Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದೇಶಪ್ರೇಮದ ಬೆಲೆ ಹತ್ತು ಕೋಟಿಯೇ?

ದೇಶಪ್ರೇಮದ ಬೆಲೆ ಹತ್ತು ಕೋಟಿಯೇ?

ವಾರ್ತಾಭಾರತಿವಾರ್ತಾಭಾರತಿ23 Oct 2016 11:47 PM IST
share

 ಬಾಲಿವುಡ್ ಚಿತ್ರಗಳಲ್ಲಿ ದೇಶಪ್ರೇಮದ ಘೋಷಣೆಗಳು ಕೇಳಿದಾಗ ನಾವು ಅದೆಷ್ಟೋ ಬಾರಿ ಶಿಳ್ಳೆ ಹೊಡೆದಿದ್ದೇವೆ. ಭಾರತಕ್ಕೆ ದೇಶಪ್ರೇಮದ ಜನಪ್ರಿಯ ಫ್ಲೇವರ್ ಅಥವಾ ಸ್ವಾದವನ್ನು ಉಣಬಡಿಸಿರುವುದರಲ್ಲಿ ಬಾಲಿವುಡ್ ಅಥವಾ ಸಿನೆಮಾ ಜಗತ್ತಿನ ಕೊಡುಗೆ ಸಣ್ಣದೇನಲ್ಲ. ದೇಶಪ್ರೇಮ, ರಾಷ್ಟ್ರೀಯತೆ ಅಷ್ಟೇ ಏಕೆ, ನಮ್ಮ ಇತಿಹಾಸಗಳನ್ನೂ ನಾವಿಂದು ಸಿನೆಮಾಗಳ ಮೂಲಕ, ಟಿವಿ ಧಾರಾವಾಹಿಗಳ ಮೂಲಕ ಕಲಿಯುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೇ ಹೊತ್ತಿನಲ್ಲಿ, ರಾಜಕಾರಣಿಗಳೆಲ್ಲ ಸೇರಿ ಬಾಲಿವುಡ್‌ಗೆ ದೇಶಪ್ರೇಮದ ಪಾಠವನ್ನು ಕಲಿಸಲು ಹೊರಟಿರುವುದು ತಮಾಷೆಯಾಗಿದೆ. ಇದು ಕೇವಲ ತಮಾಷೆಯಷ್ಟೇ ಆಗಿದ್ದಿದ್ದರೆ ಬಿಟ್ಟು ಬಿಡಬಹುದಾಗಿತ್ತು. ಆದರೆ ಇದು ಬೇರೆ ರಾಜಕೀಯ ಮತ್ತು ಸಾಂಸ್ಕೃತಿಕ ದುರಂತಗಳಿಗೆ ಕಾರಣವಾಗುತ್ತಾ ಹೋಗುತ್ತಿದೆ.

