ಚೆನ್ನೈನ ಸೈಬರ್ ಕ್ರೈಮ್ ಅಧಿಕಾರಿಗಳು.
ಇತ್ತೀಚೆಗೆ ನಕಲಿ ಕರೆನ್ಸಿಯ ಇತರ ಹಲವು ಪ್ರಕರಣಗಳೂ ವರದಿಯಾಗಿವೆ. ಭಾರತದ ವಿಭಿನ್ನ ಮೆಟ್ರೋಗಳಲ್ಲಿ ಎಟಿಎಂಗಳಿಂದ ನಕಲಿ ನೋಟುಗಳು ಹಂಚಿಕೆಯಾಗಿದ್ದು ಪತ್ತೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ನಿಟ್ಟಿನಲ್ಲಿ ಬ್ಯಾಂಕ್‌ಗಳಿಗೆ ಮಾರ್ಗದರ್ಶಿಗಳನ್ನು ನೀಡಿದೆ. ಗ್ರಾಹಕರಿಂದ ಪಡೆಯುವಾಗ ಎಲ್ಲಾ ಕರೆನ್ಸಿಗಳನ್ನು ಪರೀಕ್ಷಿಸುವಂತೆ ಸೂಚಿಸಿದೆ. ಹಾಗೆಯೇ ಎಟಿಎಂಗೆ ಹಾಕುವ ಮೊದಲೂ ಬ್ಯಾಂಕ್‌ಗಳು ನಕಲಿ ನೋಟುಗಳೇ ಎಂದು ಪರಿಶೀಲಿಸಬೇಕು. ಬ್ಯಾಂಕ್‌ಗಳು ಎಟಿಎಂ ನಿಭಾಯಿಸುವ ಸಂಸ್ಥೆಗಳ ಜೊತೆಗೆ ಸಹಯೋಗ ಹೊಂದಿದ್ದಲ್ಲಿ, ಸಂಸ್ಥೆಗಳೇ ಎಟಿಎಂಗೆ ಹಣ ಹಾಕುವಾಗ ಅದನ್ನು ಪರೀಕ್ಷಿಸಬೇಕು. "ವೃತ್ತಿಪರ ಎಟಿಎಂ ವ್ಯವಸ್ಥಾಪಕರನ್ನೇ ಆರಿಸಿದ್ದಾರೆ ಎಂದುಕೊಂಡು ಕೆಲವು ಬ್ಯಾಂಕ್‌ಗಳು ಸರಿಯಾಗಿ ನೋಟುಗಳನ್ನು ಪರೀಕ್ಷಿಸದೇ ವ್ಯವಸ್ಥೆಗೆ ಹಾಕುತ್ತಾರೆ. ಆದರೆ ನಕಲಿ ನೋಟು ಸಿಕ್ಕ ಪ್ರಕರಣ ವರದಿಯಾದಲ್ಲಿ, ಆ ವ್ಯಕ್ತಿ ಬ್ಯಾಂಕ್ ಜೊತೆಗೆ ಸಂಬಂಧ ಹೊಂದಿರದಿದಲ್ಲಿ ದೊಡ್ಡ ನಷ್ಟ ಅನುಭವಿಸುತ್ತಾರೆ" ಎನ್ನುತ್ತಾರೆ ಸೈಬರ್ ಅಪರಾಧ ಅಧಿಕಾರಿಗಳು.
ಸರಾಸರಿ ದಿನದಲ್ಲಿ ಬ್ಯಾಂಕ್‌ಗಳು ನಗರದೊಳಗೆ ಎಟಿಎಂಗಳಲ್ಲಿ ರು. 3-4 ಲಕ್ಷ ತುಂಬುತ್ತಿದ್ದು, ಉಪನಗರದ ಎಟಿಎಂಗಳಲ್ಲಿ ರು. 1-2 ಲಕ್ಷ ತುಂಬುತ್ತದೆ. ಅಧಿಕ ಟ್ರಾಫಿಕ್ ವಲಯದಲ್ಲಿ ಕೆಲವೊಮ್ಮೆ ಎಟಿಎಂಗಳಲ್ಲಿ ರು. 10 ಲಕ್ಷದವರೆಗೂ ಹಣ ತುಂಬಲಾಗುತ್ತದೆ. ಈ ಎಟಿಎಂಗಳಲ್ಲಿ ಉತ್ತಮ ಗುಣದರ್ಜೆಯ ಅಧಿಕೃತ ಯಂತ್ರಗಳಿರಬೇಕು ಎಂದು ಆರ್‌ಬಿಐ ಕಡ್ಡಾಯ ಮಾಡಿದೆ. "ನಮ್ಮ ಬಳಿ ಕರೆನ್ಸಿ ಪರೀಕ್ಷಿಸುವ ಯಂತ್ರಗಳಿದ್ದು, ನಕಲಿ ನೋಟುಗಳನ್ನು ಅಲ್ಲೇ ನಿವಾರಿಸುತ್ತೇವೆ. ಕಠಿಣ ಪರಿಶೀಲನಾ ಕ್ರಮಗಳ ವ್ಯವಸ್ಥೆಯಿದೆ" ಎನ್ನುತ್ತಾರೆ ಲಕ್ಷ್ಮೀ ವಿಲಾಸ್ ಬ್ಯಾಂಕ್ ಉಪಾಧ್ಯಕ್ಷ ಎನ್ ರಘುನಾಥನ್.
