ಮಕ್ಕಳಿಗೆ ಶಾಪಿಂಗ್ ಮಾಡುವಾಗ ಈ ವಿಷಯಗಳನ್ನು ಗಮನದಲ್ಲಿಡಿ

ಮಕ್ಕಳಿಗೆ ಹಬ್ಬದ ಶಾಪಿಂಗ್ ಮಾಡುವುದು ಅತೀ ಕಷ್ಟ. ಅವರ ಗಾತ್ರವನ್ನು ಆರಿಸಿಕೊಳ್ಳುವುದು ಕಠಿಣ. 612 ಲೀಗ್ ಮುಖ್ಯ ಕ್ರಿಯೇಟಿವ್ ಅಧಿಕಾರಿ ಮೋಹಿತಾ ಇಂದ್ರಯಾನ್ ಅವರು ಇಲ್ಲಿ ಮಕ್ಕಳ ಶಾಪಿಂಗ್ ಮಾಡುವಾಗ ಗಮನಹರಿಸಬೇಕಾದ ವಿಷಯಗಳ ಬಗ್ಗೆ ಹೇಳಿದ್ದಾರೆ.
ಪಟ್ಟಿ ಮಾಡಿ
ನಿಮ್ಮ ಮಗುವಿಗೆ ಖರೀದಿಸಬೇಕಾದ ಬಟ್ಟೆಗಳ ಪಟ್ಟಿ ಮಾಡಿ. ಪಟ್ಟಿ ಕೈಯಲ್ಲಿ ಹಿಡಿದು ನಿಮ್ಮ ಶಾಪಿಂಗ್ ಅಗತ್ಯಗಳನ್ನು ವಿವಿಧ ಮಳಿಗೆಗಳಲ್ಲಿ ಗುರುತಿಸಿ ಹೆಚ್ಚು ಸಮರ್ಥವಾಗಿ ಪಡೆದುಕೊಳ್ಳಬಹುದು. ನಿಮ್ಮ ಮಗುವಿನ ವಾರ್ಡ್ ರೋಬನ್ನು ಮೊದಲೇ ಯೋಜಿಸಿದಲ್ಲಿ ಹೆಚ್ಚು ಖರೀದಿಯ ಅಗತ್ಯವಿರುವುದಿಲ್ಲ.
ಸರಿಯಾದ ಗಾತ್ರ ಆರಿಸಿ
ದೊಡ್ಡ ಗಾತ್ರ ಖರೀದಿಸಲು ಹೋಗಬೇಡಿ. ನಿಮ್ಮ ಮಗು ದೊಡ್ಡದಾಗುತ್ತದೆ ಎಂದು ದೊಡ್ಡ ಗಾತ್ರ ಬೇಡ. ಆಗ ಆ ಸ್ಟೈಲ್ ಇರದೇ ಇರಬಹುದು.
ಮಕ್ಕಳನ್ನು ಜೊತೆಗೆ ಕರೆದೊಯ್ಯಿರಿ
ಮಕ್ಕಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ ಎಂದಾಗ ಖುಷಿಯಾಗುತ್ತದೆ. ಹೀಗಾಗಿ ಶಾಪಿಂಗ್‌ನಲ್ಲಿ ಅವರನ್ನೂ ಕರೆದೊಯ್ಯಿರಿ. ಹೆಚ್ಚು ಬಣ್ಣವಿರಲಿ
ಕಪ್ಪು ಮತ್ತು ಬಿಳಿ ಬಣ್ಣವನ್ನೇ ಯಾವಾಗಲೂ ಆರಿಸಬೇಡಿ. ವಿವಿಧ ಸೀಸನ್‌ನಲ್ಲಿ ವಿವಿಧ ಬಣ್ಣ ಆರಿಸಿ. ಮ್ಯಾಚಿಂಗ್ ಮಾಡುವ ಕೆಲಸಕ್ಕೆ ಹೋಗಬೇಡಿ. ವಿಭಿನ್ನ ಬಣ್ಣ ಮತ್ತು ಪ್ಯಾಟರ್ನ್ ಆರಿಸಿ.
ಹಿತಕರವಾಗಿರಲಿ
ಮಕ್ಕಳಿಗೆ ಓಡಾಡುವುದು ಮತ್ತು ನಡೆದಾಡುವಾಗ ಹಿತಕರವಾಗಿರುವ ಉಡುಗೆ ಇರಲಿ. ಹಾರುವುದು, ಆಡುವುದು ಎಲ್ಲಕ್ಕೂ ಮಿತಿ ಹಾಕುವ ಬಟ್ಟೆ ಬೇಡ. ಹಿತಕರವಾಗಿದ್ದರೂ ಟ್ರೆಂಡಿ ಆಗಿರುವ ಉಡುಗೆ ಆರಿಸಿ.
ಅತಿಯಾದ ಖರೀದಿ
ಬಟ್ಟೆಗಳನ್ನು ಅಗತ್ಯಕ್ಕಿಂತ ಹೆಚ್ಚಿ ಖರೀದಿಸಿದಲ್ಲಿ ಅದು ಬಳಕೆಯಾಗದೆ ಉಳಿಯಬಹುದು.
ಕೃಪೆ: zeenews.india.com







