Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ನಾನು ಭಾರತ ಮತ್ತು ಹಿಂದೂಗಳ ಅಭಿಮಾನಿ

ನಾನು ಭಾರತ ಮತ್ತು ಹಿಂದೂಗಳ ಅಭಿಮಾನಿ

ಪಿ.ಎ. ರೈಪಿ.ಎ. ರೈ24 Oct 2016 12:04 AM IST
share

 ನಾನು ಭಾರತ ಮತ್ತು ಹಿಂದೂಗಳ ಅಭಿಮಾನಿ
-ಡೊನಾಲ್ಡ್ ಟ್ರಂಪ್, ಅಮೆರಿಕನ್ ರಿಪಬ್ಲಿಕನ್ ಅಭ್ಯರ್ಥಿ
  ಹಾಗಾದರೆ ಭಾರತದಲ್ಲೇ ಚುನಾವಣೆಗೆ ನಿಲ್ಲಬಹುದಲ್ಲ?
---------------------
  ದೇಹ ಶುಚಿತ್ವವಾಗಿರಬೇಕಾದರೆ ಆಹಾರಕ್ಕೆ ಅಂಟಿಕೊಳ್ಳಬಾರದು
-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
  
ದೇಹಕ್ಕೆ ದೇಹ ಅಂಟಿಕೊಂಡಾಗಲೂ ಕೆಲವೊಮ್ಮೆ ಅಶುಚಿತ್ವ ಕಾಡುತ್ತದೆ.

---------------------

  ಮುಸ್ಲಿಮರ ವೋಟಿನ ಆಸೆಗಾಗಿ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ
-ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಸಂಸ್ಥಾಪಕ
  ಜೈಲಿನಲ್ಲಿ ಕೊಲೆಯಾದ ಜಂಬಗಿ ದಿನಾಚರಣೆ ಮಾಡಿದರೆ ಹೇಗೆ?
---------------------
  ರಾಯಣ್ಣ ಬ್ರಿಗೇಡ್ ಮುಗಿದ ಅಧ್ಯಾಯ
-ಬಿ.ಜೆ. ಪುಟ್ಟಸ್ವಾಮಿ, ಮಾಜಿ ಸಚಿವ
  ಅದು ಬ್ರಿಟಿಷರ ಕಾಲದಲ್ಲೇ ಮುಗಿದಿದೆ. ಆದರೆ ಬಿಜೆಪಿಯೊಳಗೆ ಮಾತ್ರ ಮುಗಿಯದ ಅಧ್ಯಾಯ.
---------------------
  ಭ್ರಷ್ಟ ಸಚಿವರಿಂದ ತುಂಬಿರುವ ರಾಜ್ಯ ಸರಕಾರದ ಸಾಧನೆ ಶೂನ್ಯ
-ಕೃಷ್ಣ ಜೆ.ಪಾಲೆಮಾರ್, ಮಾಜಿ ಸಚಿವ
  ಒಂದೇ ಒಂದು ಬ್ಲೂಫಿಲಂ ಹಗರಣ ನಡೆಯಲಿಲ್ಲವೆಂಬ ಬೇಜಾರೇ?
---------------------
  ಗೊಂದಲ ಸೃಷ್ಟಿಸುವವರು ಎಲ್ಲಾ ಕಾಲದಲ್ಲೂ ಇದ್ದರು
-ದೇವೇಗೌಡ, ಮಾಜಿ ಪ್ರಧಾನಿ
  
ರಾಜಕಾರಣಿಗಳಿರುವವರೆಗೆ ಗೊಂದಲ ಸೃಷ್ಟಿಸುವವರು ಇದ್ದೇ ಇರುತ್ತಾರೆ ಬಿಡಿ.

---------------------
  ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಲ್ಲ
-ಮಧು ಬಂಗಾರಪ್ಪ, ಶಾಸಕ
  ಶೀಘ್ರದಲ್ಲೇ ಅಜ್ಜ -ಮೊಮ್ಮಕ್ಕಳ ಪಕ್ಷವಾಗಲಿದೆಯೇ?
---------------------
   ನನ್ನ 42 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿರುವೆ
-ಶ್ರೀನಿವಾಸ ಪ್ರಸಾದ್, ಶಾಸಕ
  
ಈ ವಯಸ್ಸಲ್ಲಿ ಏಳುವುದು ಸ್ವಲ್ಪ ಕಷ್ಟವಾಗಬಹುದು.

