Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಲ್ಪಸಂಖ್ಯಾತರಿಗೆ ನ್ಯಾಯ ಮರೀಚಿಕೆಯೇ?

ಅಲ್ಪಸಂಖ್ಯಾತರಿಗೆ ನ್ಯಾಯ ಮರೀಚಿಕೆಯೇ?

ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಿಗೆ ಪತ್ರ ಬರೆದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು

ರಾಮ್ ಪುನಿಯಾನಿರಾಮ್ ಪುನಿಯಾನಿ24 Oct 2016 11:21 PM IST
share
ಅಲ್ಪಸಂಖ್ಯಾತರಿಗೆ ನ್ಯಾಯ ಮರೀಚಿಕೆಯೇ?

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಿಗೆ ಬರೆದಿದ್ದ ಪತ್ರವೊಂದರಲ್ಲಿ (26 ಸೆಪ್ಟಂಬರ್ 2016) ‘‘ದಾದ್ರಿಯಲ್ಲಿ ಅಖ್ಲಾಕ್ ಎಂಬವರು ಗೋರಕ್ಷಕರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಈ ಹೇಯವಾದ ಘಾತಕಕೃತ್ಯವನ್ನು ಎಸಗಿರುವ ದುಷ್ಕರ್ಮಿಗಳನ್ನು ಶಿಕ್ಷಿಸುವ ಬದಲು ಪೊಲೀಸರು ಹಾಗೂ ಸ್ಥಳೀಯ ನ್ಯಾಯಾಧೀಶರು, ಅಖ್ಲಾಕ್ ಕುಟುಂಬದ ವಿರುದ್ಧ ಕಾನೂನುಕ್ರಮ ಕೈಗೊಳ್ಳುತ್ತಿದ್ದಾರೆ.... ಪೊಲೀಸರಿಗೇನು ಹುಚ್ಚು ಹಿಡಿದಿದೆಯೇ?...’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  2002ರಲ್ಲಿ ನಡೆದ ಅಕ್ಷರಧಾಮ ದೇವಾಲಯ ದಾಳಿ ಪ್ರಕರಣದಲ್ಲಿ ಚಾಂದ್‌ಖಾನ್ ಯಾನೆ ಶಾನ್‌ಖಾನ್ 11 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಬಳಿಕ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದರೂ, ಆತನಿಗೆ ಯಾವುದೇ ಪರಿಹಾರವನ್ನು ನೀಡಲಿಲ್ಲ. ಅದರ ಬದಲು ಆತನ ವಿರುದ್ಧ ಗೋಹತ್ಯೆಯ ಪ್ರಕರಣವನ್ನು ದಾಖಲಿಸಿತು (21 ಸೆಪ್ಟಂಬರ್ 2016)
  
