ಉಪ್ಪಿನಂಗಡಿ: 7ರ ಹರೆಯದ ಬಾಲಕಿಯ ಅತ್ಯಾಚಾರ
![ಉಪ್ಪಿನಂಗಡಿ: 7ರ ಹರೆಯದ ಬಾಲಕಿಯ ಅತ್ಯಾಚಾರ ಉಪ್ಪಿನಂಗಡಿ: 7ರ ಹರೆಯದ ಬಾಲಕಿಯ ಅತ್ಯಾಚಾರ](https://www.varthabharati.in/sites/default/files/images/articles/2016/10/25/53471995.jpg)
ಉಪ್ಪಿನಂಗಡಿ, ಅ.25: ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಉಪ್ಪಿನಂಗಡಿ ಬಳಿಯ 34ನೆ ನೆಕ್ಕಿಲಾಡಿ ಎಂಬಲ್ಲಿ ನಡೆದಿದೆ. ಆರೋಪಿಯ ಮೇಲೆ ಅತ್ಯಾಚಾರ ಹಾಗೂ ಪೊಕ್ಸೊ ಕಾಯ್ದೆಯಡಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
34ನೆ ನೆಕ್ಕಿಲಾಡಿಯ ತಾಳೆಹಿತ್ಲು ಮನೆ ನಿವಾಸಿ ರವಿ (31) ಅತ್ಯಾಚಾರವೆಸಗಿದ ಆರೋಪಿ.
ಈತ ಏಳರ ಹರೆಯದ ಬಾಲಕಿಯೋರ್ವಳನ್ನು ಉಡ ತೋರಿಸುವುದಾಗಿ ನಂಬಿಸಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿಯ ತಾಯಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ಈತನ ಮೇಲೆ ಉಪ್ಪಿನಂಗಡಿ ಪೊಲೀಸರು ಅತ್ಯಾಚಾರ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
Next Story