ಸಮಯಸಾಧಕ ರಾಜಕಾರಣ
ಮಾನ್ಯರೆ,
ಅಲ್ಪಸಂಖ್ಯಾತರ ಹೆಸರಲ್ಲಿ ಅಧಿಕಾರವನ್ನು ಗಿಟ್ಟಿಸಿಕೊಂಡಿರುವ ಸಿ. ಎಂ. ಇಬ್ರಾಹಿಂ ಇತ್ತೀಚಿನ ದಿನಗಳಲ್ಲಿ ಸರಕಾರದ ವಿರುದ್ಧ, ಸಿದ್ದರಾಮಯ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ವತಃ ಚುನಾವಣೆಯಲ್ಲಿ ಗೆಲ್ಲಲಾಗದೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿರುವ, ಸಿದ್ದರಾಮಯ್ಯನವರ ಸ್ನೇಹಿತ ಎನ್ನುವ ಒಂದೇ ಕಾರಣಕ್ಕೆ ಸರಕಾರದಲ್ಲಿ ಸ್ಥಾನವೊಂದನ್ನು ತನ್ನದಾಗಿಸಿಕೊಂಡಿರುವ ಇಬ್ರಾಹಿಂ ಇದೀಗ ಉಂಡ ಮನೆಗೆ ಮತ್ತೆ ದ್ರೋಹವೆಸಗುತ್ತಿದ್ದಾರೆ. ಯಾಕೆಂದರೆ ಅವರ ಈ ವರ್ತನೆ ರಾಜಕೀಯಕ್ಕೆ ಹೊಸತಲ್ಲ. ಜೆಡಿಎಸ್, ಅಹಿಂದ, ಕಾಂಗ್ರೆಸ್ ಎಂದೆಲ್ಲ, ಅಧಿಕಾರಕ್ಕಾಗಿ ಯಾವ ವೇಷ ತೊಡಲೂ ಸಿದ್ಧರಿರುವ ಇಬ್ರಾಹಿಂ, ನಾಳೆ ಯಾವುದಾದರೂ ಒಂದು ಸಣ್ಣ ಹುದ್ದೆ ಸಿಗುವುದಾದರೆ ನರೇಂದ್ರ ಮೋದಿಯನ್ನೂ ಹೊಗಳಲು, ಆರೆಸ್ಸೆಸ್‌ನ ನಾಯಕರ ಕಾಲಿಗೆ ಉದ್ಧಂಡ ನಮಸ್ಕಾರ ಮಾಡಲೂ ಸಿದ್ಧರಿರುವವರು. ಇಂತಹ ನಾಯಕರನ್ನು ‘ಮುಸ್ಲಿಮ್ ನಾಯಕರು’ ಎಂದು ಬೆಳೆಸುವುದಕ್ಕಿಂತ, ಇವರನ್ನು ಹೊರ ಹಾಕಿ ನಿಜವಾದ ಯುವ ಮುಸ್ಲಿಮ್ ನಾಯಕರನ್ನು ಬೆಳೆಸುವುದರಿಂದ ಕಾಂಗ್ರೆಸ್‌ಗೆ ಅಲ್ಪವಾದರೂ ಪ್ರಯೋಜನವಿದೆ.