ಮುಫ್ತಿ ಅಬ್ದುಲ್ ಖಯೂಂ ಅಬ್ದುಲ್ ಹುಸೈನ್ ಬರೆದ ‘ಇಲೆವೆನ್ ಇಯರ್ಸ್‌ ಬಿಹೈಂಡ್ ದಿ ಬಾರ್ಸ್‌ (ಐ ಆ್ಯಮ್ ಮುಫ್ತಿ ಐ ಆ್ಯಮ್ ನಾಟ್ ಟೆರರಿಸ್ಟ್)’ ಎಂಬ ಪುಸ್ತಕವೊಂದಿದೆ. ಭಯೋತ್ಪಾದನಾ ಹಿಂಸೆಯ ಆರೋಪಗಳಲ್ಲಿ ಬಂಧಿಸಲ್ಪಟ್ಟು, ಚಿತ್ರಹಿಂಸೆಗೊಳಗಾಗಿ ಹಾಗೂ ದೀರ್ಘ ಸಮಯ ಜೈಲುವಾಸ ಅನುಭವಿಸಿದ ಬಳಿಕ ಬಿಡುಗಡೆಗೊಂಡ ಮುಫ್ತಿ ಸಾಹೆಬ್ ಎಂಬಾತನ ಕತೆಯನ್ನು ಈ ಪುಸ್ತಕ ಹೇಳುತ್ತದೆ. ಆಮಿರ್‌ಖಾನ್ ಎಂಬ ಮುಸ್ಲಿಂ ಬಾಲಕ 12 ವರ್ಷಗಳನ್ನು ಜೈಲಿನಲ್ಲಿ ಕಳೆದ ಬಳಿಕ ಬಿಡುಗಡೆಯಾಗಿದ್ದ. ಮೆಟ್ರಿಕ್ಯುಲೇಶನ್ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸುತ್ತಿದ್ದ ಆತನ ವಿರುದ್ಧ ಭಯೋತ್ಪಾದನೆಯ ಆರೋಪಗಳಲ್ಲಿ ಮೊಕದ್ದಮೆ ದಾಖಲಿಸ ಲಾಗಿತ್ತು. ಕಗ್ಗತ್ತಲ ಜೈಲಿನಿಂದ ಹೊರಬರುವ ಹೊತ್ತಿಗಾಗಲೇ ಆತ ತನ್ನ ತಂದೆಯನ್ನು ಕಳೆದುಕೊಂಡಿದ್ದ ಹಾಗೂ ಆತನ ತಾಯಿ ಗಂಭೀರವಾದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆತ ಬರೆದಿರುವ ‘ಫ್ರೇಮ್‌ಡ್ ಆ್ಯಸ್ ಟೆರರಿಸ್ಟ್’ ಕೃತಿಯನ್ನು ಓದುವಾಗ ಅಮಾಯಕ ವ್ಯಕ್ತಿಯೊಬ್ಬನ ವಿರುದ್ಧ ವ್ಯವಸ್ಥೆಯು ಎಷ್ಟರ ಮಟ್ಟಿಗೆ ಬರ್ಬರವಾಗಿ ನಡೆದುಕೊಳ್ಳಬಹುದೆಂಬುದನ್ನು ಯಾರಿಗಾದರೂ ಮನದಟ್ಟು ಮಾಡಿಕೊಡುತ್ತದೆ.
   ತಮ್ಮ ಸ್ತಬ್ಧಗೊಂಡ ಬದುಕು, ವೃತ್ತಿಗಳು ಹಾಗೂ ಕುಟುಂಬಗಳನ್ನು ಕಳೆದುಕೊಡ ಮುಸ್ಲಿಂ ಯುವಜನರ ದೊಡ್ಡ ಸಂಖ್ಯೆಯ ಪ್ರಕರಣಗಳ ಪೈಕಿ ಇವು ಕೇವಲ ಮೇಲ್ನೋಟಕ್ಕೆ ಕಾಣಸಿಗುವ ಕೆಲವು ಮಾದರಿಗಳಾಗಿವೆ. ಈ ಪಟ್ಟಿಗೆ ಸೇರ್ಪಡೆಗೊಳಿಸಬಹುದಾದ ಪ್ರಕರಣಗಳ ಸಂಖ್ಯೆ ತುಂಬಾ ದೊಡ್ಡದಿದೆ. ಹಾಜಿ ಉಮರ್‌ಜಿ ಎಂಬಾತ ಗೋಧ್ರಾ ರೈಲು ದಹನ ಪ್ರಕರಣದ ಸೂತ್ರಧಾರಿಯೆಂಬ ಆರೋಪದಲ್ಲಿ ಬಂಧಿತನಾಗಿ ಹಲವು ವರ್ಷಗಳ ಕಾಲ ಯಾತನೆಯನ್ನ್ನು ಅನುಭ ವಿಸಿದ ಬಳಿಕ ಆತನ ವಿರುದ್ಧ ಯಾವುದೇ ವಿಧದ ಪುರಾವೆಗಳು ಇಲ್ಲವೆಂಬುದು ಗೊತ್ತಾದಾಗ ಆತ ಬಿಡುಗಡೆಗೊಂಡಿದ್ದ.


