ಡಿಕೆಎಂಎ ವತಿಯಿಂದ ಫಯಾಝ್ ಕೋಟೆಪುರ ಕುಟುಂಬಕ್ಕೆ ಧನಸಹಾಯ

ಮಂಗಳೂರು, ಅ.24: ಸಮುದ್ರ ಮಧ್ಯದಲ್ಲಿ ಸಿಲುಕಿದ್ದ ಓರ್ವನನ್ನು ರಕ್ಷಿಸಿ ಮತ್ತೋರ್ವನ ರಕ್ಷಣಾ ಕಾರ್ಯಾಚರಣೆಯಲ್ಲಿರುವಾಗಲೇ ಮೃತರಾದ ಉಳ್ಳಾಲ ಕೋಟೆಪುರದ ಫಯಾಝ್ ಕುಟುಂಬಕ್ಕೆ ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೆಷನ್ ವತಿಯಿಂದ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ಫಯಾಝ್ ಕುಟುಂಬಕ್ಕೆ ಶಾಶ್ವತ ಆದಾಯದ ಮೂಲವಾಗಿ ಮನೆಯೊಂದನ್ನು ಖರೀದಿಸಲು ಸಹಕರಿಸುವ ಸಲುವಾಗಿ 2 ಲಕ್ಷ ರೂ.ಗಳನ್ನು ಡಿಕೆಎಂಎ ಸ್ಥಾಪಕಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಫಯಾಝ್‌ರ ತಾಯಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಡಿಕೆಎಂಎ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಗ್ರೂಪ್ 4, ಕಾರ್ಯದರ್ಶಿ ರಫೀಕ್ ಮಾಸ್ಟರ್, ಸಂಘಟನಾ ಕಾರ್ಯದರ್ಶಿ ಎಸ್.ಎಂ.ಫಾರೂಕ್, ಝಾಕಿರ್ ಇಖ್ಲಾಸ್ ಟ್ರಾವೆಲ್ಸ್ ಮತ್ತು ಫಯಾಝ್ ಕುಟುಂಬಸ್ಥರು ಉಪಸ್ಥಿತರಿದ್ದರು.
Next Story





