ದಿಲ್ಲಿ ಚಾಂದಿನಿ ಚೌಕದಲ್ಲಿ ಸ್ಫೋಟ; ಓರ್ವ ಬಲಿ

ಹೊಸದಿಲ್ಲಿ , ಅ.25 : ದಿಲ್ಲಿಯ ಚಾಂದಿನಿ ಚೌಕದ ನಯಾ ಬಜಾರ‍್ ಮಾರ್ಕೆಟ್ ಬಳಿ ಇಂದು ಸ್ಫೋಟ ಸಂಭವಿಸಿದ ಪರಿಣಾಮವಾಗಿ ಓರ್ವ ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯವಾಗಿದೆ.
ಯುವಕನೊಬ್ಬನು ಬೀಡಿ ಸೇದುತ್ತಾ ಪಟಾಕಿಯನ್ನು ಗೋಣಿಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಬೀಡಿಯ ಕಿಡಿ ಹಾರಿದ ಪರಿಣಾಮವಾಗಿ ತಲೆಯ ಮೇಲಿದ್ದ ಪಟಾಕಿ ಸಿಡಿದು ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story