ಅಂತಿಮವಾಗಿ ದೇಶಪ್ರೇಮದ ಬೆಲೆಯನ್ನೂ ನಿರ್ಧರಿಸುವ ಮಟ್ಟಗೆ ತಲುಪಿದೆ. ಈ ಹಿಂದೆಲ,್ಲ ಒಂದು ಸಿನೆಮಾ ನೋಡಲು ಅರ್ಹವಾಗಿದೆಯೋ ಇಲ್ಲವೋ ಎನ್ನುವುದನ್ನು ಅದರ ಕತೆ ಮತ್ತು ದೃಶ್ಯಗಳನ್ನು ಅವಲಂಬಿಸಿ ನಿರ್ಧರಿಸುತ್ತಿದ್ದೆವು. ಸೆನ್ಸಾರ್ ಬೋರ್ಡ್‌ಕೂಡ ಇದಕ್ಕಾಗಿಯೇ ಇದೆ. ಅಶ್ಲೀಲ ದೃಶ್ಯಗಳಿದ್ದರೆ ಅಥವಾ ಸಮಾಜದ ಶಾಂತಿ ಕೆಡಿಸುವ ದುರುದ್ದೇಶವನ್ನು ಹೊಂದಿದ್ದರೆ, ಕೆಟ್ಟ ಸಂದೇಶವನ್ನು ಹರಡುತ್ತಿದ್ದರೆ ಅಂತಹ ಸಿನೆಮಾಗಳಿಗೆ ಕತ್ತರಿ ಹಾಕುವುದಕ್ಕಾಗಿಯೇ ಸೆನ್ಸಾರ್ ಬೋರ್ಡ್‌ನ್ನು ನೇಮಕ ಮಾಡಲಾಗಿದೆ. ಆದರೆ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸೆನ್ಸಾರ್ ಬೋರ್ಡ್ ತೀವ್ರ ವಿವಾದಕ್ಕೊಳಗಾಗುತ್ತಾ ಬಂದಿದೆ. ಸರಕಾರ ಸೆನ್ಸಾರ್ ಬೋರ್ಡ್‌ನ ಮೂಲಕ ಚಿತ್ರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ಕೇಳಿ ಬಂದಿತು. ‘ಉಡ್ತಾ ಪಂಜಾಬ್’ ಚಿತ್ರ ಈ ಕಾರಣಕ್ಕಾಗಿಯೇ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಆದರೆ ಈಗ ರಾಜಕಾರಣಿಗಳು ಸೆನ್ಸಾರ್ ಬೋರ್ಡನ್ನೇ ಪಕ್ಕಕ್ಕೆ ತಳ್ಳಿ ಒಂದು ಚಿತ್ರದ ನಿಜವಾದ ಸೆನ್ಸಾರ್ ಬೋರ್ಡ್ ನಾವೇ ಆಗಿದ್ದೇವೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.

ಒಂದು ಚಿತ್ರ ಯಾಕೆ ಪ್ರದರ್ಶವಾಗಬಾರದು ಎನ್ನುವುದಕ್ಕೆ ಸೆನ್ಸಾರ್ ಬೋರ್ಡ್‌ಗಳಷ್ಟೇ ಅಲ್ಲ, ಕೆಲವು ರಾಜಕೀಯ ಪಕ್ಷಗಳು ಕೂಡ ಸೂಚನೆಗಳನ್ನು, ಆದೇಶಗಳನ್ನು ನೀಡಬಹುದಾದಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಅಂದರೆ ಈ ರಾಜಕೀಯ ಪಕ್ಷಗಳು ಒಂದು ಸಿನೆಮಾವನ್ನು ಯಾವ ಕಾರಣಕ್ಕಾಗಿಯಾದರೂ ತಡೆಯಬಹುದು. ಉದಾಹರಣೆಗೆ ನಾಯಕ ಧರಿಸಿರುವ ಚಪ್ಪಲಿ ಚೀನಾದೇಶದಲ್ಲಿ ತಯಾರಾಗಿರುವ ಕಾರಣಕ್ಕಾಗಿ ಅಥವಾ ನಾಯಕಿ ಉಟ್ಟಿರುವ ಸೀರೆ ಹಸಿರು ಬಣ್ಣವಿರುವುದಕ್ಕಾಗಿ ಅಥವಾ ಚಿತ್ರೀಕರಣಕ್ಕೆ ಬಳಸಿದ ತಂತ್ರಜ್ಞಾನ ಚೀನಾಕ್ಕೆ ಸಂಬಂಧಿಸಿದೆ ಎಂಬ ಕಾರಣಕ್ಕಾಗಿಯೂ ಅವರು ಚಿತ್ರ ಪ್ರದರ್ಶನವಾಗದಂತೆ ಆದೇಶ ನೀಡಬಹುದು. ಬಳಿಕ ಅವರು ಹೇಳಿದ ಸಂಸ್ಥೆಗಳಿಗೆ ಇಷ್ಟು ಕೋಟಿ ರೂ. ಕೊಟ್ಟು ದೇಶಪ್ರೇಮವನ್ನು ಸಾಬೀತು ಪಡಿಸಿ ತಮ್ಮ ಸಿನೆಮಾವನ್ನು ಬಿಡುಗಡೆ ಮಾಡಬೇಕಾದಂತಹ ಸನ್ನಿವೇಶವೊಂದು ಸೃಷ್ಟಿಯಾಗುತ್ತಿದೆ.