---------------------
  ಕಾಂಗ್ರೆಸ್ ಶ್ರೀನಿವಾಸ ಪ್ರಸಾದ್‌ರನ್ನು ನಡೆಸಿಕೊಂಡ ರೀತಿಯಿಂದ ಅವರಿಗೆ ತುಂಬಾ ಬೇಸರವಾಗಿದೆ
-ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
  ಇನ್ನು ನಿಮ್ಮ ಸರದಿ.
  ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಯ ತಾಯಿ
-ನರೇಂದ್ರ ಮೋದಿ, ಪ್ರಧಾನಿ
  ತಂದೆಯ ಸ್ಥಾನ ವಹಿಸಿಕೊಳ್ಳಲು ನಿಮ್ಮಿಂದ ಪೈಪೋಟಿಯೇ?
---------------------
  ಸರ್ಜಿಕಲ್ ದಾಳಿಗೆ ಆರೆಸ್ಸೆಸ್ ಶಿಕ್ಷಣ ಕಾರಣ
-ಮನೋಹರ ಪಾರಿಕ್ಕರ್, ಕೇಂದ್ರ ಸಚಿವ
  ಅದರ ರಿಹರ್ಸಲ್ ದೇಶದೊಳಗೆ ಹಲವು ಬಾರಿ ನಡೆದಿದೆ. ಸಾವಿರಾರು ಅಮಾಯಕರು ಪ್ರಾಣವನ್ನೂ ತೆತ್ತಿದ್ದಾರೆ.
---------------------
  ನನ್ನ ಸಂಪೂರ್ಣ ಶಕ್ತಿಯನ್ನು ಜನರ ಸೇವೆಗಾಗಿ ಮುಡಿಪಾಗಿಡುತ್ತೇನೆ
-ಪ್ರಮೋದ್ ಮಧ್ವರಾಜ್, ಸಚಿವ
  ಹಾಗಾದರೆ ತಕ್ಷಣ ರಾಜಕೀಯದಿಂದ ಹೊರಬರಬೇಕಾಗುತ್ತದೆ.
---------------------
  ಬೋಗಸ್ ಪಡಿತರ ಕಾರ್ಡುದಾರರು ಜೈಲಿಗೆ
-ಯು.ಟಿ ಖಾದರ್, ಸಚಿವ
  
ಮೊದಲು ರಾಜಕಾರಣಿಗಳ ಮನೆಗಳಲ್ಲಿರುವ ಪಡಿತರ ಕಾರ್ಡ್ ತನಿಖೆ ಮಾಡಿಸಿ.

---------------------
  ಇಡೀ ಕಾಂಗ್ರೆಸ್ ಪಕ್ಷ ಈಗ ಆರು ಜನರ ಕಪಿ ಮುಷ್ಟಿಯಲ್ಲಿ ಸಿಲುಕಿದೆ
-ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
  ಜೆಡಿಎಸ್ ಒಬ್ಬರ ಕಪಿಮುಷ್ಠಿಯಲ್ಲಿರುವುದರಿಂದ ಅತ್ತ ಕಡೆಗೆ ವಾಲಿದಿರಾ?
---------------------
  ಪಾಕ್ ವಿರುದ್ಧ ಮೋದಿ ಯಾವ ಕ್ರಮ ಬೇಕಾದರೂ ಕೈಗೊಳ್ಳಲಿ ಆದರೆ ‘ಲವ್ ಲೆಟರ್’ ಬರೆಯುವುದನ್ನು ನಿಲ್ಲಿಸಲಿ
-ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
  
ವನ್ ವೇ ಲವ್. ಮಾಡಲಿ ಬಿಡಿ.

