ತನ್ನ ಎರಡನೆ ಮದುವೆ ತಪ್ಪಿಸಲು ಈತ ಮಾಡಿದ್ದೇನು ಗೊತ್ತೇ ?

ಶಾರ್ಜಾ,ಅ .25: ಆತ ವಿವಾಹಿತ. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾನೆ. ಅದ್ಯಾಕೋ ಆತನಿಗೆ ಬಲವಂತವಾಗಿ ಎರಡನೆ ಮದುವೆ ಮಾಡಿಸುವ ಪ್ರಯತ್ನ ನಡೆದಿತ್ತು. ಏಶ್ಯದ ಆ ವ್ಯಕ್ತಿಗೆ ಎರಡನೆ ಪತ್ನಿಯ ಅಗತ್ಯ ಇರಲಿಲ್ಲ. ಮನೆಮಂದಿ ಎರಡನೆ ಮದುವೆಗೆ ಒತ್ತಾಯಿಸಿದಾಗ ಆ ತನ್ನ ವೃಷಣಗಳನ್ನು ಕತ್ತರಿಸಿ ಹಾಕಿದ. ಮನೆ ಮಂದಿ ಗಾಬರಿಗೊಂಡರು. ತೀವ್ರ ರಕ್ತಸ್ರಾವದಿಂದ ಕಂಗಾಲಾಗಿದ್ದ ಯುವಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
26ರ ಹರೆಯದ ಯುವಕನ ಸೋದರ ಆತನನ್ನು ಅಲ್ ಕುವೈಟ್ ಆಸ್ಪತ್ರೆಗ ದಾಖಲಿಸುವಾಗ ಕತ್ತರಿಸಲ್ಪಟ್ಟ ವೃಷಣಗಳನ್ನು ಪ್ಲಾಸ್ಟಿಕ್ ಚೀಲದಲ್ಲಿರಿಸಿ ಕೊಂಡೊಯ್ದಿದ್ದ. ಪ್ಲಾಸ್ಟಿಕ್ ಚೀಲದಲ್ಲಿರಿಸಲಾದ ವೃಷಣಗಳನ್ನು ವೈದ್ಯರಿೆ ನೀಡುವಾಗ ಅವರು ಒಮ್ಮೆಲೆ ಬೆಚ್ಚಿಬಿದ್ದರು.
ಈತ ಆತ್ಮಹತ್ಯೆಯ ಉದ್ದೇಶ ಕ್ಕಾಗಿ ಈ ರೀತಿ ಮಾಡಿರಬಹುದೆಂದು ಪೊಲೀಸರು ಆರಂಭದಲ್ಲಿ ಭಾವಿಸಿದ್ದರು. ಆದರೆ ಬಲಂತವಾಗಿ ಮದುವೆ ಮಾಡಿಸಲು ಮನೆಮಂದಿ ಯತ್ನಿಸಿದ್ದಕ್ಕಾಗಿ ತಾನು ವೃಷಣಗಳನ್ನು ಕತ್ತರಿಸಿಕೊಂಡಿರುವುದಾಗಿ ಪೊಲೀಸರಿಗೆ ಆತ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಅಲ್ ಕುವೈಟ್ ಆಸ್ಪತ್ರೆಗೆ ದಾಖಲಾದಾಗ ಗಾಯಾಳು ತನ್ನಿಂದ ಬೇರ್ಪಟ್ಟ ವೃಷಣಗಳ ನ್ನು ಜೋಡಿಸಲು ಆರಂಭದಲ್ಲಿ ಒಪ್ಪಲಿಲ್ಲ. ಬಳಿಕ ಆತನನ್ನು ವೈದ್ಯರು ಮನವೊಲಿಸಿದರು. ಡಾ.ಯೂನಿಸ್ ಅಲ್ ಶಂಸಿ, ಡಾ.ಅಹ್ಮದ್ ಅಬು ಅಲ್ ನಜಾ ನೇತೃತ್ವದ ವೈದ್ಯರ ತಂಡ ಬೇರ್ಪಟ್ಟ ವೃಷಣಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಜೋಡಿಸಿದರು. ಗಾಯಾಳು ಚೇತರಿಸಿಕೊಳ್ಳುತ್ತಿದ್ದಾನೆ.