 ಮಕ್ಕಾ ಮಸೀದಿ (ಹೈದರಾ ಬಾದ್), ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್ ಹಾಗೂ ಅಜ್ಮೀರ್ ದರ್ಗಾ ಸ್ಫೋಟಗಳಂತಹ ಕುಖ್ಯಾತ ಪ್ರಕರಣಗಳಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಯುವಕರು ಬಂಧಿಸಲ್ಪಟ್ಟಿದ್ದರು ಹಾಗೂ ಆನಂತರ ಯಾವುದೇ ವಿಶ್ವಸನೀಯ ಸಾಕ್ಷಾಧಾರಗಳ ಕೊರತೆಯಿಂದಾಗಿ ಬಿಡುಗಡೆಯಾಗಿದ್ದರು. ಬಹುತೇಕ ತನಿಖೆಗಳು ಅವ್ಯವಸ್ಥಿತವಾಗಿದ್ದವು ಹಾಗೂ ಅಧಿಕಾರಿಗಳು ಪೂರ್ವಾಗ್ರಹಪೀಡಿತರಾಗಿ ತನಿಖೆ ನಡೆಸಿದ್ದರು. ಈ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ಬಗ್ಗೆ ಪೊಲೀಸರ ತಾರತಮ್ಯ ಧೋರಣೆ ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಪೊಲೀಸರು ತಟಸ್ಥ ಪಾತ್ರವನ್ನು ವಹಿಸುತ್ತಿದ್ದರೆಂದು ಭಾರತದಲ್ಲಿನ ಕೋಮುಹಿಂಸಾಚಾರದ ಬಗ್ಗೆ ಅಧ್ಯಯನ ನಡೆಸಿರುವ ವಿದ್ವಾಂಸರು ಹೇಳುತ್ತಾರೆ.
ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕ ಪೊಲೀಸರ ಪಕ್ಷಪಾತ ಧೋರಣೆ ಹೆಚ್ಚತೊಡಗಿತು, 1961ರಲ್ಲಿ ಜಬಲ್‌ಪುರದಲ್ಲಿ ನಡೆದ ಪ್ರಥಮ ಭೀಕರ ಕೋಮುಹಿಂಸಾಚಾರದಿಂದ ತೊಡಗಿ ಪೊಲೀಸರಲ್ಲಿ ಅಲ್ಪಸಂಖ್ಯಾತ ವಿರೋಧಿ ವರ್ತನೆಯನ್ನು ಕಾಣಬಹುದಾಗಿದೆ. ಬಹುತೇಕ ತನಿಖಾ ಆಯೋಗದ ವರದಿಗಳು, ಸಿನೆಮಾಗಳು ಹಾಗೂ ಸಾಕ್ಷಚಿತ್ರಗಳು ಈ ಸತ್ಯವನ್ನು ಬಯಲಿಗೆಳೆಯುತ್ತವೆ. ಸರಕಾರಿ ಸೇವೆಗಳಲ್ಲಿ ಪೊಲೀಸರ ಪ್ರಾತಿನಿಧ್ಯ ಕೂಡಾ ಅತ್ಯಂತ ನಗಣ್ಯವಾಗಿದೆ. ಅಧಿಕಾರದಲ್ಲಿರುವ ಮುಸ್ಲಿಮರು ಸುಮ್ಮನಿದ್ದು ಬಿಡುವ ಮೂಲಕ ಪ್ರವಾಹದೊಂದಿಗೆ ಈಜಿಕೊಂಡು ಹೋಗಬೇಕಾದಂತಹ ಪರಿಸ್ಥಿತಿಯಿದೆ ಅಥವಾ ಕೋಮುಹಿಂಸಾಚಾರದ ಚಲನಾತ್ಮಕತೆಯ ಮೇಲೆ ಪ್ರಭಾವ ಬೀರದಂತಹ ಕ್ಷೇತ್ರಗಳಲ್ಲಿ ಅವರನ್ನು ನಿಯೋಜಿಸಲಾಗುತ್ತದೆ.
