‘ಮಾಂಡೋವಿ ಮೋಟಾರ್ಸ್’:
ದೀಪಾವಳಿ ಪ್ರಯುಕ್ತ ‘ಟ್ರೂ ವ್ಯಾಲ್ಯೂ ಕಾರ್ಸ್’ನ ಮೆಗಾ ಸೇಲ್ಸ್ ಮೇಳ,

ಮಂಗಳೂರು, ಅ.24: ನಗರದ ಪ್ರಸಿದ್ಧ ಮಾರುತಿ ಕಾರುಗಳ ಮಾರಾಟಗಾರರು ಹಾಗೂ ಗ್ರಾಹಕರ ಮೆಚ್ಚುಗೆ ಪಡೆದಿರುವ ಮಾಂಡೋವಿ ಮೋಟಾರ್ಸ್ ಸಂಸ್ಥೆಯು ನಡೆಸುತ್ತಿರುವ ಮಾರುತಿ ಟ್ರೂ ವ್ಯಾಲ್ಯೂ ಕಾರುಗಳ ಮೆಗಾ ಸೇಲ್ಸ್ ಮೇಳವು ಅ.27ರವರೆಗೆ ನಡೆಯಲಿದೆ. ಈ ಮೇಳದಲ್ಲಿ ವಿವಿಧ ಬಗೆಯ 20,000 ರೂ.ನಿಂದ 6,50,000 ರೂ. ವರೆಗಿನ ವಿಭಿನ್ನ ಶ್ರೇಣಿಯ ಸುPre-owned Cars
ಮಾರು 70 ಕಾರುಗಳು ಪ್ರದರ್ಶನದಲ್ಲಿವೆ. ಮೇಳವು ಬಲ್ಮಠ ಸರ್ಕಲ್ ಹತ್ತಿರ, ಎಸ್.ಸಿ.ಎಸ್. ಆಸ್ಪತ್ರೆಯ ರಸ್ತೆಯಲ್ಲಿರುವ ಶೋರೂಮ್‌ನಲ್ಲಿ ನಡೆಸುತ್ತಿದ್ದು, ಮೇಳದಲ್ಲಿ ವಿಶೇಷವಾಗಿ ಪ್ರಮಾಣೀಕರಿಸಿದ ಕಾರುಗಳಿಗೆ 1 ವರ್ಷದ ವಾರಂಟಿ, 3 ಉಚಿತ ಸರ್ವಿಸ್ ಹಾಗೂ ವಿನಿಮಯ ಬೋನಸ್ ನೀಡಲಾಗುವುದು. ಗ್ರಾಹಕರ ಹಿತದೃಷ್ಟಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕೂಡಾ ಕಲ್ಪಿಸಲಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಅತ್ಯಾಕರ್ಷಕ ಕೊಡುಗೆಯಾಗಿ ಮಾರುತಿ ಓಮ್ನಿ ಹಾಗೂ ರಿಟ್ಜ್‌ನ್ನುಸ್ಥಳದಲ್ಲೇ ಬುಕ್ ಮಾಡಿದಲ್ಲಿ 5,000 ರೂ.ವರೆಗಿನ ಸಾಮಗ್ರಿಗಳನ್ನು ಉಚಿತವಾಗಿ ಸೀಮಿತ ಅವಧಿಯವರೆಗೆ ನೀಡಲಾಗುತ್ತಿದೆ.
Pre-owned Cars ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ನಗರದ ಬಲ್ಮಠ ರಸ್ತೆಯಲ್ಲಿರುವ ಮಾಂಡೋವಿ ಶೋರೂಮ್ ಅಥವಾ ಎಸ್.ಸಿ.ಎಸ್. ಆಸ್ಪತ್ರೆಯ ರಸ್ತೆಯಲ್ಲಿರುವ ಮಾಂಡೋವಿ ಮೋಟಾರ್ಸ್ ಶೋರೂಮ್‌ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.





