ಗಾಂಜಾ ಮಾರಾಟ ಪ್ರಕರಣದ ಆರೋಪಿಯ ಬಂಧನಕ್ಕೆ ಕೋರ್ಟ್ ಆದೇಶ
ಮಂಗಳೂರು, ಅ. 25: ಗಾಂಜಾ ಮಾರಾಟದ ಆರೋಪದಲ್ಲಿ ಪೊಲೀಸರಿಂದ ಬಂಧಿತನಾಗಿ ಎರಡೆರಡು ಬಾರಿ ಜಾಮೀನು ಪಡೆದಿದ್ದ ಆರೋಪಿಯೋರ್ವನ ಜಾಮೀನನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ರದ್ದುಗೊಳಿಸಿ, ಬಂಧನಕ್ಕೆ ಆದೇಶ ನೀಡಿದೆ.
ಮಂಗಳೂರು ಉತ್ತರ ಠಾಣೆಯ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬಂದರಿನ ಅನ್ಸಾರ್ ರಸ್ತೆಯ ನಿವಾಸಿ ಫಾರೂಕ್ ಗಾಂಜಾ ಮಾರಾಟ ಆರೋಪದಲ್ಲಿ ಎರಡು ಬಾರಿ ಜಾಮೀನು ಪಡೆದಿದ್ದ. ಆದರೂ ತನ್ನ ಕಾನೂನು ಬಾಹಿರ ಚಟುವಟಿಕೆಯನ್ನು ಮುಂದುವರಿಸಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ಉತ್ತರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಅರ್ಜಿಯ ಪರವಾಗಿ ಸರಕಾರಿ ಅಭಿಯೋಜಕರು ಪುಷ್ಪರಾಜ ಅಡ್ಯಂತಾಯ ವಾದ ಮಂಡಿಸಿದ್ದರು.
Next Story





