ಬಿಡಿಎ ಕಚೇರಿಯಲ್ಲಿ ಆತ್ಮಹತ್ಯೆಗೆತ್ನಿಸಿದ ಮಹಿಳೆ

ಬೆಂಗಳೂರು, ಅ.24: ಇಲ್ಲಿನ ಕುಮಾರ ಪಾರ್ಕ್‌ನಲ್ಲಿನ ಬಿಡಿಎ ಕಚೇರಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ಮಂಗಳಾ ಅವರ ಮನೆಯನ್ನು ರಿಂಗ್‌ರಸ್ತೆಗೆ ಅಂಡರ್‌ಪಾಸ್ ನಿರ್ಮಾಣದ ವೇಳೆ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಅವರಿಗೆ ಬಿಡಿಎ ಸೂಕ್ತ ಪರಿಹಾರವನ್ನು ನೀಡಿರಲಿಲ್ಲ. ಪರಿಹಾರಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡಿದ್ದ ಮಂಗಳಾ ಅಧಿಕಾರಿಗಳ ನಿರ್ಲಕ್ಷತನದಿಂದ ಬೇಸತ್ತು ವಿಶೇಷ ಭೂಸ್ವಾದೀನ ಅಧಿಕಾರಿಯ ಚೇಂಬರ್ ಎದುರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಂಗಳಾ ಅವರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
Next Story





