ವಿಶ್ವದ ಅತ್ಯಂತ ಹಳೆಯ ವಿಮಾನವಾಹಕ ನೌಕೆ ಐಎನ್‌ಎಸ್ ವಿರಾಟ್‌ಗೆ ನೌಕಾಪಡೆಯ ವಿದಾಯ
.jpeg)
ಕೊಚ್ಚಿ,ಅ.23: ನೌಕಾಪಡೆಯಲ್ಲಿ 55 ವರ್ಷಗಳ ಸುದೀರ್ಘ ಸೇವೆಯ ಬಳಿಕ ವಿಶ್ವದ ಅತ್ಯಂತ ಹಳೆಯ ವಿಮಾನವಾಹಕ ನೌಕೆ ಐಎನ್‌ಎಸ್ ವಿರಾಟ್‌ಗೆ ಇಂದು ಬೆಳಿಗ್ಗೆ ಕೊಚ್ಚಿ ಬಂದರು ಮಂಡಳಿಯ ಎರ್ನಾಕುಲಂ ಹಡಗುಕಟ್ಟೆಯಲ್ಲಿ ಸಂಭ್ರಮದ ವಿದಾಯ ವನ್ನು ಕೋರಲಾಯಿತು.
ನೌಕಾಪಡೆಯಿಂದ ನಿವೃತ್ತಿಗೆ ಸಜ್ಜಾಗಿರುವ ಈ ಹಡಗನ್ನು ಅದಕ್ಕಾಗಿ ಈ ವರ್ಷದ ಅಂತ್ಯದಲ್ಲಿ ಮುಂಬೈನಲ್ಲಿ ನಡೆಯಲಿರುವ ಸಮಾರಂಭಕ್ಕಾಗಿ ಮೂರು ಟಗ್‌ಗಳು ಅದನ್ನು ವಾಪಸ್ ಅಲ್ಲಿಗೆ ಒಯ್ದವು.
ಐಎನ್‌ಎಸ್ ವಿರಾಟ್ ತನ್ನ 55 ವರ್ಷಗಳ ಸೇವಾವಧಿಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳುವ ಮುನ್ನ 27 ವರ್ಷಗಳ ಕಾಲ ಬ್ರಿಟಿಷ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿತ್ತು.
ಸೇವೆಯಿಂದ ನಿವೃತ್ತಿಯ ಬಳಿಕ ಈ ಹಡಗನ್ನು ಆಂಧ್ರಪ್ರದೇಶ ಸರಕಾರಕ್ಕೆ ನೀಡಲು ನೌಕಾಪಡೆಯು ಒಪ್ಪಿಕೊಂಡಿದೆ. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಅದನ್ನು ವಿಶಾಖ ಪಟ್ಟಣಂ ಬಂದರಿನಲ್ಲಿ ನೆಲೆಗೊಳಿಸಲು ಆಂಧ್ರಪ್ರದೇಶ ಸರಕಾರವು ಉದ್ದೇಶಿಸಿದೆ.
Next Story





