ಬೈಕ್‌ಗೆ ಪಿಕಪ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಬೈಂದೂರು, ಅ.25: ಬೈಕ್ ಮತ್ತು ಗೂಡ್ಸ್ ಪಿಕಪ್ ವಾಹನ ಢಿಕ್ಕಿಯಿಂದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ 9:30ರ ಸುಮಾರಿಗೆ ಬೈಂದೂರಿನ ಬಿಜೂರು ಎಂಬಲ್ಲಿರುವ ದೇವಪ್ಪ ಬಳೆಗಾರ ಮನೆಯ ಎದುರಿನ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಗುರುರಾಜ ಪೂಜಾರಿ (32) ಎಂದು ಗುರುತಿಸಲಾಗಿದೆ. ಕುಂದಾಪುರ ಕಡೆಯಿಂದ ಬಂದ ಪಿಕಪ್ ವಾಹನ ಹಠಾತ್ತನೆ ರಸ್ತೆಯ ಬಲಭಾಗಕ್ಕೆ ಸರಿದು ಎದುರಿನಿಂದ ಬರುತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಗುರು ಅವರ ತಲೆಗೆ ತೀವ್ರವಾದ ಏಟು ಬಿದ್ದು ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