ಕರಣ್ ಜೋಹರ್ ಅವರ ಚಿತ್ರವೊಂದನ್ನು ರಾಜಕೀಯ ಪಕ್ಷಗಳು ತಡೆದ ರೀತಿಯಂತೂ ಅತ್ಯಂತ ಹಾಸ್ಯಾಸ್ಪದವಾಗಿದೆ. ಪಾಕಿಸ್ತಾನದ ನಟನನ್ನು ಹಾಕಿ ಕರಣ್ ಜೋಹರ್ ಚಿತ್ರ ಮಾಡಿದ್ದಾರೆ ಎನ್ನುವುದು ಅವರ ಮುಖ್ಯ ಆರೋಪ. ಇಷ್ಟಕ್ಕೂ ಪಾಕಿಸ್ತಾನದ ನಟರು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಿ ಭಾರತಕ್ಕೆ ಬಂದು ನಟಿಸಿರುವುದಲ್ಲ. ಅದಕ್ಕಾಗಿಯೇ ಭಾರತದ ಅಧಿಕೃತ ವೀಸಾವನ್ನು ಪಡೆದು ಬಂದಿದ್ದಾರೆ. ಆದುದರಿಂದ ಅವರಿಗೆ ವೀಸಾ ಕೊಟ್ಟ ಅಧಿಕಾರಿಗಳು ಮತ್ತು ಸರಕಾರವನ್ನೇ ನಾವು ಮೊತ್ತ ಮೊದಲು ದೇಶದ್ರೋಹಿಗಳು ಎಂದು ಕರೆಯಬೇಕಾಗುತ್ತದೆ. ಇಷ್ಟಕ್ಕೂ ‘ವೀಸಾ ಕೊಡುವ ಹೊತ್ತಿನಲ್ಲಿ ಭಾರತ - ಪಾಕ್ ಸಂಬಂಧ ಇಷ್ಟು ಹಳಸಿರಲಿಲ್ಲ’ ಎಂದು ರಾಜಕೀಯ ಮುಖಂಡರು ಹೇಳಬಹುದು. ಆದರೆ ಸರಕಾರ ವೀಸಾ ಕೊಟ್ಟಿದ್ದರಿಂದ ಅವರನ್ನು ಕರಣ್ ಜೋಹರ್ ತನ್ನ ಸಿನೆಮಾದಲ್ಲಿ ಬಳಸಿಕೊಳ್ಳಲು ಸಾಧ್ಯವಾಯಿತು. ಚಿತ್ರೀಕರಣ ನಡೆಯುತ್ತಿರುವಾಗ ಭಾರತ-ಪಾಕಿಸ್ತಾನದ ನಡುವೆ ‘ಬಿರಿಯಾನಿ’ ವಿನಿಮಯ ನಡೆಯುತ್ತಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಹೋಗಿ, ನವಾಝ್ ಶರೀಫ್ ಅವರ ಕುಟುಂಬದ ಮದುವೆಯಲ್ಲಿ ಬಿರಿಯಾನಿ ತಿಂದು ಬಂದಿದ್ದರು. ಆ ಸಂದರ್ಭದಲ್ಲೇ ಚಿತ್ರೀಕರಣ ನಡೆದಿರುವುದು. ಈಗ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಆ ಸಿನೆಮಾವನ್ನು ತಡೆದರೆ ಅಥವಾ ರಾಜಕಾರಣಿಗಳು ಬ್ಲಾಕ್‌ಮೇಲ್ ಮಾಡಿದರೆ ನಿರ್ಮಾಪಕನ ನಷ್ಟವನ್ನು ಭರಿಸುವವರಾರು? ಉಳಿದ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಯಾವ ಧೈರ್ಯದಲ್ಲಿ ನಿರ್ಮಾಣ ಮಾಡಬೇಕು?
 ಇಷ್ಟಕ್ಕೂ ಆತನೊಬ್ಬ ನಟನಷ್ಟೇ. ಚಿತ್ರದಲ್ಲಿ ಪಾಕಿಸ್ತಾನದ ಪರವಾಗಿ ಯಾವುದೇ ಅಂಶವಿದ್ದರೂ ಸಾರ್ವಜನಿಕರು ಅದನ್ನು ತಡೆಯಬಹುದಾಗಿತ್ತು ಅಥವಾ ಪಾಕಿಸ್ತಾನದಲ್ಲಿ ಚಿತ್ರೀಕರಣಗೊಂಡಿದ್ದರೂ ಅದನ್ನು ತಡೆಯುವ ಅವಕಾಶವಿತ್ತೇನೋ? ಪಾಕಿಸ್ತಾನದ ನಟನಿಗೆ ಅವಕಾಶ ಕೊಟ್ಟಿದುದರಿಂದ, ಆ ಹಣ ಪಾಕಿಸ್ತಾನಕ್ಕೆ ಹೋಗುತ್ತದೆ ಎಂಬ ಹುಂಬವಾದವನ್ನು ಕೆಲವರು ಮಂಡಿಸುತ್ತಾರೆ.