ಗ್ರಾಹಕರಿಗೆ ಎಟಿಎಂಗಳಲ್ಲಿ ನಕಲಿ ನೋಟು ಸಿಕ್ಕರೆ ಅದನ್ನು ಸಿಸಿಟಿವಿ ಮುಂದೆ ಎತ್ತಿ ಹಿಡಿಯಬೇಕು. ಕ್ಯಾಮರಾ ಕೆಲಸ ಮಾಡದಿದ್ದಲ್ಲಿ ಎಟಿಎಂ ಕಾವಲು ಸಿಬ್ಬಂದಿಗೆ ತೋರಿಸಿ ದೂರು ಕೊಡಬೇಕು. ಇಲ್ಲದಿದ್ದರೆ ಅದೆಲ್ಲಿಂದ ಬಂತೆಂದು ಸಾಬೀತು ಮಾಡುವುದು ಕಷ್ಟ ಎನ್ನುತ್ತಾರೆ ಸೈಬರ್ ಅಪರಾಧ ಅಧಿಕಾರಿಗು.
ಹೊಸ ಎಟಿಎಂ ರೇಂಜ್ ಆಗಿರುವ ಎಸ್‌ಎಸ್‌ಎಸ್, ಎಜಿಎಸ್, ಸಿಎಂಎಸ್ ಮತ್ತು ಒಇಎಂನಂತಹ ವ್ಯವಸ್ಥಾಪಕರು ಮತ್ತು ಡೈಬೋಲ್ಡ್, ಎನ್‌ಸಿಆರ್ ಮತ್ತು ಹಿಟಾಚಿಯಂತಹ ತಯಾರಕರು ಬ್ಯಾಂಕ್ ನೋಟು ಪರೀಕ್ಷಿಸುವ ನಂಬಿಕಾರ್ಹ ತಂತ್ರಜ್ಞಾನ ಹೊಂದಿವೆ. "ನಮ್ಮ ಬುದ್ಧಿವಂತ ಎಟಿಎಂಗಳು ನಗದು ಠೇವಣಿ ಮತ್ತು ನಗದು ಹಿಂತೆಗೆದುಕೊಳ್ಳುವುದು ಎರಡರಲ್ಲೂ ನಕಲಿ ಇದ್ದರೆ ಪತ್ತೆ ಮಾಡಬಲ್ಲವು" ಎಂದು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರವಿ ಗೋಯಲ್ ಹೇಳಿದ್ದಾರೆ.
ಆದರೆ ಹಲವಾರು ಬ್ಯಾಂಕುಗಳು ಇನ್ನೂ 12-14 ವರ್ಷ ಹಳೇ ಮತ್ತು ಹಳೇ ತಂತ್ರಜ್ಞಾನ ಹೊಂದಿರುವ ಎಟಿಎಂಗಳನ್ನು ಹೊಂದಿವೆ. "ಈಗ ಎಟಿಎಂಗಳಲ್ಲಿ ಇಎಂವಿ ಇರಬೇಕು ಎಂದು ಆರ್‌ಬಿಐ ಕಡ್ಡಾಯ ಮಾಡಿದೆ. ಎಟಿಎ ಭದ್ರತೆಯಲ್ಲಿ ಇನ್ನೂ ಹೆಚ್ಚಿನ ಅಪ್‌ಗ್ರೇಡ್ ನಿರೀಕ್ಷಿಸಬಹುದು" ಎನ್ನುತ್ತಾರೆ ಗೋಯಲ್.
ಕೃಪೆ:timesofindia.indiatimes.com







