ಯುದ್ಧ ವಿರೋಧಿ ಕಾರ್ಯಕರ್ತ ಟಾಂ ಹೇಡನ್ ನಿಧನ

ವಾಷಿಂಗ್ಟನ್, ಅಕ್ಟೋಬರ್ 25: ಪ್ರಮುಖ ಯುದ್ಧ ವಿರೋಧಿ ಹೋರಾಟಗಾರ ಟಾಂ ಹೇಡನ್ ಅಮೆರಿಕದಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಬಹಳ ದಿನಗಳಿಂದ ಅವರು ಅನಾರೋಗ್ಯಪೀಡಿತರಾಗಿದ್ದರು ಎಂದು ಪತ್ನಿ ಬಾರ್ಬರ ವಿಲ್ಯಂಸ್ ತಿಳಿಸಿದ್ದಾರೆ. ವಿಯಟ್ನಾಂ ಯುದ್ಧದ ವಿರುದ್ಧ ಧ್ವನಿಯೆತ್ತುವ ಮೂಲಕ ಹೇಡನ್ ಜಗತ್ತಿನ ಗಮನ ಸೆಳೆದಿದ್ದರು. ಯುದ್ಧ ವಿರುದ್ಧದ ಸಂಚಿನಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪವನ್ನು ಹೊರಿಸಲಾಗಿದ್ದ ಶಿಕಾಗೊ ಸೆವೆನ್‌ನ ಸದಸ್ಯರಾಗಿದ್ದ ಅವರು ಕ್ಯಾಲಿಪೋರ್ನಿಯ ಸ್ಟೇಟ್ ಅಸೆಂಬ್ಲಿ ಮತ್ತು ಸೆನೆಟ್‌ನ್ನು ಎರಡು ದಶಕಗಳ ಕಾಲ ಪ್ರತಿನಿಧಿಸಿದ್ದರು. 1933ರಲ್ಲಿ ಅವರು ಮಿಶಿನ್‌ಗನ್‌ನಲ್ಲಿ ಜನಿಸಿದ್ದರು. ನಟಿ ಜೇನ್ ಪೋಂಡಾ ಅವರ ಮೊದಲ ಪತ್ನಿಯಾಗಿದ್ದು, ಇವರಿಬ್ಬರ ದಾಂಪತ್ಯ 1973ರಿಂದ 1990ರವರೆಗೆ ಮುಂದುವರಿದಿತ್ತು. ಅಮೆರಿಕದ ರಾಜಕೀಯ ಸಂಸ್ಥೆಗಳ ಸುಧಾರಣೆಗಾಗಿ ನಿರಂತರ ಲೇಖನಬರೆದು ಧ್ವನಿಯೆತ್ತುವ ಕೆಲಸವನ್ನು ಹೇಡನ್ ಮಾಡಿದ್ದಾರೆಂದು ವರದಿ ತಿಳಿಸಿದೆ.
Next Story





