‘ಲೌಕಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಶಿಕ್ಷಣ ಅಗತ್ಯ’

ವಿಟ್ಲ, ಅ.23: ಲೌಕಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಶಿಕ್ಷಣ ಅಗತ್ಯ. ಆಧುನಿಕ ಬದುಕಿನಲ್ಲಿ ಆಧ್ಯಾತ್ಮಿಕ ಶಿಕ್ಷಣದ ಕೊರತೆಯಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಮದ್ರಸಗಳು ಸುಸಂಸ್ಕೃತ ಪ್ರಜೆಗಳಾಗಿ ರೂಪಿಸುವ ಕೇಂದ್ರವಾಗಿದೆ ಎಂದು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಹೇಳಿದರು.
ಶನಿವಾರ ಎಸ್‌ಇಡಿಸಿ ಸ್ಪಟಿಕ ಸಂಭ್ರಮದ ಪ್ರಯುಕ್ತ ವಿಟ್ಲ ಟೌನ್ ಮಸೀದಿ ವಠಾರದಲ್ಲಿ ನಡೆದ ವಿಟ್ಲ ರೇಂಜ್ ಕಾನ್ಫರೆನ್ಸ್ ಹಾಗೂ ಎಸ್‌ಬಿಎಸ್ ಬಾಲ ಮುನ್ನಡೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್‌ಇಡಿಸಿ ಮದ್ರಸಗಳಿಗೆ ಆರ್ಥಿಕ ನೆರವು ನೀಡಿ, ನಾಡಿಗೆ ಶಿಸ್ತುಬದ್ಧವಾದ ಸಮೂಹವನ್ನು ಸಮರ್ಪಣೆ ಮಾಡಿದೆ. ಭಾರತದ ಸಂವಿಧಾನ ಪ್ರಪಂಚದ ಇತರ ದೇಶಗಳ ಸಂವಿಧಾನಕ್ಕಿಂತ ವೈಶಿಷ್ಟ್ಯತೆ ಪೂರ್ಣವಾಗಿದೆ. ನಮ್ಮ ಮೂಲಭೂತ ಹಕ್ಕುಗಳನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಎಂದರು.
ಜಿಪಂ ಸದಸ್ಯ ಎಂ.ಎಸ್ ಮುಹಮ್ಮದ್ ಮಾತನಾಡಿದರು. ಬಂಟ್ವಾಳ ತಾಲ್ಲೂಕು ಎಸ್‌ಜೆಯು ಪ್ರ.ಕಾರ್ಯದರ್ಶಿ ಜಿ.ಎಂ ಅಬೂಬಕರ್ ಸುನ್ನಿ ಪೈಝಿ ದುಆ ನೆರವೇರಿಸಿದರು.
ಬಂಟ್ವಾಳ ತಾಲೂಕು ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಶೈಖುನಾ ಮಹಮೂದುಲ್ ಪೈಝಿ ವಾಲೆಮುಂಡೋವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಸೈಯದ್ ಮುಹಮ್ಮದ್ ಹಬೀಬ್ ಪೂಕೋಯ ತಂಙಳ್ ಪೆರುವಾಯಿ ಅಧ್ಯಕ್ಷತೆ ವಹಿಸಿದ್ದರು.
ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಭಾಷಣ ಮಾಡಿದರು. ಉಮರ್ ಸಖಾಫಿ ಕಂಬಳಬೆಟ್ಟು, ಮುಹಮ್ಮದ್ ಅಲಿ ಪೈಝಿ ಬಾಳೆಪುಣಿ, ಇಬ್ರಾಹೀಂ ಪೈಝಿ ಕನ್ಯಾನ, ಅಹ್ಮದ್ ಶರೀಫ್ ಕಾಮಿಲ್ ಸಖಾಫಿ, ಅಬ್ದುಲ್ ಮಜೀದ್ ಮದನಿ, ವಿ.ಎಂ ಅಬೂಬಕರ್ ಸಖಾಫಿ, ಕೆ.ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಅಬ್ದುರ್ರಹ್ಮಾನ್ ಸಅದಿ ಕೋಲ್ಪೆ, ಅಬ್ದುಲ್ ಖಾದರ್ ಪೈಝಿ, ರಶೀದ್ ವಿಟ್ಲ, ವಿಟ್ಲ ಪಪಂ ಸದಸ್ಯ ಅಬ್ದುರ್ರಹ್ಮಾನ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.
ಮುಅಲ್ಲಿಂ ಮುಲಾಖಾತ್, ಮ್ಯಾನೇಜ್‌ಮೆಂಟ್ ಮೀಟ್, ಬಾಲಮುನ್ನಡೆ ಬಳಿಕ ವಿದ್ಯಾರ್ಥಿಗಳಿಂದ ರ್ಯಾಲಿ ನಡೆಯಿತು. ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಸ್ವಾಗತಿಸಿದರು. ಅಬ್ದುಲ್ ಸಲೀಂ ಹಾಜಿ ವಂದಿಸಿದರು. ರಿಯಾಝ್ ಬೈರಿಕಟ್ಟೆ, ಹನೀಫ್ ಸಖಾಫಿ ಪೆರುವಾಯಿ, ಅಬ್ದುಲ್ ಸಲಾಂ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.