ಇವರಿಗೆ ಭಾರತ-ಪಾಕಿಸ್ತಾನದ ನಡುವೆ ವಾಣಿಜ್ಯ ಕೊಡುಕೊಳ್ಳುವಿಕೆ ನಡೆಯುತ್ತಿರುವುದು ಗೊತ್ತೇ ಇಲ್ಲ. ಭಾರತದಿಂದ ಹಲವು ವಸ್ತುಗಳು ಪಾಕಿಸ್ತಾನಕ್ಕೆ ರಫ್ತಾಗುತ್ತವೆ. ಹಾಗೆಯೇ ಪಾಕಿಸ್ತಾನದಿಂದ ಸಕ್ಕರೆ ಸೇರಿದಂತೆ ಹಲವು ವಸ್ತುಗಳು ಭಾರತಕ್ಕೆ ಆಮದಾಗುತ್ತವೆ. ಪಾಕಿಸ್ತಾನ-ಭಾರತದ ನಡುವೆ ವಿಮಾನ ಹಾರಾಟಗಳಿವೆ. ಅಂದರೆ ವಾಣಿಜ್ಯ ಕೊಡುಕೊಳ್ಳುವಿಕೆ ತಟಸ್ಥವಾಗಿಲ್ಲ. ಸಿನೆಮಾ ಕೂಡ ಒಂದು ಉದ್ಯಮ ಅಲ್ಲವೆ? ಹೀಗಿರುವಾಗ ಇವರಿಗಷ್ಟೇ ನಿರ್ಬಂಧ ಹೇರಿ ಉಳಿದ ವಾಣಿಜ್ಯ ವಹಿವಾಟುಗಳಿಗೇಕೆ ಪರವಾನಿಗೆ? ತಮಾಷೆಯೆಂದರೆ ಇದು ಮುಂದುವರಿದು ಮುಂದಿನ ದಿನಗಳಲ್ಲಿ ಚೀನಾದ ನಟರಿಗೂ ಭಾರತ ನಿಷೇಧ ಹೇರುತ್ತದೆಯೇ? ಜಾಕಿಚಾನ್ ಸೇರಿದಂತೆ ಹಲವು ಪ್ರತಿಭಾವಂತ ನಟರು ನಟಿಸಿರುವ ಚಿತ್ರಗಳನ್ನು ಭಾರತೀಯರು ನೋಡಬಾರದೇ? ಅದಕ್ಕೂ ಶಿವಸೈನಿಕರ ಅನುಮತಿ ಕೇಳಬೇಕೇ? ಎಲ್ಲಕ್ಕಿಂತ ವಿಪರ್ಯಾಸದ ಸಂಗತಿಯೆಂದರೆ ತಮ್ಮ ಬ್ಲಾಕ್‌ಮೇಲ್ ರಾಜಕಾರಣಕ್ಕೆ ಶಿವಸೇನೆ ಮತ್ತು ಇತರ ರಾಜಕೀಯ ನಾಯಕರು ಸೇನೆಯನ್ನು ಬಳಸಿದ್ದು. ಅಂತಿಮವಾಗಿ ಚಿತ್ರ ಬಿಡುಗಡೆ ಮಾಡಬೇಕಾದರೆ ‘ಸೇನೆಗೆ ಇಷ್ಟು ಕೋಟಿ ರೂಪಾಯಿ ಉಡುಗೊರೆ ನೀಡಬೇಕು’ ಎಂದು ಸಿನೆಮಾದವರ ಮೇಲೆ ಒತ್ತಡ ಹಾಕಿದರು. ಅಂದರೆ ದೇಶಪ್ರೇಮವನ್ನು ಸಾಬೀತು ಮಾಡಲು ಅವರು ಹಣವನ್ನು ನಿಗದಿ ಮಾಡಿದರು.

