ಮೂರನೆ ಏಕದಿನ: ಭಾರತದ ಗೆಲುವಿಗೆ 286 ರನ್ ಗಳ ಸವಾಲು

ಮೊಹಾಲಿ, ಅ.23: ಇಲ್ಲಿ ಆರಂಭಗೊಂಡ ಮೂರನೆ ಏಕದಿನ ಪಂದ್ಯದಲ್ಲಿ ಇಂದು ಭಾರತದ ವಿರುದ್ಧ ನ್ಯೂಝಿಲೆಂಡ್ 49.4 ಓವರ್‌ಗಳಲ್ಲಿ 285 ರನ್ ಗಳಿಗೆ ಆಲೌಟಾಗಿದೆ.
ಟಾಸ್ ಜಯಿಸಿದ ಭಾರತ ನ್ಯೂಝಿಲೆಂಡ್ ನ್ನು ಬ್ಯಾಟಿಂಗ್ ಗೆ ಇಳಿಸಿತ್ತು. ಲಥಾಮ್ 61 ರನ್, ಟೇಲರ್ 44ರನ್, ಗಪ್ಟಿಲ್ 27 ರನ್ ನಿಶಮ್ 57 ರನ್ , ಹೆನ್ರಿ ಔಟಾಗದೆ 39 ರನ್ ,ಸೌಥಿ 13 ರನ್, ವಿಲಿಯಮ್ಸನ್ 22ರನ್, ಆಂಡರ್ಸನ್ 6 ರನ್ , ರೊಂಚಿ 1 ರನ್, ಸ್ಯಾಂಟ್ನೆರ‍್ 7ರನ್ ಗಳಿಸಿದರು.
ಭಾರತದ ಪರ ಕೆದಾರ‍್ ಜಾಧವ್ 29ಕ್ಕೆ3, ಉಮೇಶ್ ಯಾದವ್ 75ಕ್ಕೆ 3 ,ಅಮಿತ್ ಮಿಶ್ರಾ 46ಕ್ಕೆ 2, ಬುಮ್ರಾ 52ಕ್ಕೆ 2 ವಿಕೆಟ್ ಪಡೆದರು.
Next Story





