ಕೊಹ್ಲಿ 26ನೆ ಶತಕ, ಶತಕ ವಂಚಿತ ಧೋನಿ

ಮೊಹಾಲಿ, ಅ.23: ನ್ಯೂಝಿಲೆಂಡ್ ವಿರುದ್ಧದ ಮೂರನೆ ಏಕದಿನ ಪಂದ್ಯದಲ್ಲಿ ಇಂದು ವಿರಾಟ್ ಕೊಹ್ಲಿ 26ನೆ ಏಕದಿನ ಶತಕ ದಾಖಲಿಸಿದರು. ಇದು ನ್ಯೂಝಿಲೆಂಡ್ ವಿರುದ್ಧ ಮೂರನೆ ಶತಕವಾಗಿದೆ. 174ನೆ ಏಕದಿನ ಪಂದ್ಯವನ್ನಾಡುತ್ತಿರುವ ಕೊಹ್ಲಿ 105 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಶತಕ ಪೂರ್ಣಗೊಳಿಸಿದರು. ಆದರೆ ನಾಯಕ ಧೋನಿ ಇಂದಿನ ಪಂದ್ಯದಲ್ಲಿ 10ನೆ ಶತಕ ವಂಚಿತಗೊಂಡರು. 80 ರನ್ ಗಳಿಸಿ ಔಟಾದರು.
Next Story





