ಕೆಂಪೇಗೌಡರ ಹೆಸರು ಸಹಿಸದವರಿಂದ ಬೆಂಗಳೂರು ವಿಭಜನೆ
ಡಾ.ಎಂ.ಎಚ್.ಮರಿಗೌಡ ಶತಮಾನೋತ್ಸವ ಕಾರ್ಯಕ್ರಮದಲ್ಲಿದೇವೇಗೌಡ ಆಕ್ರೋಶ

ಬೆಂಗಳೂರು, ಅ. 23: ನಾಡಪ್ರಭು ಕೆಂಪೇಗೌಡರ ಹೆಸರನ್ನು ಸಹಿಸಿಕೊಳ್ಳದೇ ಇರುವವರು ಬೆಂಗಳೂರು ವಿಭಜನೆ ಮಾಡಿ ಬೇರೆಯವರ ಹೆಸರಿಡಲು ಹೊರಟಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಡಾ.ಎಂ.ಎಚ್.ಮರಿಗೌಡ ಪ್ರತಿಷ್ಠಾನ ಮತ್ತು ಒಕ್ಕಲಿಗರ ಸಂಘ ಆಯೋಜಿಸಿದ್ದ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಳಿತ ನಡೆಸಲು ಕಷ್ಟ ಎಂದು ಹೇಳಿ ಮಹಾನಗರವನ್ನು ಸಣ್ಣ ಸಣ್ಣ ಹೋಳು ಮಾಡುವುದು ಸರಿಯಲ್ಲ. ಕೆಂಪೇಗೌಡರ ಹೆಸರನ್ನು ಸಹಿಸಿಕೊಳ್ಳಲು ಆಗದವರು ಬೆಂಗಳೂರನ್ನು ನಾಲ್ಕು ಭಾಗಗಳಾಗಿ ವಿಭಾಗಿಸಿ ಬೇರೆಯವರ ಹೆಸರಿಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಕಾರ ನಡೆಸಲು ಕಷ್ಟವಾದರೆ ರಾಜ್ಯವನ್ನೇ ಹೋಳು ಮಾಡುತ್ತಾರಾ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಬೆಂಗಳೂರು ವಿಭಜನೆಗೆ ಅವಕಾಶ ಕೊಡುವುದಿಲ್ಲ. ಅಲ್ಲದೆ ಬೆಂಗಳೂರು ವಿಭಜನೆ ಅನಗತ್ಯ ಎಂದು ಹೇಳಿದರು. ಸುಪ್ರೀಂ ನ್ಯಾಯಾೀಶರ ವಿರುದ್ಧ ಗರಂ: ನೀರು, ಗಾಳಿ ಇಲ್ಲದೆ ಮನುಷ್ಯ ಬದುಕುವುದು ಕಷ್ಟ. ಆದರೆ ಇದು ಸುಪ್ರೀಂ ಕೋರ್ಟ್‌ನ ನ್ಯಾಯಾೀಶರಿಗೆ ಗೊತ್ತಾಗುತ್ತಿಲ್ಲ. ಅದರಲ್ಲೂ ರಾಜ್ಯದಲ್ಲಿ ಕುಡಿಯುವ ನೀರಿಗೂ ತತ್ವಾರ ಇದ್ದರೂ ಸುಪ್ರೀಂ ಕೋರ್ಟ್‌ನ ಮೂರು ಮಂದಿ ನ್ಯಾಯಾೀಶರು ತಮಿಳುನಾಡಿಗೆ ನೀರಿ ಬಿಡಿ ಎಂದು ತೀರ್ಪು ನೀಡುತ್ತಾರೆ. ಇವರ ಬಗ್ಗೆ ಮಾತನಾಡುವಂತಿಲ್ಲ ಎಂದು ನ್ಯಾಯಾಂಗ ವ್ಯವಸ್ಥೆ ಬಗ್ಗೆ ವಾಗ್ದಾಳಿ ನಡೆಸಿದರು.
ನನ್ನ ರಾಜ್ಯದ ರೈತರಿಗೆ ನೀರು ಉಳಿಸುವ ಸಲುವಾಗಿ ನಾನು ಒಂದಲ್ಲ ಎರಡೆರಡು ಬಾರಿ ಖುಷಿಯಿಂದ ರಾಜೀನಾಮೆ ನೀಡಿದ್ದೇನೆ. ನಾನು ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ.ಇವತ್ತಿಗೂ ನಾನು ನೀರಾವರಿ ವಿಚಾರದಲ್ಲಿ ಹೋರಾಟ ನಿಲ್ಲಿಸಿಲ್ಲ. ನಿಲ್ಸೋದು ಇಲ್ಲ. ದಿಲ್ಲಿಗೆ ಪ್ರಧಾನಿಯಾಗಿ ನಾನು ಹೋಗಿದ್ದು ದುರಂತ.ಇಲ್ಲೇ ಸಿಎಂ ಆಗಿ ಮುಂದುವರಿದು ವಿವಾದವನ್ನು ಬಗೆಹರಿಸಬೇಕಿತ್ತು ಎಂದು ಆತ್ಮಾವಲೋಕನ ಮಾಡಿಕೊಂಡರು. ಹಿಂದೆ ಕಾಲಕಾಲಕ್ಕೆ ಸರಿಯಾಗಿ ಮಳೆ ಸುರಿಯುತಿತ್ತು.