   ಮುಂಬೈ ಗಲಭೆಯ ಸಂದರ್ಭದಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಕರ್ತವ್ಯಲೋಪ ತೋರಿದ್ದರು ಹಾಗೂ ಹಿಂಸಾಚಾರದಲ್ಲಿ ನಿರತರಾಗಿರುವವರ ಪರವಹಿಸಿದ್ದರೆಂದು ಶ್ರೀಕೃಷ್ಣಾ ಆಯೋಗದ ವರದಿ ತಿಳಿಸಿದೆ. ದಿಲ್ಲಿಯಲ್ಲಿ 1984ರಲ್ಲಿ ನಡೆದ ಸಿಖ್ಖ್ ವಿರೋಧಿ ಹಿಂಸಾಚಾರ ಹಾಗೂ 2002ರ ಗುಜರಾತ್ ವಿರೋಧಿ ಹಿಂಸಾಚಾರ ಇಂತಹದೇ ಘಟನೆಗಳ ಸಾಲಿಗೆ ಸೇರುತ್ತವೆ. ಮಹಾರಾಷ್ಟ್ರ (ಧುಲೆ 2013)ದಲ್ಲಿ ನಡೆದ ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರದಲ್ಲಿ ಸ್ವತಃ ಪೊಲೀಸರೇ ಹತ್ಯಾ ಕಾಂಡದ ಸೂತ್ರಧಾರಿ ಗಳ ಪಾತ್ರ ವನ್ನು ವಹಿಸಿಕೊಂಡಿದ್ದರು. ‘ಹಶೀಂಪುರ’ ಎಂಬ ಪುಸ್ತಕಕೃತಿಯಲ್ಲಿ ಮಾಜಿ ಪೊಲೀಸ್ ಮಹಾನಿರ್ದೇಶಕ ವಿ.ಎನ್.ರಾಯ್ ಅವರು ಧುಲೆ ಹಿಂಸಾಚಾರದಲ್ಲಿ ಪೊಲೀಸರು ಮುಸ್ಲಿಮರನ್ನು ಟ್ರಕ್‌ಗಳಲ್ಲಿ ತುಂಬಿಸಿಕೊಂಡು ದೂರಕ್ಕೆ ಕೊಂಡೊಯ್ದ ಬಳಿಕ ಅತಿಸನಿಹದಿಂದ ಅವರನ್ನು ಗುಂಡಿಕ್ಕಿ ಕೊಂದರು ಹಾಗೂ ಅವರ ಮೃತದೇಹಗಳನ್ನು ಕಾಲುವೆಗೆ ಎಸೆದರು. ಈ ನರಮೇಧದಲ್ಲಿ ಬದುಕುಳಿದ ಕೆಲವರು, ತಮ್ಮ ಘೋರ ಅನುಭವದ ಕತೆಯನ್ನು ಹೇಳಿದ್ದಾರೆ.
 2001ರ 9/11 ಡಬ್ಲುಟಿಸಿ ಕಟ್ಟಡದ ಮೇಲೆ ದಾಳಿ ನಡೆದ ಬಳಿಕ ಅಮೆರಿಕದ ಮಾಧ್ಯಮಗಳು ‘ಇಸ್ಲಾಮಿಕ್ ಭಯೋತ್ಪಾದನೆ’ ಎಂಬ ಪದವನ್ನು ಸೃಷ್ಟಿಸಿದವು. ಇದು ತೈಲ ಸಂಪತ್ತನ್ನು ಹಾಗೂ ಯೋಜನೆಗಳನ್ನು ನಿಯಂತ್ರಿಸುವುದಕ್ಕಾಗಿ ಅಲ್‌ಖಾಯಿದಾವನ್ನು ಪೋಷಿಸುವ ಹಾಗೂ ಜಗತ್ತಿನಲ್ಲಿ ಭಯೋತ್ಪಾದನೆಗೆ ಇಸ್ಲಾಂ ಹಾಗೂ ಮುಸ್ಲಿಮರು ಕಾರಣರೆಂಬ ಭಾವನೆಯನ್ನು ಮೂಡಿಸುವ ಅಮೆರಿಕದ ಗುರಿಯನ್ನು ಜಾಣ್ಮೆಯಿಂದ ಮುಚ್ಚಿಡುತ್ತದೆ. ಆಗಿನಿಂದ ವಿಶ್ವದಾದ್ಯಂತ ಪರಿಸ್ಥಿತಿ ತೀರಾ ಹದಗೆಟ್ಟಿದೆ ಹಾಗೂ ವಿಶಾಲವಾದ ಸಾಮಾಜಿಕ ಭಾವನೆಯುಳ್ಳವರು ಮಾತ್ರವಲ್ಲ ಪೊಲೀಸ್ ಅಧಿಕಾರಿಗಳು ಕೂಡಾ ಈ ಅಪಪ್ರಚಾರಕ್ಕೆ ಮರುಳಾದರು. ಜಾಗತಿಕ ಇಸ್ಲಾಮಿಕ್ ಭೀತಿ (ಫೋಬಿಯಾ)ಯನ್ನು ಮಾಧ್ಯಮಗಳು ಹಾಗೂ ಸ್ಥಾಪಿತ ಹಿತಾಸಕ್ತಿಗಳು ಹುಟ್ಟುಹಾಕಿವೆ.
