ಇಂದಿನಿಂದ ಅಂಚೆ ನೌಕರರ ಮುಷ್ಕರ
ಮೂಡುಬಿದಿರೆ, ಅ.24: ಗ್ರಾಮೀಣ ಅಂಚೆ ಸೇವಕರಿಗೆ ನೀಡಬೇಕಾದ 2014-15ರ ಬಾಕಿ ಬೋನಸ್‌ಗೆ ಒತ್ತಾಯಿಸಿ ಅ.25ರಿಂದ 26ರವರೆಗೆ ರಾಷ್ಟ್ರವ್ಯಾಪಿ ನಡೆಯಲಿರುವ ಮುಷ್ಕರದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಪುತ್ತೂರು ವಿಭಾಗವು ಭಾಗವಹಿಸಲಿದೆ ಎಂದು ಪುತ್ತೂರು ವಿಭಾಗೀಯ ಕಾರ್ಯದರ್ಶಿ ಸುನೀಲ್ ದೇವಾಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಲಾಖಾ ನೌಕರರಿಗೆ 2014-15 ರ 7,000 ರೂ. ಬಾಕಿ ಬೋನಸ್ ನೀಡಿದ್ದು, ಗ್ರಾಮಿಣ ನೌಕರರಿಗೆ ಇಲಾಖೆ ತಾರತಮ್ಯ ಮಾಡುತ್ತಿದೆ. ಈ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಕೇಂದ್ರ ಸಂಘಟನೆಯ ಕರೆಯ ಮೇರೆಗೆ ಪ್ರ.ಕಾರ್ಯದರ್ಶಿ ಕಾ.ಎಸ್.ಎಸ್.ಮಹಾದೇವಯ್ಯನವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಕೆಲಸವನ್ನು ಬಹಿಷ್ಕರಿಸಿ, ಪುತ್ತೂರು ವಿಭಾಗದ ಎಲ್ಲ ಗ್ರಾಮೀಣ ಪ್ರದೇಶದ ಅಂಚೆ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
Next Story