ಇಂತಹ ಬ್ಲಾಕ್‌ಮೇಲ್‌ಗಳ ಮೂಲಕ ವಸೂಲಿ ಮಾಡಿಯೇ ಅದರ ನಾಯಕರು ತಮ್ಮ ಪಕ್ಷವನ್ನು ಕಟ್ಟಿದ್ದಾರೆ. ‘ತಮ್ಮ ಪಕ್ಷಕ್ಕೆ ಇಷ್ಟು ಕೋಟಿ ನೀಡಬೇಕು’ ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲವಾದರೂ, ಸೈನಿಕರ ನಿಧಿಗೆ ಇಷ್ಟು ಕೋಟಿ ಕೊಡಿ ಎಂದು ಕೇಳಿದ್ದಾರೆ. ಆದರೆ ಸೇನೆ ತಕ್ಷಣ ಮಧ್ಯ ಪ್ರವೇಶಿಸಿ, ಈ ಬ್ಲಾಕ್‌ಮೇಲ್ ರಾಜಕಾರಣವನ್ನು ತಿರಸ್ಕರಿಸಿದೆ. ಅಂತಹ ಹಣ ಸೇನೆಗೆ ಬೇಕಾಗಿಲ್ಲ ಎಂದು ಹೇಳಿದೆ. ಆದರೆ ಭಾರತೀಯ ಸೇನೆಯನ್ನು ತಮ್ಮ ಬ್ಲಾಕ್‌ಮೇಲ್ ರಾಜಕಾರಣಕ್ಕೆ ಬಳಸಿರುವ ನಾಯಕರು ಈ ದೇಶದ ಸೇನೆಯನ್ನು, ದೇಶಭಕ್ತಿಯನ್ನು ಎಂತಹ ದುಸ್ಥಿತಿಗೆ ಇಳಿಸಿದ್ದಾರೆ ಎನ್ನುವ ಅರಿವು ನಮಗಿರಬೇಕಾಗಿದೆ.

ಭಾರತ-ಪಾಕ್ ನಡುವೆ ಸಂಬಂಧ ಹಳಸಿರುವಾಗ ದೇಶಪ್ರೇಮವನ್ನು ಸಾಬೀತು ಮಾಡಬೇಕಾದವರು ಕೇವಲ ಸಿನೆಮಾದವರು ಮಾತ್ರವಲ್ಲ. ರಾಜಕಾರಣಿಗಳೂ ತಮ್ಮ ದೇಶಪ್ರೇಮವನ್ನು ಸಾಬೀತು ಮಾಡುವ ಅಗತ್ಯವಿದೆ. ತನ್ನ ಸಂಪುಟದೊಳಗೆ ಲಕ್ಷಾಂತರ ರೂ. ಹಗರಣಗೈದ ಸಚಿವರನ್ನು ಇಟ್ಟುಕೊಂಡು ದೇಶಪ್ರೇಮವನ್ನು ಮಾತನಾಡುವುದು ಸೋಗಲಾಡಿತನವಾಗುತ್ತದೆ. ಇಂದು ಸಿನೆಮಾದವರ ದೇಶಪ್ರೇಮವನ್ನು ಪ್ರಶ್ನಿಸುವ ರಾಜಕಾರಣಿಗಳು, ತಮ್ಮದೇ ಕೇಂದ್ರ ಸರಕಾರದೊಳಗಿರುವ ಸಂಸದನೊಬ್ಬನ ಮೇಲೆ ದೇಶದ ಭದ್ರತಾ ರಹಸ್ಯವನ್ನು ಸೋರಿಕೆ ಮಾಡಿದ ಆರೋಪ ಬಂದಿದ್ದರೂ ಅವನ ವಿರುದ್ಧವೇಕೆ ಯಾರೂ ತುಟಿ ಬಿಚ್ಚುತ್ತಿಲ್ಲ? ಅದರಲ್ಲೇ ಅವರ ದೇಶಪ್ರೇಮದ ಅಸಲಿತನ ಹೊರಬೀಳುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X