‘ಇಸಿಜಿಕಾನ್-2016’ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆ

ಮಂಗಳೂರು,ಅ.23: ಹೃದ್ರೋಗಕ್ಕೆ ಸಂಬಂಧಪಟ್ಟ ರಾಷ್ಟ್ರೀಯ ಕಾರ್ಯಗಾರ ‘ಇಸಿಜಿಕಾನ್ 2016’ನ್ನು ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಜಯರಾಮ್ ಭಟ್ ನಗರದ ಐಎಂಎ ಸಭಾಂಗಣದಲ್ಲಿ ಇಂದು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೃದ್ರೋಗವನ್ನು ಕಂಡು ಹಿಡಿಯುವ ಇಸಿಜಿಕಾನ್ ಸಮ್ಮೇಳನವು ವೈದ್ಯರಿಗೆ ಆಧುನಿಕ ತಂತ್ರಜ್ಞಾನದ ಅರಿವು ಮೂಡಿಸುವುದಲ್ಲದೆ ಜನರಿಗೆ ವೈದ್ಯರಿಂದ ಪ್ರಯೋಜನವಾದುದು ಎಂದು ಹೇಳಿದರು.
ಕಾರ್ಯಗಾರದಲ್ಲಿ ದೇಶದ ವಿವಿಧ ಭಾಗಗಳಿಂದ 300ಕ್ಕಿಂತ ಅಧಿಕ ನುರಿತ ವೈದ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹೃದ್ರೋಗ ತಜ್ಞರಾದ ಡಾ.ಕೆ. ಮುಕುಂದ್, ಡಾ.ಎಚ್ ಪ್ರಭಾಕರ್, ಡಾ. ಮನೀಷ್ ರೈ ಹಾಗೂ ಜಯದೇವ ಹಾರ್ಟ್ ಫೌಂಡೇಶನ್‌ನ ಹೃದ್ರೋಗ ತಜ್ಞ ಪ್ರೊ. ಜಯಪ್ರಕಾಶ್ ಎಸ್. ಹಾಗೂ ಐಎಂಎ ಮಂಗಳೂರು ಅಧ್ಯಕ್ಷ ಡಾ.ಅಮೃತ ಭಂಡಾರಿ ಹಾಗೂ ಡಾ.ರೋಶನ್ ಎಂ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಪ್ರಥಮವಾಗಿ ಮಂಗಳೂರಿನಲ್ಲಿ ಐಎಂಎ ಮಂಗಳೂರು ಹಾಗೂ ಮಂಗಳೂರು ಹಾರ್ಟ್ ಸ್ಕಾನ್ ಫೌಂಡೇಶನ್ ಸಹಯೋಗದಲ್ಲಿ ನಡೆಸಿಕೊಡಲಾಯಿತು.
Next Story





