ಮಂಜೇಶ್ವರ: ಇಬ್ಬರ ಜಗಳ, ಮೂರನೆಯವನಿಗೆ ಇರಿತ
.jpg)
ಮಂಜೇಶ್ವರ, ಅ.24: ಯುವಕರ ಮಧ್ಯೆ ಹೊಡೆದಾಟ ನಡೆಯುತ್ತಿರುವುದನ್ನು ಕಂಡು ತಡೆಯಲು ಯತ್ನಿಸಿದ ಯುವಕನೋರ್ವ ಚೂರಿ ಇರಿತದಿಂದ ಗಾಯಗೊಂಡ ಘಟನೆ ಮಂಜೇಶ್ವರದ ನವಚೇತನ ಕ್ಲಬ್ ಪರಿಸರದಲ್ಲಿ ರವಿವಾರ ರಾತ್ರಿ ವೇಳೆ ನಡೆದಿದೆ.
ಬಾಡೂರು ಚಾಕಟೆ ಚಾಲ್‌ನ ಗೋವಿಂದ ಮೂಲ್ಯ ಎಂಬವರ ಪುತ್ರ ಸಿ.ಎಚ್. ದೀಪಕ್ (24) ಇರಿತದಿಂದ ಗಾಯಗೊಂಡವರು. ಎದೆ, ಹೊಟ್ಟೆಗೆ ಇರಿತದಿಂದ ಗಾಯಗೊಂಡ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಲಬ್‌ನ ಕಾರ್ಯದರ್ಶಿ ದೀಪಕ್ ಕ್ಲಬ್‌ನಲ್ಲಿದ್ದ ವೇಳೆ ಜಗದೀಶ್ ಮತ್ತು ಜನಾರ್ದನ ಎಂಬಿಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದರು. ಇದನ್ನು ಕಂಡು ದೀಪಕ್ ಹೊಡೆದಾಟವನ್ನು ತಡೆಯಲು ಯತ್ನಿಸಿದಾಗ ಜನಾರ್ದನನ ಸಹೋದರ ಸತೀಶ್ ಎಂಬಾತ ದೀಪಕ್‌ಗೆ ಚಾಕುನಿಂದ ಇರಿದಿದ್ದಾನೆ ಎಂದು ದೂರು ನೀಡಲಾಗಿದೆ.
Next Story





