Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ...

‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ ಹೈ’

ನಜೀಬ್ ಜಂಗ್ ನಾಪತ್ತೆಯಾದ ಮುನ್ನಾ ದಿನ ರಾತ್ರಿ ಜೆಎನ್‌ಯುದಲ್ಲಿ ಇದು ನಡೆದಿತ್ತೇ?

ವಾರ್ತಾಭಾರತಿವಾರ್ತಾಭಾರತಿ24 Oct 2016 10:38 PM IST
share
‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ ಹೈ’

 ಹೊಸದಿಲ್ಲಿ,ಅ.24: ಜೆಎನ್‌ಯು ವಿದ್ಯಾರ್ಥಿ ನಜೀಬ್ ಜಂಗ್ ನಾಪತ್ತೆಯಾಗುವ ಮುನ್ನಾ ದಿನದ ರಾತ್ರಿ ನಡೆದಿದ್ದ ಘಟನಾವಳಿಗಳನ್ನು ಪ್ರತ್ಯಕ್ಷದರ್ಶಿಯೋರ್ವ ಬಯಲುಗೊಳಿಸಿದ್ದಾನೆ.


ಅ.14ರಂದು ರಾತ್ರಿ ಸುಮಾರು 30 ವಿದ್ಯಾರ್ಥಿಗಳ ಗುಂಪೊಂದು ನಜೀಬ್ ಜಂಗ್ ಮೇಲೆ ಹಲ್ಲೆ ನಡೆಸಿ,ಅವಾಚ್ಯ ಶಬ್ದಗಳಿಂದ ಬೈಯ್ದು ಕೋಮು ನಿಂದನೆಯನ್ನು ಮಾಡಿತ್ತೆನ್ನಲಾಗಿದೆ. ಅ.15ರಿಂದ ನಜೀಬ್ ನಾಪತ್ತೆಯಾಗಿದ್ದಾನೆ.


ಗುಂಪಿನಲ್ಲಿದ್ದ ಕೆಲವರು ‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ ಹೈ(ನಾವು ಅವನನ್ನು 72 ಕನ್ಯೆಯರ ಬಳಿಗೆ ಕಳುಹಿಸುತ್ತೇವೆ)’ಎಂದು ಹೇಳುತ್ತಿದ್ದುದು ಕೇಳಿಬಂದಿತ್ತು.
ಅಂದು ರಾತ್ರಿ ನಡೆದಿದ್ದ ಘಟನೆಗಳನ್ನು ಜೆಎನ್‌ಯುದಲ್ಲಿ ಎಂ.ಫಿಲ್ ವಿದ್ಯಾರ್ಥಿಯಾಗಿರುವ ಶಾಹಿದ್ ರಝಾ ಖಾನ್ ನೆನಪಿಸಿಕೊಂಡಿದ್ದಾನೆ.
14ರಂದು ನಡೆದಿದ್ದೇನು...?


ಅಂದು ರಾತ್ರಿ ಏನೋ ಶಬ್ದ ಕೇಳಿದ ಖಾನ್ ಹಾಸ್ಟೆಲ್‌ನ ಮೊದಲ ಮಹಡಿಗೆ ಧಾವಿಸಿದ್ದ. ಖಾನ್ ಕೆಳಗೆ ಬರುತ್ತಿರುವುದನ್ನು ಕಂಡು ಎಬಿವಿಪಿ ಕಾರ್ಯಕರ್ತ ವಿಕ್ರಾಂತ ಕುಮಾರ ಆತನ ಬಳಿಗೆ ಬಂದು,ನಜೀಬ್ ತನ್ನನ್ನು ವಿನಾಕಾರಣ ಹೊಡೆಯುತ್ತಿದ್ದಾನೆ,ಅವನಿಂದ ರಕ್ಷಿಸು ಎಂದು ಕೇಳಿಕೊಂಡಿದ್ದ.


ಆದರೆ ಖಾನ್ ನಜೀಬ್‌ನ ರೂಮಿಗೆ ತೆರಳಿದಾಗ ಕಂಡ ದೃಶ್ಯ ಬೇರೆಯೇ ಆಗಿತ್ತು. ಆತನ ಬಾಯಿ ಮತ್ತು ಮೂಗಿನಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು. ಖಾನ್ ಮತ್ತು ಇತರರು ಸೇರಿಕೊಂಡು ನಜೀಬ್‌ನನ್ನು ತೊಳೆಸಲೆಂದು ಬಾತ್‌ರೂಮಿಗೆ ಕರೆದೊಯ್ದಿದ್ದರಷ್ಟೇ, ಸುಮಾರು 25-30 ಇತರ ವಿದ್ಯಾರ್ಥಿಗಳ ಗುಂಪು ಬಾತ್‌ರೂಮಿಗೇ ನುಗ್ಗಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿತ್ತು.