ಇದರಿಂದ ರೈತ ನೆಮ್ಮದಿಯಾಗಿ ಇದ್ದ. ಈಗ ಸರಿಯಾದ ಸಮಯಕ್ಕ್ಕೆೆ ಮಳೆ ಬಾರದೆ ರೈತ ಕಂಗಾಲಾಗಿದ್ದಾನೆ. ರಾಜ್ಯದಲ್ಲಿ ನೀರಾವರಿ ಸೌಲಭ್ಯ ಸಹ ಶೇ.30 ರಷ್ಟು ಮಾತ್ರ ಇದೆ. ಇದರ ಮೇಲೆ ರಾಜ್ಯದ ಪ್ರಮುಖ ಎರಡು ನದಿಗಳಾದ ಕಾವೇರಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಸಿಲುಕಿವೆ. ಒಕ್ಕಲುತನ ಕವಲು ದಾರಿಯಲ್ಲಿದೆ ಎಂದು ವಿಷಾದಿಸಿದರು. ಯಾವುದೇ ಸರಕಾರ ಬಂದರೂ ನಿರುದ್ಯೋಗ ಸಮಸ್ಯೆ ನಿವಾರಣೆ ಆಗೋದಿಲ್ಲ. ಆದರೆ ಕೃಷಿಯಿಂದ ನಿರುದ್ಯೋಗವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ಬಡವರಿಗೆ ಭೂಮಿ, ಇಲ್ಲವೆ ಹೈನುಗಾರಿಕೆ ನಡೆಸಲು ಸರಕಾರ ಸಹಾಯ ಮಾಡಬೇಕು. ಮರಿಗೌಡರ ಮಾರ್ಗದರ್ಶನದಂತೆ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಬೇಕು.ಯಾವುದೇ ಕಾರಣ ಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಬಿಡಬಾರದು. ಇನ್ನು ಮುಂದೆ ರೈತರ ಜೊತೆಗೆ ನಿಂತು ಕೆಲಸ ಮಾಡುತ್ತೇನೆ ಎಂದರು.ಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠಾೀಶ ನಿರ್ಮಲಾನಂದನಾಥ ಸ್ವಾಮೀಜಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೋ.ಶ್ರೀನಿವಾಸಯ್ಯ, ಒಕ್ಕಲಿಗ ಸಂಘದ ಅಧ್ಯಕ್ಷ ಡಾ.ಅಪ್ಪಾಜಿ ಗೌಡ, ಕಾರ್ಯದರ್ಶಿ ಸಿ.ಮಂಜುನಾಥ್, ಮಾಜಿ ಸಚಿವ ಸಿ.ಟಿ.ರವಿ ಮೊದಲಾದವರು ಉಪಸ್ಥಿತರಿದ್ದರು.
‘ಭಿನ್ನಮತೀಯರ ಅಮಾನತು ಆದೇಶ ವಾಪಸ್ ಪಡೆಯುವುದಿಲ್ಲ’
ಬೆಂಗಳೂರು, ಅ. 23: ಶಾಸಕ ಝಮೀರ್ ಅಹ್ಮದ್ ಸೇರಿದಂತೆ ಪಕ್ಷದಿಂದ ಅಮಾನತುಗೊಂಡಿರುವ 8 ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಾನುತು ಮಾಡಿದ 8 ಶಾಸಕರ ವಿರುದ್ಧದ ಅಮಾನತು ಆದೇಶ ವಾಪಸ್ ಪಡೆಯುವ ಚಿಂತನೆ ಪಕ್ಷದಲ್ಲಿ ನಡೆದಿಲ್ಲ. ಪ್ರಸ್ತಾಪವೂ ಆಗಿಲ್ಲ. ಇಂತಹ ಯಾವುದೇ ಬೆಳವಣಿಗೆಗಳು ಪಕ್ಷದಲ್ಲಿ ನಡೆದಿಲ್ಲ. ಈ ವರದಿಗಳು ಸತ್ಯಕ್ಕೆ ದೂರ ಎಂದು ಹೇಳಿದರು.ತ್ತರ ಪ್ರದೇಶ ಸಮಾಜವಾದಿ ಪಕ್ಷದಲ್ಲಿನ ಬೆಳವಣಿಗೆ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಪಕ್ಷದೊಳಗಿನ ಬಿಕ್ಕಟ್ಟು ದುರದೃಷ್ಟಕರ. ಈಗಲೂ ಕಾಲ ಮಿಂಚಿಲ್ಲ. ಪರಿಸ್ಥಿತಿ ಕೈಮೀರಿ ಹೋಗಿಲ್ಲ. ಮಾತುಕತೆಯ ಮೂಲಕ ಎಲ್ಲವನ್ನೂ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಈ ಕುರಿತು ಮುಲಾಯಂ ಸಿಂಗ್‌ಯಾದವ್ ಜೊತೆ ಮಾತುಕತೆ ನಡೆಸುತ್ತೇನೆ. ನನ್ನ ಆರೋಗ್ಯ ಸರಿಯಿದ್ದಿದ್ದರೆ ನಾನೇ ಖುದ್ದಾಗಿ ಹೋಗಿ ಅವರ ಜೊತೆ ಮಾತುಕತೆ ನಡೆಸುತ್ತಿದ್ದೆ. ಆದರೆ ನನ್ನ ಆರೋಗ್ಯ ಸ್ಪಂದಿಸುತ್ತಿಲ್ಲ. ಹಾಗಾಗಿ ದೂರವಾಣಿ ಮೂಲಕ ಮುಲಾಯಂ ಸಿಂಗ್ ಅವರಿಗೆ ಪಕ್ಷದ ಒಗ್ಗಟ್ಟು ಪ್ರದರ್ಶಿಸಲು ಸೂಕ್ತ ಸಲಹೆಗಳನ್ನು ನೀಡುತ್ತೇನೆ ಎಂದರು.







