ಜೈಶ್ ಮುಖ್ಯಸ್ಥ ಮಸೂದ್ ಅಝರ್ ನ ಖಾತೆ ಸೇರಿದಂತೆ 5,100 ಶಂಕಿತ ಉಗ್ರರ ಬ್ಯಾಂಕ್ ಖಾತೆ ಸ್ಥಗಿತ!

ಕರಾಚಿ, ಅ.25 ಪೊಲಿಸ್ ತರಬೇತಿ ಅಕಾಡಮಿಯ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಸರಕಾರ ಜೈಶ್ ಇ ಮುಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ‍್ ಹೊದಿರುವ ಖಾತೆ ಸೇರಿದಂತೆ ಒಟ್ಟು 5, 100 ಶಂಕಿತ ಉಗ್ರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದು, ಖಾತೆಯಲ್ಲಿರುವ ಉಗ್ರರ 400 ಮಿಲಿಯನ್ ರೂ.ಹಣವನ್ನು ವಶಪಡಿಸಿಕೊಂಡಿದೆ.
ಸರಕಾರ ಮುಟ್ಟುಗೋಲು ಹಾಕಿರುವ ಖಾತೆಗಳಲ್ಲಿ ಜೈಶ್ ಇ ಮುಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹಾಗೂ ಅಲ್ಲಾಹ್ ಬಕ್ಸ್ ಮುಖಂಡನ ಪುತ್ರನ ಖಾತೆಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ಸಚಿವಾಲಯದ ಮನವಿಯ ಮೇರೆಗೆ ಪಾಕಿಸ್ತಾನ ಸರಕಾರ ಉಗ್ರರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ.
Next Story





