ಸತ್ತ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ:ಆರೋಪಿ ಸೆರೆ

ಹೈದರಾಬಾದ್,ಅ.24: ಇಲ್ಲಿಯ ಶಾಸ್ತ್ರಿಪುರಂ ಪ್ರದೇಶದ ನಿವಾಸಿಗಳು ಸೋಮವಾರ ಅತ್ಯಂತ ವಿಲಕ್ಷಣ ದೃಶ್ಯವೊಂದಕ್ಕೆ ಸಾಕ್ಷಿಯಾದರು. ಪೊದೆಗಳ ಬಳಿ ಸಂಪೂರ್ಣ ಬೆತ್ತಲೆಯಾಗಿದ್ದ 25ರ ಹರೆಯದ ಯುವಕನೋರ್ವ ನಾಯಿಯೊಂದನ್ನು ಕೊಂದು ಅದರ ಕಳೇಬರದ ಜೊತೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದನ್ನು ನೋಡಿದ ಅವರಿಗೆ ಒಂದು ಕ್ಷಣ ತಮ್ಮ ಕಣ್ಣುಗಳನ್ನೇ ನಂಬಲು ಸಾಧ್ಯವಾಗಿರಲಿಲ್ಲ. ತಕ್ಷಣ ಎಚ್ಚೆತ್ತುಕೊಂಡ ಅವರು ವಿಕೃತ ಕಾಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯು ದಿಲ್ಲಿಯವನಂತೆ ಕಂಡು ಬರುತ್ತಿದ್ದು, ಆತನ ವಿರುದ್ಧ ಐಪಿಸಿ 429 ಮತ್ತು 377 ಕಲಂಗಳಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ಮಧ್ಯೆ ಹ್ಯೂಮೇನ್ ಸೊಸೈಟಿ ಇಂಟರ್‌ನ್ಯಾಷನಲ್ ಇಂಡಿಯಾ ಈ ಹೇಯ ಕೃತ್ಯಕ್ಕೆ ಗರಿಷ್ಠ ದಂಡನೆಯಾಗಬೇಕೆಂದು ಆಗ್ರಹಿಸಿದೆ.
Next Story





