ಜಗತ್ತಿನ ಅತಿ ಭಾರದ ಮಹಿಳೆಯ ತೂಕವೆಷ್ಟು ಗೊತ್ತೇ ?

ಕೈರೋ, ಅ. 23: 500 ಕೆಜಿ ತೂಗುವ ಈಜಿಪ್ಟ್‌ನ ಈ ಮಹಿಳೆ ಜಗತ್ತಿನ ಬದುಕಿರುವ ಅತಿ ಭಾರದ ಮಹಿಳೆಯಾಗಿದ್ದಾರೆ.
ಅಲೆಕ್ಸಾಂಡ್ರಿಯ ನಿವಾಸಿ 36 ವರ್ಷದ ಇಮಾನ್ ಅಹ್ಮದ್ ಅಬ್ದುಲಾಟಿ 25 ವರ್ಷಗಳಿಂದ ತನ್ನ ಮನೆಯಿಂದ ಹೊರಗೆ ಬಂದಿಲ್ಲ. ತನ್ನ ಅಗಾಧ ಗಾತ್ರದಿಂದ ಆಕೆಗೆ ತನ್ನ ಮಂಚ ಬಿಟ್ಟು ಏಳಲು ಅಥವಾ ಹೊರಳಲೂ ಸಾಧ್ಯವಾಗುತ್ತಿಲ್ಲ ಎಂದು ‘ಡೇಲಿ ಮೇಲ್’ ವರದಿ ಮಾಡಿದೆ.
ತಿನ್ನುವುದು, ಬಟ್ಟೆ ಬದಲಾಯಿಸುವುದು, ಸ್ವಚ್ಛಗೊಳಿಸುವುದು ಮತ್ತು ಶೌಚ ಮುಂತಾದ ದೈನಂದಿನ ಕ್ರಿಯೆಗಳಿಗಾಗಿ ಅವರು ತನ್ನ ತಾಯಿ ಮತ್ತು ಸಹೋದರಿಯನ್ನು ಅವಲಂಬಿಸಿದ್ದಾರೆ.
ಅವರು ಹುಟ್ಟುವಾಗಲೇ 5 ಕೆಜಿ ತೂಗಿದ್ದರು. 11 ವರ್ಷದವರಾಗಿದ್ದಾಗ ಅವರು ಕೈ ಮತ್ತು ಕಾಲುಗಳನ್ನು ಬಳಸಿ ಹರಿದಾಡುತ್ತಿದ್ದರು. ಪ್ರಾಥಮಿಕ ಶಾಲೆಯಲ್ಲಿರುವಾಗ ಪಾರ್ಶ್ವವಾಯುಗೆ ಒಳಗಾದ ಅವರು ಶಾಲೆ ಬಿಟ್ಟರು. ಅಂದಿನಿಂದ ಅವರು ಮಂಚದಲೇ ಇದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ನೆರವು ಒದಗಿಸುವಂತೆ ಅವರ ಕುಟುಂಬ ಈಜಿಪ್ಟ್ ಅಧ್ಯಕ್ಷರಿಗೆ ಮನವಿ ಮಾಡಿದೆ.
Next Story