ಇಂತಹ ಅಪಪ್ರಚಾರಗಳಿಂದ ಅಮಾಯಕ ಯುವಕರು ಮತ್ತಿತರರನ್ನು ರಕ್ಷಿಸುವ ತುರ್ತು ಅಗತ್ಯವಿದೆ. ಪೊಲೀಸ್ ಸುಧಾರಣೆಗಳಿಗಾಗಿ ರಚನೆಯಾದ ಅನೇಕ ಆಯೋಗಗಳು ಪೊಲೀಸ್ ವ್ಯವಸ್ಥೆಯ ಸುಧಾರಣೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿವೆ. ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪೊಲೀಸರನ್ನು ಜಾಗೃತಗೊಳಿಸಬೇಕಾದ ಅಗತ್ಯವಿದೆ. ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪೊಲೀಸ್ ಅಕಾಡಮಿಗಳಿವೆ. ನಮ್ಮ ಸಮಾಜದಲ್ಲಿ ಪ್ರಚಲಿತದಲ್ಲಿರುವ ಪೂರ್ವಾಗ್ರಹಗಳನ್ನು ಹಾಗೂ ಏಕರೂಪದ ಗ್ರಹಿಕೆಗಳ ಹಿಂದಿರುವ ವಾಸ್ತವತೆಯನ್ನು ಹೊರಗೆಳೆಯಲು ಈ ಅಕಾಡಮಿಗಳ ಪಠ್ಯವಿಷಯಗಳನ್ನು ಬದಲಾಯಿಸುವ ಅಗತ್ಯವಿದೆ. ಪೊಲೀಸರು ತಮ್ಮ ಭಾವನೆಗಳಿಂದ ನಿರ್ದೇಶಿಸಲ್ಪಡುವ ಬದಲು ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವ ಅಗತ್ಯವಿದೆ. ಪ್ರಚಲಿತದಲ್ಲಿರುವ ಸಾಮಾನ್ಯ ಸಾಮಾಜಿಕ ಪ್ರಜ್ಞೆಯ ಹಿಂದಿರುವ ಸತ್ಯವನ್ನು ಅವರು ಅರಿತುಕೊಳ್ಳಬೇಕಾದ ಅಗತ್ಯವಿದೆ.
 
 ಈ ಸಮಸ್ಯೆಗಳ ಬಗ್ಗೆ ಅಭಿಯಾನ ನಡೆಸಲು ಶ್ರಮಿಸುತ್ತಿರುವ ಹಲವಾರು ನಾಗರಿಕ ಸಂಘಟನೆಗಳಿವೆ. ಅಧಿಕಾರಿಗಳಿಂದ ಸುಳ್ಳಾಗಿ ದೋಷಾರೋಪ ಹೊರಿಸಲ್ಪಟ್ಟ ಅಥವಾ ಶಿಕ್ಷೆಗೊಳಗಾದ ಅನೇಕ ಮಂದಿಯ ಪ್ರಕರಣಗಳನ್ನು ಅವರು ಕೈಗೆತ್ತಿಕೊಂಡು ಹೋರಾಡಬೇಕಿದೆ. ಆದರೆ ಅವರ ಸಾಮರ್ಥ್ಯ ಸೀಮಿತವಾಗಿದೆ. ಅಮಾಯಕರ ಪರವಾಗಿ ಹೋರಾಡುವ ಜಾಲಗಳನ್ನು ದೇಶಾದ್ಯಂತ ಬಲಪಡಿಸಬೇಕಾಗಿದೆ. ತಪ್ಪಾಗಿ ದೋಷಾರೋಪ ಹೊರಿಸಲ್ಪಟ್ಟವರಿಗೆ ಪರಿಹಾರ ನೀಡುವ ಅಗತ್ಯವಿದೆ ಹಾಗೂ ಅವರ ಮೇಲೆ ಸುಳ್ಳು ಆರೋಪ ಹೊರಿಸಿದ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಾದ ಅಗತ್ಯವಿದೆ. ಸುಳ್ಳಾಗಿ ಆರೋಪ ಹೊರಿಸಲ್ಪಟ್ಟ ಅನೇಕ ವ್ಯಕ್ತಿಗಳು ಬರೆದಿರುವ ಪುಸ್ತಕಗಳನ್ನು ಸಿಬ್ಬಂದಿ ತರಬೇತಿ ಕಾಲೇಜ್‌ಗಳಲ್ಲಿ ಹಾಗೂ ಪೊಲೀಸರು ಮತ್ತಿತರ ಆಡಳಿತಗಾರರಿಗೆ ತರಬೇತಿ ನೀಡುವ ಅಕಾಡಮಿಗಳಲ್ಲಿ ಕಡ್ಡಾಯಗೊಳಿಸಬೇಕಾಗಿದೆ. ಜಾತ್ಯತೀತ ವೌಲ್ಯಗಳನ್ನು ಎತ್ತಿಹಿಡಿಯಲು ಬಯಸುವ ರಾಜಕೀಯ ಪಕ್ಷಗಳು, ಕೋಮುವಾದಿ ಸಂಘಟನೆಗಳನ್ನು ಏಕಾಂಗಿಗೊಳಿಸಬೇಕಾಗಿದೆ ಹಾಗೂ ಕೋಮುವಾದಿ ಪಕ್ಷಗಳು ಅಧಿಕಾರಕ್ಕೇರದಂತೆ ಖಾತರಿಪಡಿಸಬೇಕಿದೆ. ನ್ಯಾಯ ಮತ್ತು ಶಾಂತಿಗಾಗಿನ ಸಮಾಜವನ್ನು ಸೃಷ್ಟಿಸುವ ಅಗತ್ಯವಿದೆ. ನಿರ್ದಿಷ್ಟ ಧರ್ಮದ ಜನರ ವಿರುದ್ಧ ಎಸಗುವ ಘೋರ ಅನ್ಯಾಯವು, ನಮ್ಮ ನ್ಯಾಯದಾನ ವ್ಯವಸ್ಥೆಯು ದುರ್ಬಲವೆಂಬುದನ್ನು ತೋರಿಸಿಕೊಡುತ್ತದೆ. ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳಿಗೆ ಹೇಗೆ ನ್ಯಾಯದಾನ ಮಾಡಲಾಗುತ್ತಿದೆ ಎಂಬುದರ ಸೂಚ್ಯಂಕದಿಂದ ಇದನ್ನು ತೀರ್ಮಾನಿಸಬಹುದಾಗಿದೆ. ಕಾಟ್ಜು ಅವರ ಪತ್ರವನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರು ಗಂಭೀರವಾಗಿ ತೆಗೆದುಕೊಂಡಿರಬಹುದೆಂದು ಆಶಿಸೋಣ.

 ‘‘ದಾದ್ರಿಯಲ್ಲಿ ಅಖ್ಲಾಕ್ ಎಂಬವರು ಗೋರಕ್ಷಕರಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಈ ಹೇಯವಾದ ಘಾತಕಕೃತ್ಯವನ್ನು ಎಸಗಿರುವ ದುಷ್ಕರ್ಮಿಗಳನ್ನು ಶಿಕ್ಷಿಸುವ ಬದಲು ಪೊಲೀಸರು ಹಾಗೂ ಸ್ಥಳೀಯ ನ್ಯಾಯಾಧೀಶರು, ಅಖ್ಲಾಕ್ ಕುಟುಂಬದ ವಿರುದ್ಧ ಕಾನೂನುಕ್ರಮ ಕೈಗೊಳ್ಳುತ್ತಿದ್ದಾರೆ.... ಪೊಲೀಸರಿಗೇನು ಹುಚ್ಚು ಹಿಡಿದಿದೆಯೇ?...’’ ಎಂದು ಕಾಟ್ಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

share
ರಾಮ್ ಪುನಿಯಾನಿ
ರಾಮ್ ಪುನಿಯಾನಿ
Next Story
X