Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. 60 ಕೋ.ರೂ.ಕೊಟ್ಟು ನಂಬರ್ ಪ್ಲೇಟ್...

60 ಕೋ.ರೂ.ಕೊಟ್ಟು ನಂಬರ್ ಪ್ಲೇಟ್ ಖರೀದಿಸಿದ್ದ ಭಾರತೀಯ ಉದ್ಯಮಿಗೆ ಈಗ ದಂಡ!

ವಾರ್ತಾಭಾರತಿವಾರ್ತಾಭಾರತಿ25 Oct 2016 6:26 PM IST
share
60 ಕೋ.ರೂ.ಕೊಟ್ಟು ನಂಬರ್ ಪ್ಲೇಟ್ ಖರೀದಿಸಿದ್ದ ಭಾರತೀಯ ಉದ್ಯಮಿಗೆ ಈಗ ದಂಡ!

ದುಬೈ,ಅ.25: ಕಳೆದ ತಿಂಗಳು 33 ಮಿಲಿಯ ದಿರ್ಹಾಮ್‌ಗಳನ್ನು ಪಾವತಿಸಿ ತನ್ನ ಕಾರಿಗೆ ಪ್ರತಿಷ್ಠಿತ ಡಿ5 ನಂಬರ್ ಪ್ಲೇಟ್‌ನ್ನು ಖರೀದಿಸಿ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿ ಯಾಗಿದ್ದ ಭಾರತೀಯ ಉದ್ಯಮಿ ಬಲ್ವಿಂದರ್ ಸಾಹ್ನಿ ಅವರು ಅಂಗವಿಕಲರಿಗಾಗಿ ಮೀಸಲಾಗಿದ್ದ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದಕ್ಕಾಗಿ ದಂಡ ಪಾವತಿಸುವ ಮೂಲಕ ಈ ವಾರ ಮತ್ತೆ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದಾರೆ.

ಇಲ್ಲಿಯ ಶೇಖ್ ಝಾಯೆದ್ ರಸ್ತೆಯ ಆಸ್ಪೆನ್ ಟವರ್‌ನ ಹೊರಗೆ ಅಂಗವಿಕಲರಿಗಾಗಿ ಗುರುತಿಸಲಾಗಿರುವ ಪಾರ್ಕಿಂಗ್ ಸ್ಥಳದಲ್ಲಿ ಸಾಹ್ನಿ ಅವರ ಡಿ5 ನಂಬರ್ ಪ್ಲೇಟ್‌ನ ರೋಲ್ಸ್‌ರಾಯ್ ಕಾರನ್ನು ನಿಲ್ಲಿಸಿದ್ದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಪೊಲೀಸರು ಸಾಹ್ನಿಯವರ ಕಾರು ಚಾಲಕನಿಂದ 1,000 ದಿರ್ಹಾಮ್ ದಂಡವನ್ನು ವಸೂಲಿ ಮಾಡಿದ್ದಲ್ಲದೆ,ಆತನಿಗೆ ನಾಲ್ಕು ಕಪ್ಪು ಅಂಕಗಳನ್ನೂ ನೀಡಿದ್ದರು.

 ಈ ಆರೋಪವನ್ನು ತಳ್ಳಿ ಹಾಕಿರುವ ಸಾಹ್ನಿ, ತಾನು ಅಂಗವಿಕಲರಿಗಾಗಿ ಮೀಸಲಾಗಿರುವ ಜಾಗದಲ್ಲಿ ಕಾರನ್ನು ನಿಲ್ಲಿಸಿರಲಿಲ್ಲ ಎಂದು ಹೇಳಿದ್ದಾರೆ. ಕಾರು ಆ ಜಾಗದಲ್ಲಿ ನಿಂತಿರಲಿಲ್ಲ, ಅದನ್ನು ಅಲ್ಲಿಂದ ತುಂಬ ದೂರದಲ್ಲಿ ನಿಲ್ಲಿಸಲಾಗಿತ್ತು. ತಾನೊಂದು ಮೀಟಿಂಗಿನಲ್ಲಿ ಪಾಲ್ಗೊಂಡಿದ್ದೆ ಮತ್ತು ದೊಡ್ಡ ಕ್ಯಾಟ್‌ಲಾಗ್‌ಗಳಿದ್ದ ಹಲವಾರು ಬ್ಯಾಗುಗಳನ್ನು ತಾನು ಸಾಗಿಸಬೇಕಾಗಿತ್ತು. ಹೀಗಾಗಿ ಅವುಗಳನ್ನು ಕಾರಿನಲ್ಲಿ ತುಂಬಲು ಚಾಲಕ ಕೇವಲ 30 ಸೆಕೆಂಡ್‌ಗಳ ಕಾಲ ಅದನ್ನು ನಿಲ್ಲಿಸಿದ್ದ ಎಂದಿದ್ದಾರೆ.

ಕಟ್ಟಡದ ಸೆಕ್ಯೂರಿಟಿ ಮ್ಯಾನೇಜರ್ ಕಾರಿನೊಂದಿಗೆ ನಿಂತುಕೊಂಡಿರುವ ಚಿತ್ರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವ ಸಾಹ್ನಿ, ತನ್ನ ಕಾರು ವಾಸ್ತವದಲ್ಲಿ ಸರಿಯಾದ ಪಾರ್ಕಿಂಗ್ ಸ್ಥಳದಲ್ಲಿ ನಿಂತುಕೊಂಡಿತ್ತು ಎನ್ನುವುದನ್ನು ಈ ಚಿತ್ರವು ತೋರಿಸುತ್ತದೆ. ತಾನು ಕಾನೂನನ್ನು ಗೌರವಿಸುತ್ತೇನೆ,ಆದರೆ ಜನರಿಗೆ ಸತ್ಯವೇನು ಎನ್ನುವುದು ಗೊತ್ತಾಗಬೇಕು.ಕಾರು ನಿಂತುಕೊಂಡಿದ್ದ ಕೆಲವೇ ಗಳಿಗೆಗಳನ್ನು ಚಿತ್ರಿಕರಿಸಿದ್ದು ಮತ್ತು ಜನರಿಗೆ ತಪ್ಪಾಗಿ ಬಿಂಬಿಸಿದ್ದು ದುರದೃಷ್ಟಕರ ಎಂದರು.

ತನ್ನ ಹಕ್ಕುಗಳ ಪ್ರಶ್ನೆ ಬಂದರೆ ತಾನು ಸುಮ್ಮನಿರುವುದಿಲ್ಲ ಎಂದ ಸಾಹ್ನಿ,ಈ ವೀಡಿಯೊವನ್ನು ಅಪ್‌ಲೋಡ್ ಮಾಡಿರುವ ವ್ಯಕ್ತಿಯ ವಿರುದ್ಧ ತಾನು ಪೊಲೀಸ್ ದೂರು ದಾಖಲಿಸಿದ್ದೇನೆ. ಇಂತಹ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಬಾರದು. ತನ್‌ನ ನಂಬರ್ ಪ್ಲೇಟ್ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ ಮತ್ತು ಅದನ್ನು ನಕಾರಾತ್ಮಕ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದುದುಃಖದ ವಿಷಯ ಎಂದು ಹೇಳಿದರು.

ಸಾಹ್ನಿಯವರ ಕಾರಿನ ಚಾಲಕನಿಗೆ ದಂಡ ವಿಧಿಸಿದ್ದನ್ನು ದುಬೈ ಪೊಲೀಸ್‌ನ ಕಮಾಂಡರ್-ಇನ್-ಚೀಫ್ ಲೆಖಾಮಿಸ್ ಮಟ್ಟಾರ್ ಅಲ್ ಮಝೀನಾ ಅವರು ದೃಢಪಡಿಸಿದ್ದಾರೆ. ವೀಡಿಯೊವನ್ನು ನೋಡಿದ ಬಳಿಕ ದಂಡವನ್ನು ವಿಧಿಸಲು ನಿರ್ಧರಿಸಲಾಗಿತ್ತು. ಇಂತಹ ಉಲ್ಲಂಘನೆಗಳು ನಡೆದಾಗ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಪೊಲೀಸ್ ಅಧಿಕಾರಿಗಳು ಕಾರಿನ ನಂಬರ್ ಪ್ಲೇಟ್‌ನ್ನು ನೋಡುವುದಿಲ್ಲ. ಯಾರೇ ಆದರೂ ತಪ್ಪುಜಾಗದಲ್ಲಿ ಪಾರ್ಕಿಂಗ್ ಮಾಡಿದರೆ ದಂಡವನ್ನು ವಿಧಿಸಲಾಗುತ್ತದೆ ಎಂದು ಅವರು ಹೇಳಿದರು.

ದಂಡದ ಕುರಿತು ಮಾತನಾಡಿದ ಸಾಹ್ನಿ, ವೀಡಿಯೊ ಹೇಗೆ ಕಾಣುತ್ತಿದೆ ಎನ್ನುವುದನ್ನು ತಾನು ನೋಡಿದ್ದೇನೆ. ಆದರೆ ಈ ಪ್ರಕರಣವನ್ನು ಇಷ್ಟಕ್ಕೇ ಬಿಡುವುದಿಲ್ಲ. ತಪ್ಪು ಜಾಗದಲ್ಲಿ ತಾನೆಂದೂ ಕಾರು ನಿಲ್ಲಿಸುವುದಿಲ್ಲ,ಹಾಗೆ ಮಾಡಲು ಬೇರೆಯವರಿಗೆ ಉತ್ತೇಜನವನ್ನೂ ನೀಡುವುದಿಲ್ಲ. ಹೀಗಾಗಿ ಪೊಲೀಸರು ಕರೆ ಮಾಡಿ ಘಟನೆಯ ಕುರಿತು ವಿಚಾರಿಸಿದಾಗ ತಂಬ ನಾಚಿಕೆಯಾಗಿತ್ತು ಎಂದರು.

ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ ದುಬೈ ಪೊಲೀಸರು ಅಂಗವಿಕಲರಿಗಾಗಿ ಮತ್ತು ತುರ್ತು ಅಗ್ನಿ ಅಪಘಾತ ನಿರ್ಗಮನಕ್ಕಾಗಿ ಮೀಸಲು ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿದ್ದಕ್ಕಾಗಿ 4215 ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲು ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X