ಸ್ಫರ್ಧೆಗಳು ಮನಸುಗಳ ಬೆಸೆಯುವಂತಿರಲಿ: ಇಸಾಕ್ ಫೈಝಿ
.jpg)
ಮುಲ್ಕಿ, ಅ.23: ಸ್ಫರ್ಧಾಕೂಟಗಳು ಯಾವುದೇ ಜಾತಿ ಧರ್ಮ, ರಾಜಕೀಯ, ದ್ವೇಷಗಳಿಗೆ ಎಡೆ ಮಾಡಿಕೊಡುವಂತಾಗಿರದೆ, ಮಾನವನ ಮನಸ್ಸುಗಳನ್ನು ಬೆಸೆಯುಂತಿರಬೇಕು ಎಂದು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ಅಭಿಪ್ರಾಯಿಸಿದ್ದಾರೆ.
ಕೊಲ್ನಾಡು ಅಲ್‌ಖುಬಾ ಜುಮಾ ಮಸೀದಿಯ ಬಳಿ ಕೊಲ್ನಾಡು ಎಸ್ಕೆಎಸ್ಸೆಸ್ಸೆಫ್ ಸಂಯೋಜಿಸಿದ್ದ ಅಂತಾರಾಜ್ಯ ಮಟ್ಟದ ದಫ್ ಸ್ಫರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಕೆಎಸ್ಸೆಸ್ಸೆಫ್ ಎಂಬುವುದು ಶಂಸುಲ್ ಉಲಮಾರಂತಹಾ ಮಹಾನ್ ಪಂಡಿತ ಶಿರೋಮಣಿಗಳು ಮುಸ್ಲಿಂ ಸಮದಾಯದ ಏಳಿಗೆಯನ್ನು ಮನದಲ್ಲಿಟ್ಟುಕೊಂಡು ಕಟ್ಟಿಬೆಳೆಸಿರುವ ಸಮುದಾಯದ ಸಂಘಟನೆಯಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಖಾಝಿ ಹಾಗೂ ಸಮಸ್ತ ಕೇರಳ ಜಂಇಯತುಲ್ ಉಲಮಾ ಕೇಂದ್ರ ಮುಶಾವರದ ಸದಸ್ಯ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಝ್‌ಹರ್ ಫೈಝಿ ಬೊಳ್ಳೂರು ದುಆಶೀರ್ವಚನಗೈದರು. ಮಂಗಳೂರು ಕೇಂದ್ರ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ ಮುಖ್ಯ ಪ್ರಭಾಷಣಗೈದರು.
ವೇದಿಕೆಯಲ್ಲಿ ಅಲ್ ಖುಬಾ ಮಸೀದಿಯ ಖತೀಬ್ ಎಂ. ಶರೀಫ್ ದಾರಿಮಿ ಅಲ್ ಹೈತಮಿ ಕಾಸರಗೋಡು, ಮಸೀದಿಯ ಅಧ್ಯಕ್ಷ ಅಹ್ಮದ್ ಬಾವಾ, ಇನಾಯತ್ ಅಲಿ, ನೌಶಾದ್ ಹಾಜಿ ಸೂರಲ್ಪಾಡಿ, ಪುತ್ತುಬಾವಾ ಕಾರ್ನಾಡು, ಹಾಜಿ ಜಲಿಲ್ ಬದ್ರಿಯಾ, ಬಿ.ಎಂ.ಆಸೀಫ್, ರಿಝ್ವಿನ್ ಎಸ್.ಕೋಡಿ, ಎ.ಎಚ್.ರಫೀಕ್, ಹಕೀಂ ಕಾರ್ನಾಡು, ಶಮೀರ್ ಎ.ಎಚ್., ಇಸ್ಮಾಯೀಲ್ ಯಮಾನಿ ಮತ್ತಿತರರು ಅತಿಥಿಗಳಾಗಿದ್ದರು.







