ಸಾಯಿರಾಧಾ ಟಿವಿಎಸ್: ‘ಟಿವಿಎಸ್ ಉತ್ಸವ್-2016’
ಮಂಗಳೂರು, ಅ.24: ಅವಿಭಜಿತ ದ.ಕ. ಜಿಲ್ಲೆಯ ಟಿವಿಎಸ್ ಮೋಟಾರ್ ಕಂಪೆನಿಯ ಅಧಿಕೃತ ಮುಖ್ಯ ಡೀಲರ್ ಆಗಿರುವ ‘ಸಾಯಿರಾಧಾ ಟಿವಿಎಸ್’ ವತಿಯಿಂದ ದೀಪಾವಳಿ ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಜಿಲ್ಲೆಯ ಜನತೆಗೆ ನೆಹರೂ ಮೈದಾನದಲ್ಲಿ 24, 25 ಮತ್ತು 26ರಂದು ಮೂರು ದಿನಗಳ ‘ಟಿವಿಎಸ್ ಉತ್ಸವ್-2016’ ಅನ್ನು ಆಯೋಜಿಸಿದೆ. ಸಾಯಿರಾಧಾ ಗ್ರೂಪ್‌ನ ಮೆನೇಜಿಂಗ್ ಡೈರೆಕ್ಟರ್ ಮನೋಹರ ಎಸ್.ಶೆಟ್ಟಿ ಮೇಳವನ್ನು ಉದ್ಘಾಟಿಸಿದರು.
ಮೇಘಾ ಸರ್ವಿಸ್ ಮೇಳ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾಲ ಮತ್ತು ವಿನಿಮಯ ಮೇಳ, ಆಕರ್ಷಕ ನಗದು ಬಹುಮಾನವಿರುವ ಡ್ರಾಯಿಂಗ್ ಸ್ಪರ್ಧೆ (ಚಿನ್ನರಿಗಾಗಿ), ವಿಶಿಷ್ಟ ಸ್ಪರ್ಧೆಗಳು ಹಾಗೂ ಆಕರ್ಷಕ ಬೈಕ್ ಸ್ಟಂಟ್ ಪ್ರದರ್ಶನ (ಟೌನ್ ಹಾಲ್ ಆವರಣ) ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಟಿವಿಎಸ್ ಮೋಟಾರು ಕಂಪೆನಿಯ ಟೆರಿಟರಿ ಮೆನೇಜರ್ ಶ್ರೀ ವಿನಯ ಕುಮಾರ್ ತಿಳಿಸಿದ್ದಾರೆ. ಶ್ರೀ ಆಧುನಿಕ್, ವೆಲೆನ್ಸಿಯಾ ಲ್ಯಾಬ್ ವೈದ್ಯ ಡಾ.ಸುಜಿತ್ ಮತ್ತು ಸಹೋದ್ಯೋಗಿಗಳು, ಜನತಾ ಪಬ್ಲಿಸಿಟಿ ಮಾಲಕ ಶ್ರೀ ಹರ್ಷರಾಜ್ ಶೆಟ್ಟಿ, ಆಟೊ ಕನ್ಸ್‌ಲ್ಟೆಂಟ್ ಅಸೋಸಿಯೇಶನ್‌ನ ಪ್ರತಿನಿಧಿ ರಫಿಕ್, ಸಾಯಿರಾಧಾ ಟಿವಿಎಸ್‌ನ ಜನರಲ್ ಮೆನೇಜರ್ ವೃಜನಾಥ್ ಆಚಾರ್ಯ, ಮೆನೇಜರ್ ಪ್ರಕಾಶ್ ತಂತ್ರಿ ಹಾಗೂ ಸಾಯಿರಾಧಾ ಟಿವಿಎಸ್‌ನ ಸಿಬ್ಬಂದಿ ಉಪಸ್ಥಿತರಿದ್ದರು.





