9,000 ರನ್ ಪೂರೈಸಿದ ನಾಯಕ ಧೋನಿ
ಮೂರನೆ ಏಕದಿನ:

ಮೊಹಾಲಿ, ಅ.23: ನ್ಯೂಝಿಲೆಂಡ್ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಇಂದು ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಏಕದಿನ ಕ್ರಿಕೆಟ್‌ನಲ್ಲಿ 9,000 ರನ್ ಪೂರೈಸಿದ್ದಾರೆ.
16.5ನೆ ಓವರ್‌ನಲ್ಲಿ ನ್ಯೂಝಿಲೆಂಡ್‌ನ ಸ್ಯಾಂಟ್ನೆರ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಧೋನಿ 9,000 ರನ್‌ಗಳ ಮೈಲುಗಳನ್ನು ಮುಟ್ಟಿದರು.
ಧೋನಿ ಈ ಸಾಧನೆ ಮಾಡಿದ ವಿಶ್ವದ 17ನೆ ಮತ್ತು ಭಾರತದ ಐದನೆ ಬ್ಯಾಟ್ಸ್ ಮನ್ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್(18,426), ಸೌರವ್ ಗಂಗುಲಿ(11,363), ರಾಹುಲ್ ದ್ರಾವಿಡ್(10,889), ಮತ್ತು ಮುಹಮ್ಮದ್ ಅಝರುದ್ದೀನ್(9,378) ಈ ಸಾಧನೆ ಮಾಡಿದ್ದರು.
ಧೋನಿ 9,000 ರನ್ ಪೂರೈಸಿರುವ ವಿಶ್ವದ ಮೂರನೆ ವಿಕೆಟ್ ಕೀಪರ್. ಶ್ರೀಲಂಕಾದ ಕುಮಾರ ಸಂಗಕ್ಕರ (14,234) ಮತ್ತು ಆಸ್ಟ್ರೇಲಿಯದ ಆ್ಯಡಮ್ ಗಿಲ್‌ಕ್ರೀಸ್ಟ್(9,619) ಈ ಮೊದಲು ದಾಖಲೆ ನಿರ್ಮಿಸಿದ್ದರು.
35ರ ಹರೆಯದ ಧೋನಿ 281 ಏಕದಿನ ಪಂದ್ಯಗಳಲ್ಲಿ 9 ಶತಕ ಮತ್ತು 61 ಅರ್ಧಶತಕಗಳನ್ನು ಒಳಗೊಂಡ 9,058 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಅವರು 10ನೆ ಶತಕ ವಂಚಿತಗೊಂಡರು. 80 ರನ್ ಗಳಿಸಿ ಔಟಾದರು.





