ದಾನ ನೀಡಿದ ಬ್ಯಾಗ್ 17 ವರ್ಷಗಳ ಬಳಿಕ ದಾನಿಯನ್ನು ಜೈಲು ಸೇರಿಸಿತು!
ನ್ಯಾಯ ಇಲ್ಲಿದೆ...

ಹಸುಗೂಸಿನ ಮೇಲೆ ಅತ್ಯಾಚಾರ ಎಸಗುವ ತನ್ನ ಫೋಟೋಗಳು ದಾನ ನೀಡಿದ ಬ್ಯಾಗ್‌ನಲ್ಲಿದ್ದ ಕಾರಣ 17 ವರ್ಷಗಳ ನಂತರ ವ್ಯಕ್ತಿ ಜೈಲು ಸೇರಿದ್ದಾನೆ. 49 ವರ್ಷದ ಗ್ಯಾರಿ ಸೋವಿ ತನ್ನ ಬಳಿಯಿದ್ದ ಟೋಟ್ ಬ್ಯಾಗ್ ಅನ್ನು ಓಹಿಯೋದ ಕೊಲಂಬಸ್‌ನ ಸೆಕೆಂಡ್ ಹ್ಯಾಂಡ್ ಮಳಿಗೆಗೆ ಕೊಟ್ಟಿದ್ದ. ಆದರೆ ಅದರ ಒಳಗೆ ಇದ್ದ ಸರಕುಗಳನ್ನು ಪರೀಕ್ಷಿಸಿದಾಗ ಒಬ್ಬ ಸಾಲ್ವೇಶನ್ ಆರ್ಮಿ ಕಾರ್ಮಿಕನಿಗೆ ಮಗುವಿನ 32 ನಗ್ನ ಚಿತ್ರಗಳು ಸಿಕ್ಕಿದ್ದವು. ಅದರಲ್ಲಿ ವ್ಯಕ್ತಿ 16ರಿಂದ 18 ತಿಂಗಳ ಮಗುವಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಫೋಟೋಗಳೂ ಇದ್ದವು.
ಈಗ ಗ್ಯಾರಿ ಸೋವಿ ಮೇಲೆ 13ರೊಳಗಿನ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ 1999ರ ಸಮಯದಲ್ಲಿ ಅತ್ಯಾಚಾರ ಎಸಗಿದ ಆರೋಪ ದಾಖಲಾಗಿದೆ. ಪೊಲೀಸರು ಬ್ಯಾಗಿನಲ್ಲಿ ಉಳಿಸಿದ ವಿಳಾಸವನ್ನು ಬಳಸಿಕೊಂಡು ಸೋವಿಯನ್ನು ಪತ್ತೆ ಮಾಡಿದ್ದಾರೆ. ಕೊಲಂಬಸ್ ಡಿಸ್ಪಾಚ್ ಪ್ರಕಾರ ಪೊಲೀಸರಿಂದ ಬಂಧನಕ್ಕೊಳಗಾದ ಸೋವಿ, “ನಾನೊಬ್ಬ ರೋಗಿ” ಎಂದು ಹೇಳಿದ್ದಾನೆ. ಫ್ರಾಂಕ್ಲಿನ್ ಕೌಂಟಿ ಕಾಮನ್ ಪ್ಲೀಸ್ ನ್ಯಾಯಾಲಯದ ಮುಂದೆ ಹಾಜರಾಗಿರುವ ಸೋವಿಯ ಮೇಲೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದೆ.
ಗ್ಯಾರಿ ಸೋವಿ ಮೇಲೆ 13ರೊಳಗಿನ ಬಾಲಕಿಯ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯಕ್ಕಾಗಿ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅವರ ಉಳಿದ ಜೀವಿತಾವಧಿಯಲ್ಲಿ ಲೈಂಗಿಕ ಹಲ್ಲೆ ನಡೆಸಿದಾತ ಎಂದೇ ಅವರ ವಿವರ ನೋಂದಣಿಗೊಳ್ಳಲಿದೆ. ಹೀಗಾಗಿ ಬಿಡುಗಡೆಗೊಂಡ ಬಳಿಕವೂ ಪ್ರತೀ 90 ದಿನಗಳಿಗೊಮ್ಮೆ ಆತ ನೋಂದಣಿ ಕಚೇರಿಗೆ ಹೋಗಿ ಸಹಿ ಹಾಕಬೇಕಾಗುತ್ತದೆ. ಗ್ಯಾರಿ ಸೋವಿ ಮೇಲೆ 35,000 ಡಾಲರ್ ದಂಡವನ್ನೂ ವಿಧಿಸಲಾಗಿದೆ.
ಕೃಪೆ: http://www.mirror.co.uk/







