ಸಮವಸ್ತ್ರ ಸಂಹಿತೆಗೆ ಆಗ್ರಹಿಸಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

ತಿೀರ್ಥಹಳ್ಳಿ, ಅ.24: ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದರೂ ಮುಸ್ಲಿಮ್ ವಿದ್ಯಾರ್ಥಿನಿಯರು ನಿಯಮವನ್ನು ಪಾಲಿಸುತ್ತಿಲ್ಲ ಎಂದು ತೀರ್ಥಹಳ್ಳಿಯ ಸರಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳು ಕೊರಳಿಗೆ ಕೇಸರಿ ಶಾಲನ್ನು ಕಟ್ಟಿಕೊಂಡು ಪ್ರತಿಭಟಿಸಿ ಕಾಲೇಜಿಗೆ ಹಾಜರಾದ ಘಟನೆ ವರದಿಯಾಗಿದೆ.
ಸಮವಸ್ತ್ರ ನಿಯಮ ಏಕರೂಪವಾಗಿ ಜಾರಿಗೊಳ್ಳುವುದರ ಕುರಿತು ಅನೇಕ ಬಾರಿ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ. ಬುರ್ಖಾ ಧರಿಸಿದ ಮುಸ್ಲಿಮ್ ವಿದ್ಯಾರ್ಥಿನಿಯರು ಸಮವಸ ನಿಯಮ ಉಲ್ಲಂಸುತ್ತಿರುವುದನ್ನು ವಿರೋಧಿಸಿ ಕೊರಳಿಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಸಾಂಕೇತಿಕವಾಗಿ ಪ್ರತಿಭಟಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಈ ವಿಚಾರದ ಬಗ್ಗೆ ಹಲವು ಬಾರಿ ಪ್ರಾಂಶುಪಾಲರ ಗಮನಕ್ಕೆ ತಂದು ಮನವಿ ನೀಡಿದ್ದೇವೆ. ಆದರೂ ಸಹ ಈ ವಿಚಾರದ ಬಗ್ಗೆ ಪ್ರಾಂಶುಪಾಲರು ಗಮನ ಹರಿಸಿಲ್ಲ. ವಿದ್ಯಾರ್ಥಿಗಳೆಲ್ಲಾ ಸಮಾನರು ಎಂಬ ಉದ್ದೇಶದಿಂದ ಸಮವಸ್ತ್ರ ಸಂಹಿತೆ ಜಾರಿಗೊಳಿಸಿದ ನಂತರ ಬುರ್ಖಾ ಧರಿಸಲು ಅವಕಾಶ ನೀಡಿರುವುದು ತಪ್ಪು ಎಂದು ವಿದ್ಯಾರ್ಥಿನಿಗಳು ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಪ್ರಾಂಶುಪಾಲ ದೇವರಾಜ್, ಈ ವಿಚಾರದ ಬಗ್ಗೆ ಕಾಲೇಜು ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಶೀಘ್ರದಲ್ಲಿಯೇ ಸಭೆ ನಡೆಸುತ್ತೇವೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.







