ಕೇರಳದ ಶಾಲೆಗಳಲ್ಲಿ ಇನ್ನು ಲಭಿಸಲಿದೆ ವೈಫೈ

ಕಾಸರಗೋಡು, ಅ.23: ರಾಜ್ಯದ ಎಲ್ಲಾ ಸರಕಾರಿ, ಅನುದಾನಿತ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಿಎಸೆನ್ನೆಲ್ ಜೊತೆಗೂಡಿ ವೈಫೈ ಸೌಲಭ್ಯದೊಂದಿಗೆ ಬ್ರಾಡ್‌ಬಾಂಡ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿದೆ.
ಐಟಿ ಎಟ್ ಸ್ಕೂಲ್ ನೇತೃತ್ವದಲ್ಲಿ 10 ಸಾವಿರದಷ್ಟು ಶಾಲೆಗಳಲ್ಲಿ ಮುಂದಿನ ತಿಂಗಳಿನಿಂದ ಈ ಸೇವೆ ಲಭ್ಯವಾಗಲಿದೆ.
ರಾಜ್ಯದ 8ರಿಂದ 12ನೆ ತರಗತಿ ತನಕದ ವಿದ್ಯಾರ್ಥಿಗಳಿಗೆ ತಾಂತ್ರಿಕ ವ್ಯವಸ್ಥೆ ಬಳಸಿ ಹೈಟೆಕ್ ಶಿಕ್ಷಣ ಒದಗಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಬ್ರಾಡ್‌ಬಾಂಡ್ ಒದಗಿಸಲು ಮುಂದಾಗಿದೆ ಎಂದು ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ತಿರುವನಂತಪುರದಲ್ಲಿ ತಿಳಿಸಿದರು.
Next Story





