ಉದುಮ: ಭತ್ತ ಕೊಯ್ಲು ಉತ್ಸವ

ಕಾಸರಗೋಡು, ಅ.23: ಉದುಮದ ಸರಕಾರಿ ಹೈಯರ್ ಸೆಕಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನೇತೃತ್ವದಲ್ಲಿ ಮಾಂಗಾಡ್ ಬಯಲು ಗದ್ದೆಯಲ್ಲಿ ಮಾಡಲಾದ ಭತ್ತ ಕೃಷಿಯ ಕೊಯ್ಲು ಉತ್ಸವ ನಡೆಯಿತು.
ಉತ್ಸವಕ್ಕೆ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಚಾಲನೆ ನೀಡಿದರು.
ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ಶಾನವಾಝ್ ಪಾದೂರು, ಬ್ಲಾಕ್ ಪಂಚಾಯತ್ ಸದಸ್ಯೆ ಇಂದಿರಾ ಬಾಲಕೃಷ್ಣನ್, ಗ್ರಾಮ ಪಂಚಾಯತ್ ಸದಸ್ಯ ಬಿ.ವಿ. ಅಶ್ರಫ್, ವತ್ಸಲಾ ಶ್ರೀಧರನ್, ಕಮಲಾಕ್ಷಿ ಬಾಲಕೃಷ್ಣನ್, ಕೃಷಿ ಅಧಿಕಾರಿ ಶೀನ, ರತೀಶ್ ಕುಮಾರ್ ಮೊದಲಾದವರು ಮಾತನಾಡಿದರು.
Next Story