---------------------
  ಹಾವುಗಳೊಂದಿಗೆ ಇರುವವರಿಗೆ ಅವುಗಳೇ ಒಮ್ಮೆ ಕಚ್ಚುತ್ತವೆ
-ರಾಜನಾಥ ಸಿಂಗ್, ಕೇಂದ್ರ ಸಚಿವ
  ಅಂದರೆ ತಮ್ಮ ಭವಿಷ್ಯ ತಮಗೇ ಗೊತ್ತಿದೆಯೆಂದಾಯಿತು.
---------------------
  ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಸೈದ್ಧಾಂತಿಕ ಸಂಘರ್ಷದ ಹಿನ್ನೆಲೆಯಲ್ಲಿ ನಡೆದ ಹತ್ಯೆ
-ಸಿ.ಟಿ ರವಿ, ಶಾಸಕ
  
ಬಹುಶಃ ಬಡ್ಡಿ ಮಾಫಿಯಾದ ಜೊತೆಗೆ ನಡೆದ ಸೈದ್ಧಾಂತಿಕ ಸಂಘರ್ಷವಿರಬಹುದು.

---------------------
  ಅಂತರಂಗದ ಸ್ವಚ್ಛಭಾರತ ಅಗತ್ಯ
-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ
  ಅಂತರಂಗದೊಳಗೆ ದಲಿತರ ಪ್ರವೇಶವಿಲ್ಲವಲ್ಲ, ಶುಚಿಗೊಳಿಸುವವರಾರು?
---------------------
  ಬಿಜೆಪಿಯು ಉತ್ತರಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಈಗಲೇ ಘೋಷಿಸುವುದಿಲ್ಲ
-ಕೇಶವ ಪ್ರಸಾದ್ ವೌರ್ಯ, ಉ.ಪ. ಬಿಜೆಪಿ ಅಧ್ಯಕ್ಷ
  
ಬಹುಶಃ ಫಲಿತಾಂಶ ಮೊದಲೇ ಗೊತ್ತಾಗಿ ಬಿಟ್ಟಿರಬೇಕು.

---------------------
  ನನಗೂ ಪ್ರಧಾನಿಯಾಗುವ ಅರ್ಹತೆ ಇದೆ
-ಅಝಂಖಾನ್, ಎಸ್ಪಿ ನಾಯಕ
  ನವಾಝ್ ಶರೀಫ್ ಅದನ್ನು ಬಿಟ್ಟುಕೊಡಬೇಕಲ್ಲ?
---------------------
   ನಮಗೇನಿದ್ದರೂ ರಾಮ ಮಂದಿರವೇ ಬೇಕು ರಾಮ ಮ್ಯೂಸಿಯಂ ಎಂಬ ಲಾಲಿಪಾಪ್ ಬೇಡ
-ವಿನಯ ಕಟಿಯಾರ್, ಸಂಸದ
  
ಬೇಕಾದರೆ ಮ್ಯೂಸಿಯಂ ಜೊತೆಗೆ ಒಂದೆರಡು ಸರ್ಜಿಕಲ್ ದಾಳಿ ಫ್ರೀ ಎಂದಿದ್ದಾರೆ ಮೋದಿ.

---------------------
  ನೆಹರೂ ಬಗ್ಗೆ ಅಪಪ್ರಚಾರ ನಡೆಸುವವರು ದೇಶಭಕ್ತರಲ್ಲ, ದೇಶದ್ರೋಹಿಗಳು
-ರಮಾನಾಥ ರೈ, ಸಚಿವ
  ಅವರನ್ನೆಲ್ಲ ಮೊದಲು ತಮ್ಮ ಪಕ್ಷದಿಂದ ಉಚ್ಚಾಟಿಸಿ.
---------------------
  ಬಿಜೆಪಿ ಸೇರುವುದು ಆತ್ಮಹತ್ಯೆಗೆ ಸಮಾನ
-ವಸಂತ ಬಂಗೇರ, ಶಾಸಕ
  
ಆತ್ಮಸಾಕ್ಷಿಯಿಲ್ಲದಿದ್ದರೆ ಸಾಕು.

---------------------
  ರಾಮ ಮತ್ತು ಕೃಷ್ಣರು ಮಾಂಸಾಹಾರ ಸೇವಿಸಿದ್ದಕ್ಕೆ ಆಧಾರವಿಲ್ಲ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  
ರಾಮ ಮತ್ತು ಕೃಷ್ಣರು ಪಂಕ್ತಿ ಭೇದ ಮಾಡಿದ್ದಕ್ಕಾದರೂ ಆಧಾರ ಕೊಡಿ. ---------------------

share
ಪಿ.ಎ. ರೈ
ಪಿ.ಎ. ರೈ
Next Story
X