ಮೆಸ್ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ಪ್ರಚಾರಕ್ಕಾಗಿ ವಿಕ್ರಾಂತ್ ನಜೀಬ್ ರೂಮಿಗೆ ತೆರಳಿದ್ದು,ಆ ವೇಳೆ ಆತನೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ. ವಿಕ್ರಾಂತ್ ತನ್ನ ಮಣಿಗಂಟಿಗೆ ಕೆಂಪು ದಾರ ಕಟ್ಟಿಕೊಂಡಿದ್ದನ್ನು ನೋಡಿ ನಜೀಬ್ ಆತನ ಮೇಲೆ ಹಲ್ಲೆ ನಡೆಸಿದ್ದ ಎಂದು ಎಬಿವಿಪಿ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
 ಗುಂಪು ನಜೀಬ್‌ನನ್ನು ಮೇಲಿನ ಮಹಡಿಗೆ ಎಳೆದೊಯ್ದಿತ್ತು. ಅದೇ ವೇಳೆ ಅಲ್ಲಿದ್ದವರಾರೋ ದೀಪಗಳನ್ನು ಆರಿಸಿದ್ದರು, ಕತ್ತಲಲ್ಲೂ ನಜೀಬ್‌ಗೆ ಹೊಡತಗಳು ಬೀಳುತ್ತಿದ್ದವು ಎಂದು ಖಾನ್ ಹೇಳಿದ್ದಾನೆ.


ಗುಂಪು ನಜೀಬ್‌ನನ್ನು ವಾರ್ಡನ್ ರೂಮಿಗೆ ಎಳೆದೊಯ್ದಿತ್ತು. ಕನಿಷ್ಠ ವಾರ್ಡನ್ ಆದರೂ ನಿಷ್ಪಕ್ಷಪಾತವಾಗಿ ವರ್ತಿಸಬೇಕಾಗಿತ್ತು. ಅಲ್ಲಿ ಎಲ್ಲ ತಪ್ಪನ್ನೂ ನಜೀಬ್ ತಲೆಗೇ ಕಟ್ಟಲಾಗಿತ್ತು. ‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ ಹೈ’ಎಂದು ಅವರು ಹೇಳುತ್ತಲೇ ಇದ್ದರು ಎಂದು ಖಾನ್ ನೆನಪಿಸಿಕೊಂಡಿದ್ದಾನೆ.


ನಜೀಬ್‌ನ ಗುಣನಡತೆಯ ಬಗ್ಗೆ ಆತನ ರೂಮ್‌ಮೇಟ್ ಕಾಸಿಂ ವಾರ್ಡನ್‌ಗೆ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದ. ಆತ ಸಿಡುಕಿನ ಸ್ವಭಾವದವಲ್ಲ. ಆತ ಮಾನಸಿಕ ಅಸ್ವಸ್ಥ ಎಂಬ ಎಬಿವಿಪಿ ಆರೋಪ ಸಂಪೂರ್ಣ ಸುಳ್ಳು ಎಂದಾತ ಸ್ಪಷ್ಟಪಡಿಸಿದ್ದ. ನಜೀಬ್ ಒಂಟಿ ಜೀವಿಯಾಗಿದ್ದಾನೆ ಮತ್ತು ತನ್ನಷ್ಟಕ್ಕೆ ತಾನಿರುತ್ತಾನೆ ಎಂದು ಆತ ಬರೆದಿದ್ದ. ವಿಚಿತ್ರವೆಂದರೆ,ನಜೀಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹಾಸ್ಟೆಲ್‌ನಿಂದ ಆತನನ್ನು ನಿರ್ಬಂಧಿಸಬೇಕು ಎಂದು ಆತ ಬರೆದಿದ್ದಾನೆ.


 ಈ ಮುಚ್ಚಳಿಕೆ ಪತ್ರದ ಋಜುತ್ವ ದೃಢಪಟ್ಟಿಲ್ಲ. ಈ ಪತ್ರವನ್ನು ಕಾಸಿಂ ಬರೆದಿದ್ದಲ್ಲ,ಎಬಿವಿಪಿ ಸದಸ್ಯ ಬರೆದಿದ್ದು ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಮಾನಸಿಕ ಅಸ್ವಸ್ಥ ವಿದ್ಯಾರ್ಥಿ ಜೆಎನ್‌ಯುದಲ್ಲಿ ಅತ್ಯಂತ ಕಠಿಣ ಕೋರ್ಸ್‌ನ್ನು ವ್ಯಾಸಂಗ ಮಾಡುವುದು ಸಾಧ್ಯವೇ? ಆತ ಅತ್ಯಂತ ಬುದ್ಧಿವಂತನಾಗಿದ್ದ ಎಂದು ನಜೀಬ್‌ನ ಚಿಕ್ಕಮ್ಮನ ಮಗಳು ಸದಾಫ್ ಮುಶಾರಫ್ ಸುದ್ದಿಗಾರರಿಗೆ ತಿಳಿಸಿದರು.
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X